ಪೆರ್ಲ: ಸ್ವರ್ಗ ವಾಣಿನಗರ ಲೋಕೋಪಯೋಗಿ ರಸ್ತೆಯ ಇಕ್ಕೆಲಗಳಲ್ಲಿ ಅಪಾಯ ಭೀತಿಯಲ್ಲಿರುವ ಅರಣ್ಯ ಪ್ರದೇಶದ ಮರಗಳನ್ನು ಕಡಿದು ತೆರವುಗೊಳಿಸುವ ಕಾರ್ಯ ಜರಗಿತು. ವಾಣಿನಗರ ಶಾಲೆಗೆ ಆಗಮಿಸುವ ದಾರಿಯಲ್ಲಾಗಿ ಬೃಹತ್ ಮರಗಳು ಬೀಳುವ ಭೀತಿಯನ್ನೆದುರಿಸುತ್ತಿದ್ದು ಇದರಿಂದಾಗಿ ವಾಹನ ಸಂಚಾರ ಹಾಗೂ ಬಸ್ಸಿನ ಸೌಕರ್ಯ ಕುಂಠಿತಗೊಂಡಿರುವ ವಾಣಿನಗರ ಪ್ರದೇಶ ದ್ವೀಪ ಸದೃಶವಾದ ಬಗ್ಗೆ ಇಲ್ಲಿನ ಶಿಕ್ಷಕಿಯೋರ್ವರು ಮಾನವ ಹಕ್ಕು ಆಯೋಗಕ್ಕೆ ದೂರು ಸಲ್ಲಿಸಿದ್ದರು. ಇದರ ಪರಿಶೀಲನೆ ಹಾಗೂ ಸೂಕ್ತ ಕ್ರಮ ಕೈಗೊಳ್ಳಲು ಕಾಸರಗೋಡು ಜಿಲ್ಲಾ ಉಪ ನ್ಯಾಯಧೀಶೆ ಸ್ಥಳ ಸಂದರ್ಶಿಸಿ ಸಂಬಂಧಪಟ್ಟವರಲ್ಲಿ ಹಲವು ಕ್ರಮ ಕೈಗೊಳ್ಳಲು ಸೂಚಿಸಿದ್ದರು.
ಈ ಹಿನ್ನೆಲೆಯಲ್ಲಿ ವಾಣಿನಗರ ವನ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಭೀತಿಯುಕ್ತ ಮರಗಳ ತೆರವು ಕಾರ್ಯಚರಣೆಗೆ ಚಾಲನೆ ನೀಡಲಾಗಿದೆ. ಬೀಟ್ ಫಾರೆಸ್ಟ್ ಆಫೀಸರ್ ರಮೇಶ ನ್ ಉದ್ಘಾಟಿಸಿದರು. ಪಂಚಾಯತಿ ಸದಸ್ಯ ಎಸ್.ಬಿ.ನರಸಿಂಹ ಪೂಜಾರಿ, ಸ್ಥಳೀಯ ಸಾಮಾಜಿಕ ಕಾರ್ಯಕರ್ತರು ನೇತೃತ್ವ ನೀಡಿದರು.

.jpg)
.jpg)
