ಕಾಸರಗೋಡು: ವೆಸ್ಟ್ ಎಲ್ಲೇರಿ ಗ್ರಾಮ ಪಂಚಾಯಿತಿಯ ಪ್ರಸಕ್ತ ವಾರ್ಷಿಕ ಯೋಜನೆಯಲ್ಲಿ ಅಳವಡಿಸಿ ಪಂಚಾಯಿತಿ ವ್ಯಾಪ್ತಿಯ ಎಲ್ಲ ಹಸಿರು ಕ್ರಿಯಾ ಸೇನೆಯ ಸದಸ್ಯರಿಗೆ ರೈನ್ ಕೋಟ್ ಮತ್ತು ಕೈಗವಚಗಳನ್ನು ವಿತರಿಸಲಾಯಿತು.
ಶುಚೀಕರಣ ಪ್ರಕ್ರಿಯೆಯಲ್ಲಿ ನಿರಂತರ ಕಾರ್ಯವೆಸಗುತ್ತಿರುವ ಹಸಿರು ಕ್ರಿಯಾ ಸೇನೆ ಸದಸ್ಯರಿಗೆ ಮಳೆಯಿಂದ ರಕ್ಷಣೆ ಪಡೆಯಲು ಹಾಗೂ ಕೈಗಳ ಶುಚೀಕರಣ ಪಾಳಿಸುವ ನಿಟ್ಟಿನಲ್ಲಿ ರೈನ್ ಕೋಟ್ ಮತ್ತು ಕೈಗವಚ ವಿತರಿಸಲಾಗುತ್ತಿದೆ.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪಿ.ಸಿ.ಇಸ್ಮಾಯಿಲ್ ಸಮಾರಂಭ ಉದ್ಘಾಟಿಸಿ, ರೈನ್ ಕೋಟ್ ಮತ್ತು ಕೈಗವಚ ವಿತರಿಸಿದರು. ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಮೋಳಿಕುಟ್ಟಿ ಪೌಲ್ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಬಿಂದು ಮುರಳೀಧರನ್, ಟಿ.ಎ.ಜೇಮ್ಸ್, ಶಾಂತಿ ಕೃಪಾ, ಎಂ.ವಿ.ಲಿಜಿನಾ, ಸಿ.ವಿ.ಅಖಿಲಾ, ಸಿಡಿಎಸ್ ಅಧ್ಯಕ್ಷೆ ಸೌದಾಮಿನಿ ವಿಜಯನ್, ಸಹಾಯಕ ಕಾರ್ಯದರ್ಶಿ ಕೆ.ಜೆ.ಪಾಲ್, ವಿಇಒಗಳಾದ ಸುರೇಶ್ ಕುಮಾರ್, ಸಂದೀಪ್ ಕುಮಾರ್ ಎಸ್ಪಿ, ಹಸಿರು ಕ್ರಿಯಾ ಸೇನಾ ಸದಸ್ಯರು ಪಾಲ್ಗೊಂಡಿದ್ದರು.





