ಸಮರಸ ಚಿತ್ರಸುದ್ದಿ: ಕಾಸರಗೋಡು: ನೇಪಾಳದಲ್ಲಿ ಜರುಗಿದ ಇಂಡೋ ನೇಪಾಳ ತೈಕೊಂಡ ಚಾಂಪಿಯನ್‍ಶಿಪ್‍ನಲ್ಲಿ ಸ್ವರ್ಣ ಪದಕ ವಿಜೇತೆ ಕುಮಾರಿ ದೀಕ್ಷ ನಾಂಗುರಿ ಅವರನ್ನು ಕಾಸರಗೋಡು ಕೂಡ್ಲು ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಟ್ರಸ್ಟ್ ವತಿಯಿಂದ ಶಾಲುಹೊದಿಸಿ ಸ್ಮರಣಿಕ ನೀಡಿ ಗೌರವಿಸಲಾಯಿತು. ಟ್ರಸ್ಟ್ ಆಡಳಿತ ಮೊಕ್ತೇಸರರಾದ ಕಿರಣ್ ಪ್ರಸಾದ್ ಕೂಡ್ಲು ಹಾಗೂ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.


