HEALTH TIPS

ಬಾಲಕಿಯ ಹಾಡನ್ನು ವೈರಲ್​ ಮಾಡೋದಾಗಿ ನಂಬಿಸಿದ ಯೂಟ್ಯೂಬರ್​: ಲಾಡ್ಜ್​ನಲ್ಲಿ ನಡೆಯಿತು ಘೋರ ಕೃತ್ಯ

              ಕೊಚ್ಚಿ: ದೃಷ್ಟಿಹೀನ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಅಡಿಯಲ್ಲಿ ಯೂಟ್ಯೂಬರ್​ನನ್ನು ಕೇರಳದ ಮುನಂಬಾಮ್​ ಪೊಲೀಸರು ಬಂಧಿಸಿದ್ದಾರೆ.

              ಬಂಧಿತ ಯೂಟ್ಯೂಬರ್​ನನ್ನು ಜೀಮೊನ್​ (42) ಎಂದು ಗುರುತಿಸಲಾಗಿದೆ. ಈತ ಕೊಟ್ಟಾಯಂ ನಿವಾಸಿ. ಅಪ್ರಾಪ್ತೆ ಹಾಡಿದ ಹಾಡನ್ನು ವೈರಲ್​ ಮಾಡುವುದಾಗಿ ಭರವಸೆ ನೀಡಿ, ಈ ನೀಚ ಕೃತ್ಯವನ್ನು ಎಸಗಿದ್ದಾನೆ.

                ಹಾಡಿನ ಚಿತ್ರೀಕರಣ ಮಾಡಬೇಕಿದೆ ಎಂಬ ನಂಬಿಸಿ, ಅಪ್ರಾಪ್ತೆಯನ್ನು ಕೊಟ್ಟಾಯಂ ಚೆರೈನಲ್ಲಿರುವ ಲಾಡ್ಜ್​ ಒಂದಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಬಾಲಕಿ ಲಾಡ್ಜ್​ಗೆ ಹೋದಾಗ ಆಕೆಯ ಜತೆ ತಾಯಿ ಮತ್ತು ಸಹೋದರ ಸಹ ಇದ್ದರು. ಆದರೆ, ಅವರಿಬ್ಬರು ಹತ್ತಿರದಲ್ಲಿ ಇಲ್ಲದ ಸಮಯದಲ್ಲಿ ಆರೋಪಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ.

               ಸಂತ್ರಸ್ತ ಬಾಲಕಿಯ ಪಾಲಕರು ನೀಡಿದ ದೂರಿನ ಆಧಾರದ ಮೇಲೆ ಆರೋಪಿ ಜೀಮೊನ್​ನನ್ನು ಬಂಧಿಸಲಾಗಿದೆ. ಆತನ ವಿರುದ್ಧ ಪೊಕ್ಸೊ ಸೇರಿದಂತೆ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್​ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ವಿಚಾರಣೆ ಆರಂಭವಾಗಿದೆ. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries