HEALTH TIPS

ನಿದ್ದೆ ಮಾಡುವಾಗ ಕಾಲುಗಳಿಗೆ ಬ್ಲಾಂಕೆಟ್‌ ಹಾಕಬಾರದು, ಏಕೆ?

 ನೀವು ಮಲಗುವಾಗ ಇಡೀ ಮೈಗೆ ಅಂದರೆ ಕಾಲುಗಳನ್ನೂ ಸೇರಿಸಿ ಬ್ಲಾಂಕೆಟ್‌ ಹೊದ್ದು ಮಲಗುತ್ತೀರಾ? ಅಥವಾ ಒಂದು ಅಥವಾ ಎರಡು ಕಾಲುಗಳನ್ನು ಬ್ಲಾಂಕೆಟ್‌ನಿಂದ ಹೊರಹಾಕಿ ಮಲಗುತ್ತೀರಾ? ಇದೇನು ಪ್ರಶ್ನೆ, ಬ್ಲಾಂಕೆಟ್‌ ಅನ್ನು ಮೈ ಪೂರ್ತಿ ಹೊದ್ದು ಮಲಗುವುದೇ ಸುಖವಲ್ಲವೇ, ಬೆಚ್ಚಗಿನ ಅನುಭವ ಉಂಟಾಗುವುದು ಎಂದು ಹೇಳಬಹುದು.

ಆದರೆ ಕೆಲವರಿಗೆ ಒಂದು ಕಾಲನ್ನು ಬ್ಲಾಂಕೆಟ್‌ನಿಂದ ಹೊರಹಾಕಿ ಮಲಗುವ ಅಭ್ಯಾಸವಿರುತ್ತದೆ, ಮೈ ಪೂರ್ತಿ ಬ್ಲಾಂಕೆಟ್‌ ಹೊದ್ದುಕೊಂಡು ಮಲಗುವುದಕ್ಕಿಂತ ಕಾಲುಗಳಿಗೆ ಬ್ಲಾಂಕೆಟ್‌ ಹಾಕದೆ ಇರುವ ಅಭ್ಯಾಸ ತುಂಬಾ ಒಳ್ಳೆಯದಂತೆ. ಹೀಗೆ ಮಲಗುವದರಿಂದ ಆರೋಗ್ಯಕ್ಕೆ ದೊರೆಯುವ ಪ್ರಯೋಜನಗಳೇನು ಎಂದು ನೋಡೋಣ:
ಕಾಲುಗಳಿಗೆ ಬೆಚ್ಚಗಿನ ಬ್ಲಾಂಕೆಟ್‌ ಹಾಕಿ ಮಲಗುವ ಅಭ್ಯಾಸ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ
ಮೈ ಪೂರ್ತಿ ಬ್ಲಾಂಕೆಟ್ ಅಥವಾ ಹೊದಿಕೆಯನ್ನು ಹೊದ್ದುಕೊಂಡು ಮಲಗುವ ಅಭ್ಯಾಸವಿದ್ದರೆ ಅದನ್ನು ಬಿಟ್ಟು ಬಿಡಿ, ಏಕೆಂದರೆ ನಾವು ಈ ರೀತಿ ಮಲಗುವುದರಿಂದ ಚೆನ್ನಾಗಿ ನಿದ್ದೆ ಬರುತ್ತದೆ ಎಂದು ಭಾವಿಸುತ್ತೇವೆ, ಆದರೆ ಆ ರೀತಿ ಮಲಗುವುದರಿಂದ ನಿದ್ದೆ ಕಡಿಮೆಯಾಗುವುದು!

 ಹಿಂದಿದೆ ವೈಜ್ಞಾನಿಕ ಕಾರಣ
ಈ ಕುರಿತು ವೈಜ್ಞಾನಿಕವಾಗಿ ಅಧ್ಯಯನ ನಡೆಸಲಾಯಿತು. ಬ್ಲಾಂಕೆಟ್‌ನಿಂದ ಪಾದಗಳನ್ನು ಮುಚ್ಚಿದರೆ ದೇಹ ಬೆಚ್ಚಗೆ ಇರುತ್ತದೆ. ಇದರಿಂದ ನಾವು ತುಂಬಾ ಅಲರ್ಟ್ ಆಗಿರುತ್ತೇವೆ ಅಂತೆ, ಅದೇ ಪಾದಗಳಿಗೆ ಬ್ಲಾಂಕೆಟ್‌ ಹಾಕದೇ ಇದ್ದರೆ ಕಾಲುಗಳು ಬೇಗನೆ ತಂಪಾಗುತ್ತದೆ, ಇದರಿಂದ ತುಂಬಾ ನಿದ್ದೆ ಬರುವುದು.

ನಿದ್ದೆಗೂ, ಟಂಪರೇಚರಿಗೂ ಇದೆ ಸಂಬಂಧ
ಕಾಲುಗಳನ್ನು ಬ್ಲಾಂಕೆಟ್‌ನ ಹೊರಗಡೆ ಹಾಕಿ ಮಲಗುವುದರಿಂದ ದೇಹದ ಉಷ್ಣಾಂಶ ಬೇಗನೆ ಕಡಿಮೆಯಾಗುವುದು, ಇದರಿಂದ ನಿದ್ದೆ ತುಂಬಾ ಚೆನ್ನಾಗಿ ಬರುತ್ತದೆ. ನೀವು ನಿದ್ದೆ ಬರುತ್ತಿಲ್ಲ ಎಂದು ಒದ್ದಾಡುತ್ತಿದ್ದರೆ ಈ ಟ್ರಿಕ್ಸ್ ಬಳಸಿ ನೋಡಿ ನಿದ್ದೆ ಚೆನ್ನಾಗಿ ಬರುವುದು. ಹಾಗಂತ ಕಾಲುಗಳನ್ನು ಬ್ಲಾಂಕೆಟ್‌ನಿಂದ ಹೊರಗಡೆ ಹಾಕಿ ಮಲಗುವುದರಿಂದ ಚಳಿಯಾಗಬಹುದು ಎಂದು ನೀವು ಬಯಸಿದರೆ ಅದು ತಪ್ಪು ಕಲ್ಪನೆ. ಈ ರೀತಿ ಮಲಗುವುದರಿಂದ ನಿಮಗೆ ಚಳಿಯಾಗುವುದಿಲ್ಲ, ಆದರೆ ನಿದ್ದೆ ಮಾತ್ರ ತುಂಬಾ ಚೆನ್ನಾಗಿ ಬರುತ್ತದೆ. ತುಂಬಾ ಚಳಿ ಇರುವ ವಾತಾವರಣದಲ್ಲೂ ನೀವು ಈ ರೀತಿ ಮಲಗಿದರೆ ನಿಮಗೆ ಚಳಿಯಾಗುವುದಿಲ್ಲ, ತುಂಬಾ ಚೆನ್ನಾಗಿ ನಿದ್ದೆ ಹತ್ತುವುದು.

ಸಾಕ್ಸ್ ಹಾಕಿ ಮಲಗಬೇಡಿ
ಇನ್ನು ಕೆಲವರಿಗೆ ಮಲಗುವಾಗ ಸಾಕ್ಸ್ ಹಾಕಿ ಮಲಗುವ ಅಭ್ಯಾಸ ಇರುತ್ತದೆ, ಈ ಅಭ್ಯಾಸ ಕೂಡ ಒಳ್ಳೆಯದಲ್ಲ, ಸಾಕ್ಸ್‌ ಹಾಕಿದಾಗ ಮೈ ಬೆಚ್ಚಗಿರುತ್ತದೆ, ಇದರಿಂದ ನೀವು ಅಲರ್ಟ್ ಆಗಿರುತ್ತೀರಿ, ಗಾಢ ನಿದ್ದೆ ಸಮೀಪ ಸುಳಿಯಲ್ಲ, ಆದ್ದರಿಂದ ಈ ಅಭ್ಯಾಸ ಬಿಡುವುದು ಒಳ್ಳೆಯದು.

ಇನ್ನು ಸುಖ ನಿದ್ದೆಗಾಗಿ ಈ ಅಂಶಗಳತ್ತ ಗಮನಹರಿಸಿ:
* ಮಲಗುವ ಅರ್ಧ ಗಂಟೆ ಮುನ್ನ ಮೊಬೈಲ್‌ ನೋಡಬೇಡಿ
ನೀವು ಮಲಗುವ ಅರ್ಧ ಅಥವಾ ಒಂದು ಗಂಟೆ ಮುನ್ನ ಮೊಬೈಲ್‌ ನೋಡಲೇಬೇಡಿ. ಈ ಅಭ್ಯಾಸ ಮಾಡಿದರೆ ನಿಮ್ಮ ನಿದ್ದೆಗೆ ಸಹಕಾರಿ. ಸಾಧ್ಯವಾದರೆ ಬೆಡ್‌ರೂಂಗೆ ಮೊಬೈಲ್‌ ತೆಗೆದುಕೊಂಡು ಹೋಗಲೇಬೇಡಿ.
* ಕೆಫೀನ್‌ ಅಂಶಗಳನ್ನು ಸೇವಿಸಬೇಡಿ
ಇನ್ನು ಕೆಲವರಿಗೆ ಮಲಗುವ ಮುನ್ನ ಕೂಡ ಕಾಫಿ ಸೇವಿಸುವ ಅಭ್ಯಾಸವಿರುತ್ತದೆ. ಹೀಗೆ ಕಾಫಿ ಸೇವಿಸುವುದರಿಂದ ನಿದ್ದೆ ಕಡಿಮೆಯಾಗುವುದು. ಆದ್ದರಿಂದ ಕೆಫೀನ್‌ ಇರುವ ಆಹಾರ ಪದಾರ್ಥಗಳನ್ನು ಸೇವಿಸಬೇಡಿ.
* ದಿನಾ ಒಂದೇ ಸಮಯದಲ್ಲಿ ನಿದ್ದೆ ಮಾಡಲು ಪ್ರಯತ್ನಿಸಿ: ನೀವು ದಿನಾ ಒಂದೇ ಹೊತ್ತಿನಲ್ಲಿ ಮಲಗುವ ಅಭ್ಯಾಸ ಮಾಡಿ. ತುಂಬಾ ಲೇಟಾಗಿ ಮಲಗುವುದು ಒಳ್ಳೆಯದಲ್ಲ. ನೀವ ಆದಷ್ಟೂ 9-10 ಗಂಟೆಯೊಳಗಡೆ ಮಲಗುವ ಅಭ್ಯಾಸ ರೂಢಿಸಿಕೊಂಡರೆ ಒಳ್ಳೆಯದು.


Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries