ಬದಿಯಡ್ಕ: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬಗ್ಗೆ ಸಾಹಿತ್ಯ ಲೋಕದಿಂದ ಮರೆಯಾದ ಯುವ ಕವಯತ್ರಿ ಶ್ವೇತಾ ಕಜೆ ಅವರು ಬರೆದ ಕಟ್ಟಕಡೆಯ ಸಾಹಿತ್ಯ "ಮಾತೃ ಸ್ವರೂಪಿಣಿ" ಎಂಬ ತುಳು ಭಕ್ತಿ ಗೀತೆ ದಯಾ ಕ್ರಿಯೇಶನ್ ನೇತೃತ್ವದಲ್ಲಿ ಶುಕ್ರವಾರ ಸಂಜೆ ಕಟೀಲು ಕ್ಷೇತ್ರದಲ್ಲಿ ಬಿಡುಗಡೆಗೊಂಡಿತು.
ಭಕ್ತಿ ಗೀತೆಯನ್ನು ಲಕ್ಷ್ಮೀನಾರಾಯಣ ಅಸ್ರಣ್ಣ ಕಟೀಲು ಬಿಡುಗಡೆ ಮಾಡಿ ಆಶೀರ್ವದಿಸಿದರು. ಮುಖ್ಯ ಅತಿಥಿಯಾಗಿ ಕರ್ನಾಟಕ ತುಳು ಅಕಾಡೆಮಿ ನಿಕಟ ಪೂರ್ವ ಅಧ್ಯಕ್ಷ ದಯಾನಂದ ಜಿ. ಕತ್ತಲ್ ಸಾರ್ ಉಪಸ್ಥಿತರಿದ್ದರು. ಈ ಸಂದರ್ಭ ದಯಾನಂದ ಅಮೀನ್ ಬಾಯಾರು, ಗಾಯಕಿ ಪ್ರಸಿದ್ಧ ರಾವ್ ಧರ್ಮಸ್ಥಳ, ಕಿಶೋರ್ ಬೆಳ್ತಂಗಡಿ, ಗಣೇಶ್ ಬೋಂಡಾಳ, ರಮಾನಂದ ಪೂಜಾರಿ ಕಟೀಲು, ಗಣೇಶ್ ಪೆರ್ಮುದೆ ಮತ್ತಿತರರು ಉಪಸ್ಥಿತರಿದ್ದರು.
ದಯಾ ಕ್ರಿಯೇಷನ್ ಮೂಲಕ ಹೊರ ಹೊಮ್ಮಿದ ಈ ಹಾಡನ್ನು ದಿವಂಗತ ಶ್ವೇತಾ ಕಜೆ ರಚಿಸಿ ಸಾವನ್ನಪ್ಪುವ ವಾರಗಳ ಹಿಂದೆ ದಯಾ ಕ್ರಿಯೇಶನ್ಸ್ ಗೆ ನೀಡಿದ್ದರು. ಅಲ್ಬಂ ನಲ್ಲಿ ಪ್ರಸಿದ್ಧ ರಾವ್ ಧರ್ಮಸ್ಥಳ ಗಾಯನ-ಅಭಿನಯದಲ್ಲಿದ್ದಾರೆ. ಕಿಶೋರ್ ಬೆಳ್ತಂಗಡಿ ಛಾಯಾಗ್ರಹಣ- ಸಂಕಲನ ನಡೆಸಿದ್ದಾರೆ. ದಯಾನಂದ ಅಮೀನ್ ಬಾಯಾರು ಸಮಗ್ರ ನಿರ್ವಹಣೆಯಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಅಮ್ಮನ ಮಾತೃ ಸ್ವರೂಪಿಣಿ ಭಕ್ತಿ ಗೀತೆ ಯನ್ನು ದಯಾ ಕ್ರಿಯೇಷನ್,ಯೂ.ಟ್ಯೂಬ್ ನಲ್ಲಿ ಆಲಿಸಬಹುದಾಗಿದೆ.




.jpg)
