ಉಪ್ಪಳ: ಬಿಜೆಪಿ ಪೈವಳಿಕೆ ಸೌತ್ ವಿಭಾಗದ ಅಧ್ಯಕ್ಷರಾಗಿ ಪಕ್ಷದ ಹಿರಿಯ ನೇತಾರ ಕೆದುಕೋಡಿ ವಿಘ್ನೇಶ್ವರ ಭಟ್ ಹಾಗೂ ಪ್ರ.ಕಾರ್ಯದರ್ಶಿಯಾಗಿ ಜಗದೀಶ ಪೊನ್ನೆತೊಡು ಇವರನ್ನು ನೇಮಕ ಮಾಡಲಾಗಿದೆ* ಎಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ್ ಬಿಎಂ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವರು.
ವಿಭಾಗದ ಪ್ರಮುಖರ ಅಭಿಪ್ರಾಯ ಸಂಗ್ರಹಿಸಿ ಜಿಲ್ಲಾ ಅಧ್ಯಕ್ಷ ಕುಂಟಾರು ರವೀಶ ತಂತ್ರಿಯವರ ಆದೇಶದಂತೆ ಅಧ್ಯಕ್ಷ, ಪ್ರ. ಕಾರ್ಯದರ್ಶಿಗಳನ್ನು ನೇಮಕಗೊಳಿಸಲಾಗಿದೆ ಎಂದು ತಿಳಿಸಿರುವರು.


