HEALTH TIPS

ಸಲಿಂಗ ಸಂಗಾತಿಗಾಗಿ ಹೇಬಿಯಸ್​ ಕಾರ್ಪಸ್​ ಹಿಡಿದು ಕೋರ್ಟ್​ ಮೆಟ್ಟಿಲೇರಿದ್ದ ಯುವತಿಗೆ ಸಿಕ್ತು ಗುಡ್​ ನ್ಯೂಸ್​!

           ಲಪ್ಪುರಂ: ತನ್ನ ಸಲಿಂಗ ಸಂಗಾತಿಗಾಗಿ ಹೇಬಿಯಸ್​ ಕಾರ್ಪಸ್​ ಅರ್ಜಿ ಹಿಡಿದು ಹೈಕೋರ್ಟ್​ ಮೆಟ್ಟಿಲೇರಿದ್ದ ಯುವತಿಗೆ ಗುಡ್​ ನ್ಯೂಸ್​ ಸಿಕ್ಕಿದೆ. ತನ್ನ ಸಂಗಾತಿ ಮರಳಿ ಬಂದಿದ್ದು, ಇಬ್ಬರಿಗೂ ರಕ್ಷಣೆ ನೀಡುವಂತೆ ಕೇರಳ ಹೈಕೋರ್ಟ್​, ಪೊಲೀಸರಿಗೆ ನಿರ್ದೇಶನ ನೀಡಿ ಆದೇಶ ಹೊರಡಿಸಿದೆ.

             ತನ್ನ ಸಂಗಾತಿ ಅಫೀಫಾ ಜತೆಗೆ ಒಟ್ಟಿಗೆ ಬಾಳಲು ಅವಕಾಶ ಕೋರಿ ಸುಮಯ್ಯ ಶೆರಿನ್​ ಹೈಕೋರ್ಟ್​ನಲ್ಲಿ ಅರ್ಜಿ ದಾಖಲಿಸಿದ್ದಳು. ಇದೀಗ ನ್ಯಾಯಮೂರ್ತಿ ಪಿ.ವಿ. ಕುಂಜಿಕೃಷ್ಣನ್​ ಅವರು ಈ ಮಧ್ಯಂತರ ಆದೇಶ ಹೊರಡಿಸಿದ್ದಾರೆ. ಇಬ್ಬರಿಗೂ ಪೊಲೀಸರ ರಕ್ಷಣೆ ಸಿಕ್ಕಿದೆ. ಅಂದಹಾಗೆ ಸುಮಯ್ಯ ಮತ್ತು ಅಫೀಫಾ ಇಬ್ಬರು ಮಲಪ್ಪುರಂ ನಿವಾಸಿಗಳು.

                 ಈ ಹಿಂದೆ ಅಫೀಫಾಳನ್ನು ಆಕೆಯ ಸಂಬಂಧಿಕರೇ ಅಪಹರಿಸಿದ್ದಾರೆ ಎಂದು ಆರೋಪಿಸಿ ಸುಮಯ್ಯ, ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯ ಮೇರೆಗೆ ವಿಭಾಗೀಯ ಪೀಠದ ಮುಂದೆ ಅಫೀಫಾಳನ್ನು ಹಾಜರುಪಡಿಸಲಾಗಿತ್ತು. ಅಫೀಫಾ ತನ್ನ ಪೋಷಕರೊಂದಿಗೆ ಹೋಗಲು ಬಯಸಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿದ ನಂತರ ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿತ್ತು. ಆದಾಗ್ಯೂ, ಅಫೀಫಾ ಶೀಘ್ರದಲ್ಲೇ ಹಿಂದಿರುಗಿ ಸುಮಯ್ಯಳೊಂದಿಗೆ ವಾಸಿಸಲು ಪ್ರಾರಂಭಿಸಿದಳು.

ಅಫೀಫಾ ತನ್ನ ಸಂಬಂಧಿಕರಿಂದ ಮತ್ತೆ ಅಪಹರಣಕ್ಕೆ ಒಳಗಾಗಬಹುದು ಎಂಬ ಆತಂಕದಿಂದ ಸುಮಯ್ಯ ಮತ್ತೆ ಹೈಕೋರ್ಟ್‌ ಮೊರೆ ಹೋಗಿದ್ದಳು. ಸದ್ಯಕ್ಕೆ ಮಧ್ಯಂತರ ಆದೇಶ ನೀಡಿದ್ದು, ಇಬ್ಬರು ಒಟ್ಟಿಗೆ ವಾಸಿಸಲು ಪೊಲೀಸರು ರಕ್ಷಣೆ ನೀಡುವಂತೆ ನಿರ್ದೇಶಿಸಿದೆ. ಸರ್ಕಾರ ಮತ್ತು ಅಫೀಫಾ ಪೋಷಕರ ನಿಲುವು ಕೇಳಿದ ಹೈಕೋರ್ಟ್​ನ ಏಕ ಸದಸ್ಯ ಪೀಠವು ಪ್ರಕರಣವನ್ನು ನಂತರ ಪರಿಗಣಿಸಲಿದೆ.

ನ್ಯಾಯಾಲಯವೇ ಅನುಮತಿ ನೀಡಿದೆ

                     ಜನವರಿ 27ರಂದು ಇಬ್ಬರು ಮನೆ ಬಿಟ್ಟು ಬಂದ ಬಳಿಕ ಒಟ್ಟಿಗೆ ವಾಸಿಸುತ್ತಿದ್ದೇವೆ. ನಮಗಿದ್ದ ಎಲ್ಲ ಸವಾಲುಗಳನ್ನು ಮಲಪ್ಪುರಂ ಮ್ಯಾಜಿಸ್ಟ್ರೇಟ್​ ನ್ಯಾಯಾಲಯದಲ್ಲಿ        ಬಗೆಹರಿಸಿಕೊಂಡಿದ್ದೇವೆ ಮತ್ತು ನಾವಿಬ್ಬರು ಒಟ್ಟಿಗೆ ಜೀವಿಸಲು ನ್ಯಾಯಾಲಯವೇ ಅನುಮತಿ ನೀಡಿದೆ. ಆದರೆ, ನಾವಿಬ್ಬರು ಒಟ್ಟಿಗೆ ಇರುವಾಗ ಅಫೀಫಾ ಅವರ ಮನೆಯವರು ಅವಳನ್ನು ನನ್ನಿಂದ ದೂರ ಮಾಡಿದ್ದಾರೆ. ನಾನು ಸಲ್ಲಿಸಿರುವ ಹೇಬಿಯಸ್ ಕಾರ್ಪಸ್‌ ಅರ್ಜಿಗೆ ಕುಟುಂಬವು ಇನ್ನೂ ಪ್ರತಿಕ್ರಿಯಿಸಿಲ್ಲ. ಇದೇ ಸಂದರ್ಭದಲ್ಲಿ ಅವರ ಪರ ವಕೀಲರು ಪ್ರತಿಕ್ರಿಯಿಸಲು 10 ದಿನಗಳ ಕಾಲಾವಕಾಶವನ್ನು ಕೇಳಿದ್ದಾರೆ. ವಕೀಲರ ಮನವಿಗೆ ನ್ಯಾಯಾಲಯವೂ ಸಮ್ಮತಿಸಿದೆ. ಸಮಯ ಕೇಳಿರುವುದರಿಂದ ಏನಾದರೂ ಕುತಂತ್ರ ನಡೆಸುತ್ತಾರೆ ಎಂಬ ಭಯವಿದೆ ಎಂದು ಸುಮಯ್ಯ ಈ ಹಿಂದೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಳು.

                                   ಅಫೀಫಾಳನ್ನು ಕೊಡಿಸಿ

            ನಾವು ಒಟ್ಟಿಗೆ ವಾಸಿಸಲು ಪ್ರಾರಂಭಿಸಿದ ನಂತರ, ನಮ್ಮ ಕುಟುಂಬಗಳ ಸಂಪರ್ಕವನ್ನು ಕಡಿದುಕೊಂಡೆವು. ಆದರೆ, ಇತ್ತೀಚೆಗಷ್ಟೇ ನಾವು ಆಕೆಯ ಸಂಬಂಧಿಕರ ಕೈಗೆ ಸಿಕ್ಕಿಬಿದ್ದಾಗ, ನಾವಿರುವ ಸ್ಥಳದ ಬಗ್ಗೆ ಅವರಿಗೆ ಗೊತ್ತಾಗಿದೆ. ಕೆಲವೇ ದಿನಗಳಲ್ಲಿ ಆಕೆಯನ್ನು ಬಲವಂತವಾಗಿ ಕರೆದೊಯ್ದಿದ್ದಾರೆ. ಒಟ್ಟಿಗೆ ಬದುಕಲು ನಿರ್ಧರಿಸುವ ಮೊದಲು ನಾವಿಬ್ಬರೂ 2 ವರ್ಷಗಳ ಕಾಲ ಪ್ರೀತಿಸುತ್ತಿದ್ದೆವು. ನನಗೆ ನನ್ನ ಅಫೀಫಾಳನ್ನು ಕೊಡಿಸಿ ಎಂದು ನ್ಯಾಯಾಲಯಕ್ಕೆ ಸುಮಯ್ಯ ಮನವಿ ಮಾಡಿದ್ದಳು. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries