ಕಾಸರಗೋಡು: ಕೇರಳ ಪೆನ್ಶನರ್ಸ ಸಂಘದ ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ವಿವಿಧ ಬೇಡಿಕೆಗಳೊಂದಿಗೆ ಕಾಸರಗೋಡು ಉಪಖಜಾನೆಯ ಮಂಭಾಗದಲ್ಲಿ ಪ್ರತಿಭಟನೆಯನ್ನು ನಡೆಸಲಾಯಿತು. ಕಾಸರಗೋಡು ನಗರ ಸಭಾ ಸದಸ್ಯೆ ಸವಿತಾ ಟೀಚರ್ ಉದ್ಘಾಟಿಸಿ ಮಾತನಾಡಿ ಪೆನ್ಶನರ್ಸ್ ಸಂಘದ ನ್ಯಾಯಯುತವಾದ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.
ಜಿಲ್ಲಾಧ್ಯಕ್ಷ ಮುತ್ತುಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಂತ್ಯ ಸಮಿತಿ ಸದಸ್ಯ ಶ್ರೀಧರ ಭಟ್, ಮಾಜಿ ಜಿಲ್ಲಾ ಆಧ್ಯಕ್ಷ ಕೇಶವ ಭಟ್, ಜಿಲ್ಲಾ ಕಾರ್ಯದರ್ಶಿ ನಾಗರಾಜ ಬಾಳಿಕೆ, ಉಪಾಧ್ಯಕ್ಷರಾದ ಶ್ರೀಧರ, ಸಹ ಕಾರ್ಯದರ್ಶಿ ಬಾಬು ನೀಲೇಶ್ವರಮ್ ಹಾಗೂ ನೂರಾರು ಮಂದಿ ಭಾಗವಹಿಸಿದ್ದರು. ಬಾಕಿ ಉಳಿದಿರುವ ಸಂಬಳ ಪರಿಷ್ಕರಣೆಯ ಎರಡು ಕಂತುಗಳನ್ನು ಕೂಡಲೇ ನೀಡುವುದು, ನ್ಯಾಯಯುತವಾಗಿ ಸಿಗಬೇಕಾದ 5 ಕಂತು ತುಟ್ಟಿಬತ್ತೆ ಕೂಡಲೇ ನೀಡಬೇಕು, ಮೆಡಿಸೆಪ್ ನ್ಯೂನತೆಗಳನ್ನು ಸರಿಪಡಿಸಬೇಕು ಮೊದಲಾದ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಲಾಯಿತು.





