ಕಾಸರಗೋಡು: ವಿದ್ಯಾನಗರದ ಚಿನ್ಮಯಾ ಮಿಷನ್ ವತಿಯಿಂದ ಜುಲೈ 17ರಿಂದ ಆ.16ರ ವರೆಗೆ ಒಂದು ತಿಂಗಳ ಕಾಲ ರಾಮಾಯಣ ಮಾಸಾಚರಣೆ ನಡೆಯುವುದು.ಕ್ಷೇತ್ರಗಳು, ತರವಾಡು ಕ್ಷೇತ್ರ, ಭಕ್ತಾದಿಗಳ ಮನೆಗಳು ಮುಂತಾದೆಡೆ ಮುಂಚಿತವಾಗಿ ದಿನ ನಿಗದಿಪಡಿಸಿದ ಪ್ರಕಾರ ರಾಮಾಯಣ ಸತ್ಸಂಗ ಕಾರ್ಯಕ್ರಮ ಆಯೋಜಿಸಲಾಗಿದೆ. ರಾಮಾಯಣ ಮಾಸಾಚರಣೆ, ಪ್ರವಚನ, ಭಜನೆ ನಡೆಯಲಿದೆ. ರಾಮಾಯಣ ಮಾಸಸಾಚರಣೆಯ ಉದ್ಘಾಟನೆಯನ್ನು ಜು. 17ರಂದು ಸಂಜೆ 4.30ಕ್ಕೆ ವಿದ್ಯಾನಗರ ಚಿನ್ಮಯ ಮಿಷನ್‍ನಲ್ಲಿ ನೆರವೇರಿಸುವರು.




