ಮಂಜೇಶ್ವರ: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಕಡಂಬಾರ್ ಬಜ ಎಂಬಲ್ಲಿ ಚಾಲಕನಿಗೆ ಬಂದೂಕು ತೋರಿಸಿ ಲಾರಿ ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿ ಮೀಯಪದವು ನಿವಾಸಿ ರಹೀಂ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಈತನ ವಶದಲ್ಲಿದ್ದ ಒಂದು ಬಂದೂಕು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
2023ರ ಫೆ. 22ರಂದು ಕಡಂಬಾರ್ ಬಜ ಎಂಬಲ್ಲಿ ತಂಡವೊಂದು ಬಂದೂಕು ತೋರಿಸಿ ಎರಡು ಲಾರಿಗಳನ್ನು ಅಪಹರಿಸಿದ್ದರು. ಈ ಸಂದರ್ಭ ಲಾರಿ ಚಲಕರ ಮೊಬೈಲ್, ನಗದು ಹಣವನ್ನೂ ದೋಚಿದ್ದರು. ಪ್ರಕರಣಕ್ಕೆ ಸಂಬಂಧಿಸಿ ನಾಸಿಕ್ ನಿವಸಿ ರಾಕೇಶ್‍ಕಿಶೋರ್, ಮೀಯಪದವು ಚಿಗುರುಪಾದೆ ನಿವಾಸಿ ಮಹಮ್ಮದ್ ಸಫ್ವಾನ್, ಉಪ್ಪಳ ನಿವಾಸಿ ಸಯಾಫ್ ಎಂಬವರನ್ನು ಪೊಲೀಸರು ಬಂಧಿಸಿದ್ದರು. ಪ್ರಕರಣದ ಪ್ರಮುಖ ಆರೋಪಿ ರಹೀಂ ಅಂದು ಪರಾರಿಯಾಗಿದ್ದನು. ಕಸರಗೋಡು ಡಿವೈಎಸ್‍ಪಿ ಪಿ.ಕೆ ಸುಧಾಕರನ್ ನೇತೃತ್ವದ ಪೊಲೀಸರ ತಮಡ ಕಾರ್ಯಾಚರಣೆ ನಡೆಸಿ ಈತನನ್ನು ಬಂಧಿಸಿದೆ. ಈತನ ವಿರುದ್ಧ ಮಂಜೇಶ್ವರ, ಕುಂಬಳೆ ಹಾಗೂ ಕರ್ನಾಟಕದ ವಿವಿಧ ಠಾಣೆಗಳಲ್ಲಿ ಕೇಸುಗಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.



