ಮುಳ್ಳೇರಿಯ: ಮುಳಿಯಾರ್ ಹಾಗೂ ಚೆಂಗಳ ಪಂಚಾಯಿತಿಗಳನ್ನು ಸಂಪರ್ಕಿಸುವ ಬೋವಿಕಾನ ಎಂಟನೇಮೈಲಿಗಲ್ಲು-ಮಲ್ಲ-ಬೀಟಿಯಡ್ಕ ರಸ್ತೆಯ ಮಲ್ಲ ಸನಿಹದ ರಹಮತ್ ನಗರದಲ್ಲಿ ರಸ್ತೆಬದಿ ಕುಸಿದುಬಿದ್ದಿದ್ದು, ಈ ಹಾದಿಯ ವಹನ ಸಂಚಾರ ಅಪಾಯದ ಭೀತಿ ಎದುರಿಸುತ್ತಿದೆ. ಪಂಚಾಯಿತಿ ರಸ್ತೆ ಇದಗಿದ್ದು, ಪಿಎಂಜಿಎಸ್‍ವೈ ಯೋಜನೆಯನ್ವಯ 3.17 ಕೋಟಿ ರೂ.ವೆಚ್ಚದಲ್ಲಿ ಪ್ರಸಕ್ತ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿದ್ದು, ಎರಡು ವಾರಗಳ ಹಿಂದೆಯಷ್ಟೆ ರಸ್ತೆಯನ್ನು ಉದ್ಘಾಟಿಸಲಾಗಿತ್ತು. ಒಂದು ವಾರದ ಮಳೆಗೇ ರಸ್ತೆಯ ಒಂದು ಪಾಶ್ರ್ವ ಸಂಪೂರ್ಣ ಕುಸಿದಿದೆ.
ರಸ್ತೆ ಕಾಮಗಾರಿ ನಡೆಸುವ ಸಂದರ್ಭ ಅಗತ್ಯ ಸ್ಥಳಗಳಲ್ಲಿ ತಡೆಗೋಡೆ ಹಾಗೂ ಒಳಚರಂಡಿ ನಿರ್ಮಾಣ ಮಾಡದಿರುವುದು ರಸ್ತೆ ಹದಗೆಡಲು ಕಾರಣವಾಗಿದೆ. ಕುಸಿದುಬಿದ್ದ ರಸ್ತೆ ಅಂಚಿಗೆ ಸೂಕ್ತ ತಡೆಗೋಡೆ ನಿರ್ಮಿಸಿ ಪೂರ್ಣಪ್ರಮಾಣದಲ್ಲಿ ರಸ್ತೆ ಹಾಳಾಗುವುದನ್ನು ತಡೆಗಟ್ಟಬೇಕು ಎಂದು ಮುಸ್ಲಿಂಲೀಗ್ ಮಲ್ಲ ವಾರ್ಡು ಸಮಿತಿ ಅಧ್ಯಕ್ಷ ಹಮೀದ್ ಮಲ್ಲ ಹಗೂ ಕರ್ಯದರ್ಶಿ ಶರೀಫ್‍ಮಲ್ಲತ್ ಅವರು ಜಿಲ್ಲಾಧಿಕಾರಿ, ಪಿ.ಎಂ.ಜಿ.ಎಸ್.ವೈ ಎಕ್ಸಿಕ್ಯೂಟಿವ್ ಇಂಜಿನಿಯರ್, ಎಲ್.ಎಸ್.ಜಿ.ಡಿ ಎಕ್ಸಿಕ್ಯೂಟಿವ್ ಇಂಜಿನಿಯರ್‍ಗೆ ಸಲ್ಲಿಸಿದ ಮನವಿಯಲ್ಲಿ ಒತ್ತಯಿಸಿದ್ದಾರೆ. ರಸ್ತೆ ಶೀಘ್ರ ದುರಸ್ತಿಪಡಿಸದಿದ್ದಲ್ಲಿ ಹೋರಟ ನಡೆಸುವುದಾಗಿ ಸಮಿತಿ ಪದಾಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.





