ಕಾಸರಗೋಡು: ಮಳೆಬಿರುಸುಗೊಳಳುತ್ತಿದ್ದಂತೆ ಜಿಲ್ಲೆಯ ನಾನಾ ಕಡೆ ಸಮುದ್ರ ಕೊರೆತ ಸಮಸ್ಯೆ ಅತಿಯಾಗಿದೆ. ತ್ರಿಕ್ಕನ್ನಡ್ ಕಡಪ್ಪುರದಲ್ಲಿ ಸಮುದ್ರಕೊರೆತ ಪ್ರದೇಶಕ್ಕೆ ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಭೇಟಿ ನೀಡಿ, ಸಮುದ್ರಕೊರೆತ ಭೀತಿ ಎದುರಿಸುತ್ತಿರುವ ಪ್ರದೇಶದ ಜನತೆಗೆ ಶಾಶ್ವತ ವಸತಿ ಬೇಡಿಕೆಯನ್ನು ಪರಿಶೀಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು. ಕಡಲತೀರದಲ್ಲಿ ವಾಸಿಸುವವರು ಶಿಬಿರಕ್ಕೆ ತೆರಳಲು ವಿಸಮ್ಮತಿಸುವವರನ್ನು ಸಮೀಪದ ಶಾಲೆಗಳಲ್ಲಿ ತೆರೆದಿರುವ ಶಿಬಿರಗಳಿಗೆ ಸಥಳಾಂತರಿಸಲಾಗುವುದು. ಬಿರುಸಿನ ಗಾಳಿಗೆ ಹದಿನೈದನೇ ವಾರ್ಡು ನಿವಾಸಿಗಳಾದ ಮುಲ್ಲಾ ಮತ್ತು ಚಿನ್ನಮ್ಮಾಳ್ ಅವರ ಮನೆ, ರಮಣಿ ಅವರ ಅಡುಗೆ ಶೆಡ್ ಕೂಡ ಧ್ವಂಸಗೊಂಡಿದೆ. ಈ ಪ್ರದೇಶದ 18 ತೆಂಗಿನ ಮರಗಳು ಧರಾಶಾಯಿಯಾಗಿದೆ.
ಹೊಜದುರ್ಗ ತಹಸೀಲ್ದಾರ್ ಎನ್.ಮಣಿರಾಜ್, ಹೆಡ್‍ಕ್ವಾರ್ಟರ್ಸ್ ಉಪ ತಹಸೀಲ್ದಾರ್ ಲೈಜಿನ್, ಉದುಮ ಪಂಚಾಯಿತಿ ಅಧ್ಯಕ್ಷೆ ಪಿ.ಲಕ್ಷ್ಮಿ, ವಾರ್ಡ್ ಸದಸ್ಯೆ ಶೈನಿಮೋಳ್, ಗ್ರಾಮಾಧಿಕಾರಿ ಎಸ್.ಶ್ರೀಜಾ, ಗ್ರಾಮ ಸಹಾಯಕ ಪ್ರಕಾಶ್, ಸಹಾಯಕ ಗ್ರಾಮಾಧಿಕಾರಿ ಪ್ರದೀಪ್ ಜಿಲ್ಲಾಧಿಕಾರಿ ಜತೆಗಿದ್ದರು.
ಇದೇ ಸಂದರ್ಭ ಭೂಕುಸಿತ ಉಂಟಗಿರುವ ವೀರಮಲೆ ಗುಡ್ಡೆಗೆ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಹಾಗೂ ತೃಕ್ಕರಿಪುರ ಶಾಸಕ ಎಂ.ರಾಜಗೋಪಾಲನ್ ಭೇಟಿ ನೀಡಿದರು.
ಮುಂದುವರಿದ ಬಿರುಸಿನ ಮಳೆ-ಮರ ಬಿದ್ದು ಹನಿ
ಕಾಸರಗೋಡು: ಜಿಲ್ಲೆಯಲ್ಲಿ ಬಿರುಸಿನ ಮಳೆ ಮುಂದುವರಿದಿದ್ದು, ವಿವಿಧೆಡೆ ಅಪಾರ ನಾಶನಷ್ಟ ಸಂಭವಿಸಿದೆ. ಜಿಲ್ಲೆಯ ಹೊಳೆಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದು, ಜತೆಗೆ ಬಿರುಸಿನ ಮಳೆಯಾಗುತ್ತಿರುವುದರಿಂದ ತಗ್ಗು ಪ್ರದೇಶದ ಜನತೆ ಆತಂಕದಲ್ಲಿ ಕಾಲ ಕಳೆಯುವಂತಾಗಿದೆ. ಉದುಮ ಕೊಪ್ಪಳ್ ಎಂಬಲ್ಲಿ ಬಿರುಸಿನ ಗಾಳಿಗೆ ಬೃಹತ್ ಮರ ಕುಸಿದುಬಿದ್ದು, ಸನಿಹದ ಗುಳಿಗದೈವಸ್ಥಾನ ಹಾಗೂ ಹೈಟೆನ್ಶನ್ ವಿದ್ಯುತ್ ತಂತಿಗೂ ಹಾನಿಯುಂಟಾಗಿದೆ. ಇದರಿಂದ ಅರು ವಿದ್ಯುತ್ ಕಂಬಗಳು ಧರಾಶಾಯಿಯಾಗಿದೆ. ನಿರಂತರ ಮಳೆಯಗುತ್ತಿರುವ ಹಿನ್ನೆಲೆಯಲ್ಲಿ ಜುಲೈ 4ರಿಂದ ಜಿಲ್ಲೆಯಲ್ಲಿ ಕಲೇಜು ಹೊರತುಪಡಿಸಿ ಶಿಕ್ಷಣ ಸಂಸ್ಥೆಗಳಿಗೆ ರಜೆ ಸಾರಲಾಗಿತ್ತು.
ಅರೆಂಜ್ ಅಲರ್ಟ್:
ಕಾಸರಗೊಡು ಜಿಲ್ಲೆಯಲ್ಲಿ ಜು.6ರಂದು ಆರೆಂಜ್ ಅಲರ್ಟ್ ಘೋಷಿಸಿ ಕೇಂದ್ರ ಹವಾಮಾನ ಇಲಾಖೆ ಆದೇಶ ಜಾರಿಗೊಳಿಸಿದೆ. ನಿಗದಿತ ಪ್ರದೇಶಗಳಲ್ಲಿ ಬಿರುಸಿನ ಮಳೆಯಾಗುವ ಸಾಧ್ಯತೆಯಿದೆ. ಜುಲೈ 7 ಮತ್ತು 8 ರಂದು ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
: ಬಿರುಸಿನ ಮಳೆಗೆ ಬೇಕಲ ಸನಿಹದ ತೃಕ್ಕನ್ನಾಡ್ ಕಡಪ್ಪುರದಲ್ಲಿ ಅತಿಯಾದ ಸಮುದ್ರಕೊರೆತ ಕಾಣಿಸಿಕೊಂಡ ಪರಿಣಾಮ ಮನೆಯೊಂದು ಸಮುದ್ರಪಾಲಗುವ ಭೀತಿ ಎದುರಿಸುತ್ತಿದೆ. ಈ ಪ್ರದೇಶದಿಂದ ಹಲವರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ.
: ಭೂಕುಸಿತ ಉಂಟಾಗಿರುವ ತ್ರಿಕ್ಕರಿಪುರ ವೀರಮಲೆಗುಡ್ಡೆಗೆ ಶಾಸಕ ಎಂ. ರಅಜಗೋಪಾಲನ್ ಹಾಗೂ ಜಿಲ್ಲಾಧಿಕರಿ ಇನ್ಬಾಶೇಖರ್ ಭೇಟಿ ನೀಡಿದರು.



