ಬದಿಯಡ್ಕ: ಮಾನ್ಯ ಕಾರ್ಮಾರು ಶ್ರೀ ಮಹಾವಿಷ್ಣು ಕ್ಷೇತ್ರದ ಶಿಲಾಮಯ ಗರ್ಭಗುಡಿ ಹಾಗೂ ತೀರ್ಥಮಂಟಪದ ಶಿಲಾನ್ಯಾಸ ಗುರುವಾರ ಬೆಳಗ್ಗೆ ಕರ್ಕಟಕ ಲಗ್ನ ಶುಭಮುಹೂರ್ತದಲ್ಲಿ ಮುಂಡಪಳ್ಳ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಕೆ.ಶೆಟ್ಟಿ ನೆರವೇರಿಸಿದರು.
ಕ್ಷೇತ್ರ ತಂತ್ರಿವರ್ಯ ಬ್ರಹ್ಮಶ್ರೀ ದೇಲಂಪಾಡಿ ಗಣೇಶತಂತ್ರಿಗಳು ಶ್ರೀ ದೇವರ ಅನುಗ್ರಹಕ್ಕಾಗಿ ಪ್ರಾರ್ಥಿಸಿ ಮುಹೂರ್ತ ಪೂಜೆ ನಡೆಸಿದರು. ಜೀರ್ಣೋದ್ಧಾರ ಸಮಿತಿಯ ರಕ್ಷಾಧಿಕಾರಿ ಗೋಪಾಲಕೃಷ್ಣ ಪೈ ಬದಿಯಡ್ಕ, ಮಂಗಳೂರಿನ ಖ್ಯಾತ ವೈದ್ಯ ನರೇಶ್ ರೈ ದೆಪ್ಪುಣಿಗುತ್ತು, ಶ್ರೀ ಎಡನೀರು ಮಠದ ಆಡಳಿತಾಧಿಕಾರಿ ರಾಜೇಂದ್ರ ಕಲ್ಲೂರಾಯ, ಮಂಜುನಾಥ ಆಳ್ವ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದಿನೇಶ್ ಕೊಕ್ಕಡ, ಉದ್ಯಮಿ ರಾಮ ಭಟ್ ಪತ್ತಡ್ಕ ಪುತ್ತೂರು ಹಾಗೂ ಕ್ಷೇತ್ರದ ಸರ್ವಸಮಿತಿಯ ಸದಸ್ಯರು, ಊರಪರವೂರ ಭಕ್ತಾದಿಗಳು ಪಾಲ್ಗೊಂಡಿದ್ದರು. ಧಾರಾಕಾರ ಮಳೆಯ ಮಧ್ಯೆಯೂ ನೂರಾರು ಭಕ್ತರ ಉಪಸ್ಥಿತಿಯಲ್ಲಿ ಶಿಲಾನ್ಯಾಸ ಕಾರ್ಯಕ್ರಮ ಯಶಸ್ವಿಯಾಗಿ ಜರಗಿತು.

