HEALTH TIPS

ಮಳೆಗಾಲದಲ್ಲಿ ಸೊಳ್ಳೆ, ಕೀಟಗಳ ಹಾವಳಿ ಹೆಚ್ಚಾಗಿದ್ಯಾ? ಹಾಗಾದ್ರೆ ಈ ಮನೆಮದ್ದು ಬಳಸಿ!

 ಮಳೆಗಾಲ ಶುರುವಾದ್ರೆ ಸಾಕು ಸೊಳ್ಳೆ, ಕೀಟಗಳ ಹಾವಳಿ ಇನ್ನಿಲ್ಲದಂತೆ ಕಾಡೋದಕ್ಕೆ ಶುರುವಾಗುತ್ತೆ. ಧೋ ಅಂತ ಸುರಿಯುವ ಮಳೆಗೆ ನೀರಿನ ಜೊತೆಗೆ ಈ ಕೀಟಗಳು ಕೂಡ ಮನೆ ಒಳಗಡೆ ಬಂದು ಕಾಟ ಕೊಡುತ್ತದೆ. ಮಳೆಗಾಲದಲ್ಲಿ ಕತ್ತಲಾದ್ರೆ ಸಾಕು ಸೊಳ್ಳೆಗಳು ದಾಳಿ ಇಡೋದಕ್ಕೆ ಶುರು ಮಾಡುತ್ತೆ.

ಇಷ್ಟೇ ಅಲ್ಲ, ದೀಪಗಳ ಸುತ್ತ ಕೀಟಗಳು ಸುತ್ತಿಕೊಳ್ಳುತ್ತೆ. ಹೀಗೆ ಒಂದಾ? ಎರಡಾ? ಸಾಲು ಸಾಲು ಸಮಸ್ಯೆಗಳು. ಇದ್ರ ಜೊತೆಗೆ ಈ ಕೀಟ ಮತ್ತು ಸೊಳ್ಳೆಗಳಿಂದ ರೋಗ ಹರಡುವ ಅಪಾಯ ಕೂಡ ಹೆಚ್ಚಿದೆ. ಅಷ್ಟಕ್ಕು ಮಳೆಗಾಲದಲ್ಲಿ ಹಿಂಸೆ ನೀಡುವ ಈ ಸೊಳ್ಳೆ ಹಾಗೂ ಕೀಟಗಳಿಂದ ತಪ್ಪಿಸಿಕೊಳ್ಳೋದು ಹೇಗೆ? ಈ ಕೀಟ ಹಾಗೂ ಸೊಳ್ಳೆಗಳ ಕಾಟದಿಂದ ತಪ್ಪಿಸಿಕೊಳ್ಳಬೇಕಂದ್ರೆ ಈ ಮನೆ ಮದ್ದನ್ನು ಬಳಸಿ.

ನಿಂಬೆ ಹಣ್ಣು ಮತ್ತು ಅಡುಗೆ ಸೋಡಾದ ದ್ರಾವಣ
ಮಳೆಗಾಲದ ಕೀಟಗಳನ್ನು ಮನೆಯಿಂದ ದೂರವಿಡಲು ನೀವು ಮನೆಯಲ್ಲಿಯೇ ನಿಂಬೆ ಮತ್ತು ಅಡಿಗೆ ಸೋಡಾದ ದ್ರಾವಣವನ್ನು ತಯಾರಿಸಬಹುದು. ಇದನ್ನು ಮಾಡುವ ವಿಧಾನ ಹೇಗೆಂದರೆ ನೀವು ಮೊದಲು ಒಂದು ಕಪ್ ನೀರನ್ನು ತೆಗೆದುಕೊಂಡು ಅದರಲ್ಲಿ ಎರಡು ನಿಂಬೆಹಣ್ಣುಗಳನ್ನು ಹಿಂಡಿ. ಮತ್ತು ಅದಕ್ಕೆ ಅಡುಗೆ ಸೋಡಾವನ್ನು ಸೇರಿಸಿ. ಆ ನಂತರ ಅದನ್ನು ಸ್ಪ್ರೇ ಬಾಟಲಿಯಲ್ಲಿ ಹಾಕಿ ಕೀಟಗಳ ಮೇಲೆ ಸಿಂಪಡಿಸಿ. ಎಲ್ಲಾ ಕೀಟ ಮತ್ತು ಸೊಳ್ಳೆಗಳು ಕೆಲವೇ ನಿಮಿಷಗಳಲ್ಲಿ ಓಡಿಹೋಗುತ್ತವೆ.

ಕರಿಮೆಣಸು
ಮೊದಲಿಗೆ ಸ್ಪ್ರೇ ಬಾಟಲಿಯನ್ನು ತೆಗೆದುಕೊಂಡು ಅದರಲ್ಲಿ ಒಂದು ಕಪ್ ನೀರನ್ನು ತುಂಬಿಸಿ. ಈಗ ಅದಕ್ಕೆ ಎರಡು ಚಮಚ ತಾಜಾ ಕರಿಮೆಣಸಿನ ಪುಡಿಯನ್ನು ಹಾಕಿ. ಆನಂತರ ಕೀಟಗಳು ಇರುವ ಸ್ಥಳದಲ್ಲಿ ಚೆನ್ನಾಗಿ ಸಿಂಪಡಿಸಿ. ಕೀಟಗಳು ಕೆಲವೇ ಕ್ಷಣಗಳಲ್ಲಿ ಮಾಯವಾಗುತ್ತದೆ.

ಲ್ಯಾವೆಂಡರ್ ಎಣ್ಣೆ ಮಳೆಗಾಲದಲ್ಲಿ ಕೀಟಗಳನ್ನು ದೂರವಿಡಲು ನೀವು ಲ್ಯಾವೆಂಡರ್ ಎಣ್ಣೆಯನ್ನು ಬಳಸಬಹುದು. ಲ್ಯಾವೆಂಡರ್ ಎಣ್ಣೆಯನ್ನು ಹಲವು ವಿಧಾನಗಳಲ್ಲಿ ಬಳಸಬಹುದು. ನೀವು ಅದನ್ನು ಮನೆಯ ಪರದೆಗಳ ಮೇಲೆ ಕಾಣಬಹುದು. ಅಥವಾ ಇತರ ವಿಧಾನಗಳನ್ನು ಅನುಸರಿಸಬಹುದು. ನಿಮಗೆ ಅನುಕೂಲವಾಗುವಂತೆ ಮಾಡಿ.

ಬೇವಿನ ಎಲೆಗಳು
ಸಾಮಾನ್ಯವಾಗಿ ಮಳೆಗಾಲದಲ್ಲಿ ಬಲ್ಬ್ ಬೆಳಗಿದ ತಕ್ಷಣ ಅದರ ಸುತ್ತ ಕೀಟಗಳು ಹಾರಲು ಪ್ರಾರಂಭಿಸುತ್ತದೆ. ಹೀಗಾಗಿ ಬಲ್ಬ್ ಬಳಸುವ ಮೊದಲು ಬೇವಿನ ಕೊಂಬೆಯನ್ನು ತಂದು ಬಲ್ಬ್ ಬಳಿ ನೇತುಹಾಕಿ. ಇದರ ಎಲೆಗಳ ವಾಸನೆಗೆ ಕೀಟಗಳು ದೂರ ಹೋಗುತ್ತದೆ.

ತುಳಸಿ ಗಿಡ
ಮಳೆಗಾಲದಲ್ಲಿ ಸೊಳ್ಳೆಗಳು ಅಥವಾ ನೊಣಗಳನ್ನು ದೂರವಿರಿಸಲು ನೀವು ತುಳಸಿ ಗಿಡಗಳನ್ನು ಬಳಸಬಹುದು. ಇದು ನೈಸರ್ಗಿಕ ರೀತಿಯಲ್ಲಿ ಕೀಟಗಳನ್ನು ದೂರವಿಡಲು ಸಹಾಯ ಮಾಡುತ್ತದೆ. ತುಳಸಿಯು ಆರೋಗ್ಯಕರವೂ ಆಗಿದ್ದು, ಇದರಿಂದ ಅನೇಕ ಪ್ರಯೋಜನಗಳು ಕೂಡ ಇದೆ.

ಲವಂಗ, ಕರ್ಪೂರ ಬಳಸಿ
ಮಳೆಗಾಲದ ಸಮಯದಲ್ಲಿ ಮನೆಯಲ್ಲಿ ಕಂಡುಬರುವ ಸಣ್ಣ ಕೀಟಗಳನ್ನು ಓಡಿಸಲು ಲವಂಗದ ಪುಡಿಯನ್ನು ನೀರಿನಲ್ಲಿ ಬೆರೆಸಿ ಸಿಂಪಡಿಸಬಹುದು. ಅಥವಾ ಕರ್ಪೂರವನ್ನು ಉರಿಯೋದಕ್ಕೆ ಇಡಬಹುದು. ಕೀಟಗಳು ಇದರ ಬಲವಾದ ವಾಸನೆಯನ್ನು ಸಹಿಸುವುದಿಲ್ಲ. ಹಾಗೂ ಇದರ ವಾಸನೆಗೆ ಪ್ರಜ್ಞೆ ತಪ್ಪುತ್ತಂತೆ.

ಮಳೆಗಾಲದಲ್ಲಿ ರಾಸಾಯನಿಕ ವಸ್ತುಗಳನ್ನು ಬಳಸಿ ಈ ಕೀಟಗಳನ್ನು ಓಡಿಸುವ ಬದಲು ಈ ರೀತಿಯ ನೈಸರ್ಗಿಕ ವಸ್ತುಗಳನ್ನು ಬಳಸಿ ಇದರಿಂದ ನಿಮ್ಮ ಆರೋಗ್ಯಕ್ಕೂ ಒಳ್ಳೆಯದು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries