ಕಾಸರಗೋಡು: ಪ್ರೆಸ್ ಕ್ಲಬ್‍ನ ಕೆಎಂ ಅಹಮದ್ ಸೆಂಟರ್ ಫಾರ್ ಮೀಡಿಯಾ ಸ್ಟಡೀಸ್ ಅಂಡ್ ರಿಸರ್ಚ್ ವತಿಯಿಂದ 'ಮಾಧ್ಯಮ ಕಾರ್ಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ ಬಳಕೆ' ಎಂಬ ವಿಷಯದ ಕುರಿತು ಕಾರ್ಯಾಗಾರ ಜುಲೈ 11ರಂದು ಬೆಳಗ್ಗೆ 9ಕ್ಕೆ ಕಾಸರಗೋಡು ಪ್ರೆಸ್‍ಕ್ಲಬ್ ವಠಾರದ ಕಾಸರಗೋಡು ಸರ್ವೀಸ್ ಕೋ ಆಪರೇಟಿವ್ ಬ್ಯಾಂಕ್ ಸಭಾಂಗಣದಲ್ಲಿ ಜರಗಲಿದೆ.
ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಕಾರ್ಯಾಗಾರ ಉದ್ಘಾಟಿಸುವರು. ಮಾತೃಭೂಮಿ ಆನ್‍ಲೈನ್ ಸಲಹೆಗಾರ ಸುನೀಲ್ ಪ್ರಭಾಕರ್ ತರಗತಿ ನಡೆಸುವರು. ಪಾಲ್ಗೊಳ್ಳುವವರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಮಾಧ್ಯಮ ಕಾರ್ಯಕರ್ತರು ಮತ್ತು ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶವಿದೆ. ಪತ್ರಿಕೋದ್ಯಮ ವಿದ್ಯಾರ್ಥಿಗಳು ನೇರವಾಗಿ ಅಥವಾ ವಿಭಾಗದ ಮುಖ್ಯಸ್ಥರ ಮೂಲಕ ಪ್ರೆಸ್‍ಕ್ಲಬ್ ನಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು. ಮೊದಲು ನೋಂದಾಯಿಸಿದ 100 ಮಂದಿಗೆ ಪಾಲ್ಗೊಳ್ಳಲು ಅವಕಾಶವಿದೆ.
ಜುಲೈ 8ರ ಮೊದಲು ದೂರವಾಣಿ ಸಂಖ್ಯೆ(944665296)ಗೆ ಕರೆಮಾಡಿ ಅಥವಾ ಖುದ್ದಾಗಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು. ಕೃತಕ ಬುದ್ಧಿಮತ್ತೆ ಅಪ್ಲಿಕೇಶನ್‍ಗಳನ್ನು ಪ್ರಸಕ್ತ ಉತ್ತಮ ಕಥೆಗಳನ್ನು ರಚಿಸಲು, ಡೇಟಾ ವಿಶ್ಲೇಷಿಸಲು ಮತ್ತು ಭಾಷೆಯ ಅಂತರವನ್ನು ಪರಿಹರಿಸಲು ಬಳಸಲಾಗುತ್ತಿದೆ. ಇದು ಪತ್ರಕರ್ತರಿಗೆ ಹೆಚ್ಚಿನ ವೇಗ ಮತ್ತು ನಿಖರತೆಯಿಂದ ಕೆಲಸ ಮಾಡಲು ಅನುವು ಮಾಡಿಕೊಡುತ್ತದೆ. ಜಿಲ್ಲೆಯ ಮಾಧ್ಯಮ ಕಾರ್ಯಕರ್ತರಿಗೆ ಕೃತಕ ಬುದ್ಧಿಮತ್ತೆಯ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಮತ್ತು ಬಳಸಿದ ಉಪಕರಣಗಳ ಪ್ರಾಯೋಗಿಕ ತರಬೇತಿ ಪಡೆಯಲು ಅವಕಾಶವನ್ನು ಒದಗಿಸುವುದು ಇದರ ಉದ್ದೇಶವಾಗಿದೆ.

.jpg)
