HEALTH TIPS

ಟೀಚರ್ಸ್ ಸ್ಪೋಟ್ರ್ಸ್ ಕೌನ್ಸಿಲ್ ಮಹಾಸಭೆ

                 ಕುಂಬಳೆ: ಟೀಚರ್ಸ್ ಸ್ಪೋಟ್ರ್ಸ್ ಕೌನ್ಸಿಲ್ ಕಾಸರಗೋಡು ಇದರ ಮಹಾಸಭೆ ಪೆರ್ಮುದೆ ಶಾಲೆಯಲ್ಲಿ ಜರಗಿತು.

           ಕೌನ್ಸಿಲ್ ನ ಅಧ್ಯಕ್ಷ ಪೆರ್ಮುದೆ ಶಾಲೆಯ ಮುಖ್ಯೋಪಾಧ್ಯಾಯ ಸದಾಶಿವ ಮಾಸ್ತರ್ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ನಿರಂಜನ ರೈ ಪೆರಡಾಲ ಸ್ವಾಗತಿಸಿ ಕಳೆದ ಸಾಲಿನ ವರದಿ ವಾಚಿಸಿದರು. ಕೋಶಾಧಿಕಾರಿ ಪ್ರದೀಪ್ ಕುಮಾರ್ ಶೆಟ್ಟಿ ಬೇಳ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಕೌನ್ಸಿಲ್ ನ ಮುಂದಿನ ಕಾರ್ಯ ಯೋಜನೆ ಬಗ್ಗೆ ಚರ್ಚಿಸಲಾಯಿತು. ಸಮಿತಿ ಗೌರವ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಪ್ರಶಾಂತ ರೈ ಮಾಸ್ತರ್ ಮಾತನಾಡಿದರು. ಉಪಾಧ್ಯಕ್ಷ ರಘುವೀರ್ ರಾವ್, ಅಶೋಕ್ ಕೊಡ್ಲಮೊಗರು, ಜೊತೆ ಕಾರ್ಯದರ್ಶಿಗಳಾದ ಪೂರ್ಣಚಂದ್ರ, ಹರಿನಾಥ್ ಮಾಸ್ತರ್ ಮತ್ತು ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.

     ಈ ಸಂದರ್ಭ ನೂತನ ಸಮಿತಿ ರೂಪಿಸಲಾಯಿತು. ಗೌರವ ಅಧ್ಯಕ್ಷರುಗಳು: ಉದಯ್ ಕುಮಾರ್ ಶೆಟ್ಟಿ, ಪ್ರಶಾಂತ್ ರೈ ಮಾಸ್ತರ್, ಉದಯ ಸಾರಂಗ್ ಪೆರ್ಲ, ಅಧ್ಯಕ್ಷ: ಸದಾಶಿವ ಬಾಲಮಿತ್ರ, ಪ್ರಧಾನ ಕಾರ್ಯದರ್ಶಿ : ನಿರಂಜನ್ ರೈ ಪೆರಡಾಲ, ಕೋಶಾಧಿಕಾರಿ: ಪ್ರದೀಪ್ ಕುಮಾರ್ ಶೆಟ್ಟಿ ಬೇಳ, ಉಪಾಧ್ಯಕ್ಷರು: ರಘುವೀರ್ ರಾವ್ ಮೀಯಪದವು, ಅಶೋಕ್ ಕೊಡ್ಲಮೊಗರು, ಇಸ್ಮಾಯಿಲ್ ಮಂಜೇಶ್ವರ, ಜತೆ ಕಾರ್ಯದರ್ಶಿ : ಪೂರ್ಣಚಂದ್ರ, ಪ್ರಶಾಂತ್ ಮಾಸ್ತರ್, ಹರಿನಾಥ ಮಾಸ್ತರ್, ರಫೀಕ್ ಮಾಸ್ತರ್ ಪೆರ್ಲ, ವಿವಿಧ ಆಟೋಟಕ್ಕೆ ಸಂಚಾಲಕರನ್ನು  ಮತ್ತು ಕಾರ್ಯಕಾರಿ ಸಮಿತಿ ಸದಸ್ಯರನ್ನ ಆಯ್ಕೆ ಮಾಡಲಾಯಿತು.

          ಕೋಶಾಧಿಕಾರಿ ಪ್ರದೀಪ್ ಕುಮಾರ್ ಶೆಟ್ಟಿ  ವಂದಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries