ಕೊಟ್ಟಾಯಂ: ಸಿಐಟಿಯು ಪ್ರತಿಭಟನಾರ್ಥ ಧ್ವಜ ಕಟ್ಟಿದ ಬಸ್ ನಲ್ಲಿ ಆಗಮಿಸಿ, ಭಾರಿ ಮಳೆ ಹಾಗೂ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದ ಜನರಿಗೆ ಬಿಜೆಪಿ ಸಾಂತ್ವನ ನೀಡಿದ ಅಪೂರ್ವ ಘಟನೆ ನಡೆದಿದೆ.
ಸಿಐಟಿಯು ಮತ್ತು ಸಿಪಿಎಂಗೆ ನಿಖರ ಉತ್ತರ ನೀಡುವ ಮೂಲಕ ಬಿಜೆಪಿ ಈ ಕ್ರಮಕ್ಕೆ ಮುಂದಾಯಿತು ಎನ್ನಲಾಗಿದೆ. ಬಿಜೆಪಿ ಕೊಟ್ಟಾಯಂ ಜಿಲ್ಲಾಧ್ಯಕ್ಷ, ಬಸ್ ಮಾಲಕ ರಾಜಮೋಹನ್ ಮತ್ತು ಕಾರ್ಯಕರ್ತರು ಪರಿಹಾರ ನೆರವಿನೊಂದಿಗೆ ಶಿಬಿರವನ್ನು ತಲುಪಿ ಪರಿಹಾರ ಕಿಟ್‍ಗಳು ಮತ್ತು ಇತರ ಅಗತ್ಯ ವಸ್ತುಗಳನ್ನು ಹಸ್ತಾಂತರಿಸಿದರು. ಬಿಜೆಪಿ ಕೊಟ್ಟಾಯಂ ಜಿಲ್ಲಾ ಸಮಿತಿ ನೆರವಿನ ಹಸ್ತದೊಂದಿಗೆ ಸಿಪಿಎಂ ಆಡಳಿತವಿರುವ ಪಂಚಾಯತ್‍ನ ಪರಿಹಾರ ಶಿಬಿರವನ್ನು ತಲುಪಿತು.
ಕೊಟ್ಟಾಯಂ ಪ್ರವಾಹ ಮುಕ್ತವಾಗಿದೆ ಎಂಬುದು ಸರ್ಕಾರದ ಹೇಳಿಕೆಯಾಗಿತ್ತು, ಆದರೆ ಇದು ಪೊಳ್ಳು ವಾದ ಎಂದು ಬಿಜೆಪಿ ಸಾಬೀತುಪಡಿಸಿದೆ ಎಂದು ಹೇಳಲಾಗಿದೆ. ಸಿಪಿಎಂ ಆಡಳಿತವಿರುವ ಕುಮಾರಕಂ ಪಂಚಾಯಿತಿಗೆ ಬಿಜೆಪಿ ಪ್ರವೇಶಿಸಿದೆ. ಈ ಸ್ಥಳಗಳಿಗೆ ಸಣ್ಣ ವಾಹನಗಳು ಬರಲು ತುಂಬಾ ಕಷ್ಟವಾಗಿದೆ. ಇದರೊಂದಿಗೆ ಪರಿಹಾರ ನೆರವು ನಾಮಮಾತ್ರಕ್ಕೆ ಕೊನೆಗೊಂಡಿದೆ. ಇಲ್ಲಿ ಬಿಜೆಪಿ ಮತ್ತು ರಾಜಮೋಹನ್ ತಮ್ಮ ಬಸ್ಸಿನೊಂದಿಗೆ ರಂಗ ಪ್ರವೇಶಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಲಿಜಿನ್ ಲಾಲ್ ನೇತೃತ್ವದಲ್ಲಿ ಕಾರ್ಯಕರ್ತರು ರಾಜಮೋಹನ್ ಅವರ ಬಸ್ ನಲ್ಲಿ ವಾಹನಗಳು ಬರದ ಸ್ಥಳಗಳಿಗೆ ಅಗತ್ಯ ವಸ್ತುಗಳನ್ನು ತಲಪಿಸಿದರು. ಸಿಐಟಿಯು ರಾಜಮೋಹನ್ ಅವರನ್ನು ಶೋಷಕ ಮತ್ತು ರೌಡಿ ಎಂದು ಹೆಸರಿಸಿತು. ಇದೇ ವೇಳೆಗೆ ಸಿಐಟಿಯು ವಾದವನ್ನು ತಳ್ಳಿ ನೈಜತೆ ತೋರಿಸಲು ಬಿಜೆಪಿ ತಂಡ ರಾಜಮೋಹನ್ ಅವರ ಬಸ್ ನಲ್ಲಿ ಪರಿಹಾರ ಶಿಬಿರ ತಲುಪಿತು.
ಖಾಸಗಿ ಬಸ್ ಮುಂದೆ ಸಿಐಟಿಯು ಕಾರ್ಯಕರ್ತರು ಧ್ವಜಾರೋಹಣ ಮಾಡಿದ ನಂತರ, ಬಸ್ ಮಾಲೀಕ ರಾಜಮೋಹನ್ ತಮ್ಮ ಬಸ್ ಮುಂಭಾಗದಲ್ಲಿ ಟೈಮ್ಸ್ ಸ್ಕ್ವೇರ್ ಲಕ್ಕಿ ಸೆಂಟರ್ ಹೆಸರಿನಲ್ಲಿ ಲಾಟರಿ ಮಾರಾಟ ಮಾಡಲು ಪ್ರಾರಂಭಿಸಿದ್ದರು. ರಾಜಮೋಹನ್ ಗಲ್ಫ್ ನಿಂದ ಹಿಂತಿರುಗಿ 4 ಬಸ್ ಸೇವೆ ನಡೆಸುತ್ತಿದ್ದರು. ಆದರೆ ಸಿಐಟಿಯು ಕಾರ್ಮಿಕರು ಸಂಬಳ ಹೆಚ್ಚಳ ಬೇಡಿಕೆ ಮುಂದಿರಿಸಿ ಸಿಐಟಿಯು ಬಸ್ ಎದುರು ಧರಣಿ ಆರಂಭಿಸಿತ್ತು.


