ತಿರುವನಂತಪುರ: ಕಾಸರಗೋಡು ಜಿಲ್ಲೆಯ ಅಂಗಡಿಮೊUರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ 6 ನೇ ತರಗತಿಯ ವಿದ್ಯಾರ್ಥಿನಿ ಆಯೆಶತ್ ಮಿನ್ಹಾ ಶಾಲಾ ಪರಿಸರದ ಅಪಾಯಕಾರಿ ಮರ ಬಿದ್ದು ಸಾವನ್ನಪ್ಪಿದ ಘಟನೆಯ ಹಿನ್ನೆಲೆಯಲ್ಲಿ ಶಾಲೆಯ ಪ್ರಾಂಶುಪಾಲರು ಮತ್ತು ಮುಖ್ಯ ಶಿಕ್ಷಕರನ್ನು ವರ್ಗಾವಣೆ ಮಾಡಲಾಗಿದೆ ಎಂದು ರಾಜ್ಯ ವಿದ್ಯಾಭ್ಯಾಸ ನಿರ್ದೇಶಕರ ಕಚೇರಿ ತಿಳಿಸಿದೆ.
ಪ್ರಾಂಶುಪಾಲೆ ಸಂಪೂರ್ಣ ಹೆಚ್ಚುವರಿ ಪ್ರಭಾರತೆಯೊಂದಿಗೆ ವಿ.ಇ. ಮಂಜು ಅವರನ್ನು ವಯನಾಡು ಅಚೂರು ಸರ್ಕಾರಿ ಶಾಲೆಗೆ ವರ್ಗಾಯಿಸಲಾಗಿದೆ. ಮುಖ್ಯೋಪಾಧ್ಯಾಯಿನಿ ಶೀಬಾ. ಬಿ ಅವರನ್ನು ಜಿಎಚ್‍ಎಸ್‍ಎಸ್ ಬಂದಡ್ಕಕ್ಕೆ ವರ್ಗಾವಣೆ ಮಾಡಲಾಗಿದೆ.




.jpg)
