ಕಲ್ಪೆಟ್ಟ: ದೈಹಿಕ ಸಾಮಥ್ರ್ಯದ ಬಗ್ಗೆ ಕಾಳಜಿ ಇರುವವರು ತಾಲೀಮು ಮಾಡಲು ಮನೆಯಲ್ಲಿ ಟ್ರೆಡ್ ಮಿಲ್ ಹೊಂದಲು ಬಯಸುವುದು ಸಹಜ. ಆದಾಗ್ಯೂ, ಹೆಚ್ಚಿನವರು ಅದನ್ನು ಸಾಧಿಸಲು ಸಾಧ್ಯವಾಗದಿರಬಹುದು. ವಯನಾಡು ಮೂಲದವರೊಬ್ಬರು ಪರಿಸರ ಸ್ನೇಹಿ ಮರದ ಟ್ರೆಡ್‍ಮಿಲ್ ರಚನೆಗೆ ಮುಂದಾಗಿರುವುದರಿಂದ ದುಬಾರಿ ಸಾಂಪ್ರದಾಯಿಕ ಟ್ರೆಡ್‍ಮಿಲ್ ಬೇಕಾಗಿಲ್ಲ.
ಸುಲ್ತಾನ್ ಬತ್ತೇರಿಯ 54 ವರ್ಷದ ಇ ಕೆ ರವೀಂದ್ರನ್ ಅವರ ಆವಿಷ್ಕಾರ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಜನಪ್ರಿಯವಾಗಿದೆ. ಸಾಂಪ್ರದಾಯಿಕ ಸಲಕರಣೆಗಳಿಗಿಂತ ಭಿನ್ನವಾಗಿ, ರವೀಂದ್ರನ್ ಅವರ ಮರದ ಟ್ರೆಡ್ ಮಿಲ್ ಕಾರ್ಯನಿರ್ವಹಿಸಲು ವಿದ್ಯುತ್ ಮತ್ತು ಬ್ಯಾಟರಿಯ ಅಗತ್ಯವಿರುವುದಿಲ್ಲ.
ಕೆಲಸದ ಭಾಗವಾಗಿ ದೀರ್ಘಕಾಲ ಕುಳಿತುಕೊಳ್ಳುವುದರಿಂದ ಬೆನ್ನು ನೋವು ಮತ್ತು ಇತರ ದೈಹಿಕ ತೊಂದರೆಗಳಿಂದ ಬಳಲುತ್ತಿರುವ ನಾನು ನಿಯಮಿತವಾಗಿ ದೈಹಿಕ ವ್ಯಾಯಾಮವನ್ನು ಮಾಡಲು ಆಸಕ್ತನಾಗಿದ್ದೆ. ಆದರೆ, ಕಾಡುಪ್ರಾಣಿಗಳು ಮತ್ತು ಬೀದಿನಾಯಿಗಳಿಂದ ಉಂಟಾಗುವ ಅಪಾಯವು ಬೆಳಿಗ್ಗೆ ವಾಕಿಂಗ್‍ಗೆ ಹೋಗುವುದರಿಂದ ಹಿಂದೆ ಸರಿಯುವಂತೆ ಮಾಡಿತು. ದುಬಾರಿ ಸಾಂಪ್ರದಾಯಿಕ ಟ್ರೆಡ್‍ಮಿಲ್‍ಗೆ ಪರ್ಯಾಯವಾಗಿ ಯೋಚಿಸಲು ಪರಿಸ್ಥಿತಿ ನನ್ನನ್ನು ಒತ್ತಾಯಿಸಿತು ಎಂದು ಅವರು ತಮ್ಮ ಅವಿಷ್ಕಾರದ ಮೂಲದ ಬಗ್ಗೆ ಹೇಳಿದರು.
ನಾನು ಮೊದಲ ಬಾರಿಗೆ ವೈಯಕ್ತಿಕ ಬಳಕೆಗಾಗಿ ನಾಲ್ಕು ವರ್ಷಗಳ ಹಿಂದೆ ಉಪಕರಣವನ್ನು ವಿನ್ಯಾಸಗೊಳಿಸಿದೆ. ನಾಲ್ಕು ವರ್ಷಗಳ ಹಿಂದೆ ಮೊದಲ ಆವೃತ್ತಿಯನ್ನು ಮಾಡಿದ ನಂತರ, ಅದನ್ನು ಹೆಚ್ಚು ಆರಾಮದಾಯಕವಾಗಿಸಲು ಅದನ್ನು ಮಾರ್ಪಡಿಸಲು ಸದಾ ಚಿಂತನೆ ನಡೆಸಿದೆ ಮತ್ತು ಯಶಸ್ವಿಯಾದೆ ಎಂದು ಅವರು ಹೇಳಿದರು.
ಸರಳ ವಿಧಾನ ಬಳಸಿ ಮರದ ಟ್ರೆಡ್ ಮಿಲ್ ನಿರ್ಮಿಸಲಾಗಿದೆ ಎಂದರು. ಅದರ ಹೆಚ್ಚಿನ ಭಾಗಗಳು ಮರದಿಂದ ಮಾಡಲ್ಪಟ್ಟಿದೆ. ಹೊರಗಿನಿಂದ ಎರಡು ಭಾಗಗಳನ್ನು ಮಾತ್ರ ಖರೀದಿಸಲಾಗಿದೆ. ನೈಲಾನ್ ಬೆಲ್ಟ್ ಮತ್ತು ಬಾಲ್ ಬೇರಿಂಗ್ ಗಳನ್ನು ಮಾತ್ರ ಹೊರಗಿಂದ ತರಲಾಗಿದೆ. ಇದರ ಬೆಲೆ ಕೇವಲ 12,000 ರೂ. ಒಂದು ಮರದ ಟ್ರೆಡ್‍ಮಿಲ್ ಅನ್ನು ಜೋಡಿಸಲು ಮೂರು ದಿನಗಳನ್ನು ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದರು.
ರವೀಂದ್ರನ್ 30 ವರ್ಷಗಳಿಂದ ಬಡಗಿಯಾಗಿ ವೃತ್ತಿ ನಿರ್ವಹಿಸುತ್ತಿದ್ದಾರೆ. ಉಪಕರಣದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ, ಟ್ರೆಡ್‍ಮಿಲ್‍ನ ವಿವರಗಳನ್ನು ಕೋರಿ ಅನೇಕ ಪೋನ್ ಕರೆಗಳು ಬರುತ್ತಿವೆ ಎಂದಿರುವ ಅವರು, ಟ್ರೆಡ್‍ಮಿಲ್‍ನ ಎರಡು ವಿನ್ಯಾಸಗಳನ್ನು ಒದಗಿಸುತ್ತಾರೆ.
ಸ್ವಲ್ಪ ಇಳಿಜಾರಿನ ಒಂದು ನೈಲಾನ್ ಬೆಲ್ಟ್ ಗೆ ಮರದ 70 ಹಲಗೆಗಳನ್ನು ಜೋಡಿಸಲಾಗಿದೆ. ಇದು 70 ಬಾಲ್ ಬೇರಿಂಗ್‍ಗಳ ಮೇಲೆ ಚಲಿಸುತ್ತದೆ. ಮತ್ತು ಅತ್ಯಂತ ಮೃದು ಮತ್ತು ಮಿತಭಾರದಿಂದ ಕೂಡಿದೆ.

.jpg)
