ಕಾಸರಗೋಡು: ವಿದ್ಯಾನಗರದಿಂದ ಚಾಲ ತೆರಳುವ ರಸ್ತೆ ಸಂಪೂರ್ಣ ಶಿಥಿಲಗೊಂಡಿದ್ದು, ಶೀಘ್ರ ದುರಸ್ತಿ ನಡೆಸುವಂತೆ ಸ್ಥಳೀಯ ನಾಗರಿಕರು ಹಾಗೂ ಆಟೋ ಚಾಲಕರು ಪ್ರತಿಭಟನೆ ನಡೆಸಿದರು. ಕಣ್ಣೂರು ವಇಶ್ವ ವಇದ್ಯಾಲಯದ ಬಿ-ಇಡಿ ಸೆಂಟರ್, ಬೆದಿರ ಹಿರಿಯ ಪ್ರಾಥಮಿಕ ಶಾಲೆ, ಪ್ರಮುಖ ರಾಜಕೀಯ ಪಕ್ಷವೊಂದರ ಕಚೇರಿ, ಹಲವು ಮನೆಗಳು ಈ ಪ್ರದಶದಲ್ಲಿದ್ದು, ವಿದ್ಯಾರ್ಥಿಗಳು ಸೇರಿದಮತೆ ನೂರರು ಜನರು ಈ ಹಾದಿಯಾಗಿ ಸಂಚರಿಸುತ್ತಿದ್ದಾರೆ. ಆಟೋಚಾಲಕರೂ ಈ ಹಾದಿಯಾಗಿ ಬಾಡಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ವಾಹನದಲ್ಲಿ ತೆರಳುವುದು ಬಿಟ್ಟು, ಈ ಹದಿಯಾಗಿ ಕಾಲ್ನಡಿಗೆಯಲ್ಲಿ ಸಂಚರಿಸುವುದೂ ದುಸ್ತರವಾಗಿರುವುದಾಗಿ ಪ್ರತಿಭಟನಾಕಾರರು ತಿಳಿಸಿದ್ದಾರೆ.
ಅಧಿಕಾರಿಗಳ ಕಣ್ಣು ತೆರೆಸುವ ನಿಟ್ಟಿನಲ್ಲಿ ರಸ್ತೆಯಲ್ಲಿ ಆಟೋಚಲಕರು ಹಾಗೂ ಸ್ಥಳೀಯ ನಾಗರಿಕರು ಪ್ಲೇಕಾರ್ಡ್ ಹಿಡಿದು ಪ್ರತಿಭಟನೆ ಸೂಚಿಸಿದರು. ರಾಜುಕೃಷ್ಣನ್, ಕುಮಾರನ್, ಅಬ್ದುಲ್ಲ ಚಾಲ, ಬಶೀರ್, ಜಾಫರ್, ಅಲಿಜಬ್ಬರ್, ಹನೀಫ್ ನೇತೃತ್ವ ನೀಡಿದರು.

