ಕಾಸರಗೋಡು: ಜಿಲ್ಲಾ ಯೋಗ ಅಸೋಸಿಯೇಶನ್ ಹಾಗೂ ಜಿಲ್ಲಾ ಸ್ಪೋಟ್ರ್ಸ್ ಕೌನ್ಸಿಲ್ ಆಯೋಜಿಸಿರುವ ಜಿಲ್ಲಾ ಕ್ರೀಡಾ ಯೋಗ ಚಾಂಪಿಯನ್‍ಶಿಪ್ ಜುಲೈ 8ರಂದು Áಸರಗೋಡು ಮುನ್ಸಿಪಲ್ ಟೌನ್ ಹಾಲ್‍ನಲ್ಲಿ ಜರುಗಲಿರುವುದಾಗಿ ಚಾಂಪಿಯನ್‍ಶಿಪ್ ಆಯೋಜನಾ ಸಮಿತಿಯ ಅಧ್ಯಕ್ಷ, ಶಾಸಕ ಸಿ.ಎಚ್.ಕುಞಂಬು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ರಾಷ್ಟ್ರೀಯ ಮಟ್ಟದವರೆಗೆ ಸ್ಪರ್ಧಿಸಬಹುದಾದ ಪಠ್ಯಕ್ರಮದ ಪ್ರಕಾರ ಸ್ಪರ್ಧೆಯು 8 ರಿಂದ 18 ವರ್ಷದ ವರೆಗಿನ ಸಬ್‍ಜೂನಿಯರ್ ವಿಭಾಗ ಮತ್ತು ಮತ್ತು 18ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ವಯಸ್ಸಿನವರಿಗೆ ಸ್ಪರ್ಧೆ ಮುಕ್ತವಾಗಿರಲಿದೆ. ಜಿಲ್ಲಾ ಸ್ಪರ್ಧೆಯಲ್ಲಿ ಪ್ರತಿ ವಿಭಾಗದಿಂದ ಇಬ್ಬರು ಪುರುಷ ಮತ್ತು ಮಹಿಳಾ ಆಟಗಾರರು ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಇದರೊಂದಿಗೆ ಸಬ್ ಜೂನಿಯರ್ ಮತ್ತು ಜೂನಿಯರ್ ವಿಭಾಗಗಳಿಗೆ ಕಲಾತ್ಮಕ ಏಕವ್ಯಕ್ತಿ, ಕಲಾತ್ಮಕ ಜೋಡಿ, ಲಯಬದ್ಧ ಜೋಡಿ ಮತ್ತು ಮುಕ್ತ ಹರಿವಿನ ನೃತ್ಯದಿಂದ ಕೂಡಿದ ಸ್ಪರ್ಧೆ ಇರಲಿದೆ.
8ರಂದು ಬೆಳಗ್ಗೆ ಚಾಂಪಿಯನ್‍ಶಿಪ್ ಅನ್ನು ಶಾಸಕ ಸಿ.ಎಚ್.ಕುಂಜಂಬು ಉದ್ಘಾಟಿಸುವರು. ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಸಂಜೆ ನಡೆಯುವ ಸಮಾರೋಪ ಸಮಾರಂಭವನ್ನು ಶಾಸಕ ಎನ್.ಎ.ನೆಲ್ಲಿಕುನ್ನು ಉದ್ಘಾಟಿಸುವರು.
ಸ್ಪರ್ಧೆಯಲ್ಲಿ ಭಾಗವಹಿಸುವವರು 9495654737, 9495051062 ಮತ್ತು 9847563289 ಸಂಖ್ಯೆಗಳಲ್ಲಿ ನೋಂದಾಯಿಸಿಕೊಳ್ಳಬಹುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಚಾಲಕ ಪಿ.ಪಿ.ಸುಕುಮಾರನ್, ಪಿ.ಪಿ.ರಾಜನ್, ಕೆ.ವಿ.ಗಣೇಶ್, ಎಂ.ವಿ.ನಾರಾಯಣನ್, ಅಶೋಕ್ ರಾಜ್ ಉಪಸ್ಥಿತರಿದ್ದರು.

