ಕಾಸರಗೋಡು: ಮಂಜೆಶ್ವರ ಅಬಕರಿ ಚೆಕ್‍ಪೋಸ್ಟ್ ಅಧಿಕಾರಿಗಳು ಕರ್ನಾಟಕ ರಸ್ತೆಸಾರಿಗೆ ಸಂಸ್ಥೆ ಬಸ್‍ನಲ್ಲಿ ನಡೆಸಿದ ತಪಸಣೆಯಲ್ಲಿ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ41.78ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದಾರೆ.
ಮಂಗಳೂರಿನಿಂದ ಕಾಸರಗೋಡಿಗೆ ಅಗಮಿಸುತ್ತಿದ್ದ ಕೆಎಸ್ಸಾರ್ಟಿಸಿ ಬಸ್‍ನಲ್ಲಿ ಅಬಕಾರಿ ನಿರೀಕ್ಷಕ ಎಂ. ಯೂನಸ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ. ಪ್ರಕರಣಕ್ಕೆ ಸಂಬಂಧಿಸಿ ಹೊನ್ನಾವರದ ಅರೋಲಿ ನಿವಾಸಿ ಪ್ರಕಾಶ್ ವಿನಾಯಕ್ ಶೇಟ್ ಎಂಬಾತನನ್ನು ಬಂಧಿಸಲಾಗಿದೆ. ಶರೀರದ ಬಟ್ಟೆಸಂದಿಯಲ್ಲಿ ಹಾಗೂ ಬ್ಯಾಗಿನಲ್ಲಿ ಈ ಹಣ ಸಾಗಿಸಲಾಗುತ್ತಿತ್ತು. ಹಣದ ಮೂಲದ ಬಗ್ಗೆ ಸೂಕ್ತ ದಾಖಲೆ ಒದಗಿಸದ ಹಿನ್ನೆಲೆಯಲ್ಲಿ ಈತನಿಂದ ಹಣ ವಶಪಡಿಸಿ, ಬಂಧಿಸಲಾಗಿದೆ. ಅಬಕಾರಿ ನಿರೀಕ್ಷಕ ಎಂ. ಯೂನಸ್, ವಿ.ವಿ. ಪ್ರಸನ್ನಕುಮಾರ್, ಪ್ರಿವೆಂಟಿವ್ ಆಫೀಸರ್‍ಗಳಾದ ಜನಾರ್ದನನ್, ಸುರೇಶ್ ಬಾಬು, ಸಿವಿಲ್ ಅಬಕಾರಿ ಅಧಿಕಾರಿಗಳಾದ ಮಹಮ್ಮದ್ ಇಜಾಜ್, ಮಂಜುನಾಥನ್, ಅಖಿಲೇಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.ಪ್ರಕರಣವನ್ನು ಮಂಜೇಶ್ವರ ಠಾಣೆ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.



