HEALTH TIPS

ಕೇಳದೆ ಸಾಂಬಾರಿಗೆ ಟೊಮೆಟೊ ಹಾಕಿದ್ದಕ್ಕೇ ಸಿಟ್ಟು, ಮಗುವಿನ ಜೊತೆ ಮನೆ ಬಿಟ್ಟ ಪತ್ನಿ!!

            ಭೋಪಾಲ್‌: ತನ್ನನ್ನು ಕೇಳದೇ ಸಾಂಬಾರಿಗೆ ಟೊಮೆಟೊ ಹಾಕಿದ್ದಕ್ಕೇ ಕೋಪಗೊಂಡ ಪತ್ನಿಯೊಬ್ಬರು ತಮ್ಮ ಪತಿಯನ್ನು ತೊರೆದು ಮಗುವಿನೊಂದಿಗೆ ಮನೆ ಬಿಟ್ಟು ಹೋದ ಘಟನೆ ನಡೆದಿದೆ.

               ಮಧ್ಯಪ್ರದೇಶದ ಶಾಹದೋಲ್‌ ಜಿಲ್ಲೆಯಲ್ಲಿ ಈ ನಡೆದಿದ್ದು ಸದ್ಯ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಇರುವ ಟೊಮೆಟೊವನ್ನು ತನ್ನನ್ನು ಕೇಳದೇ ಸಾಂಬಾರಿನಲ್ಲಿ ಬಳಸಿದಕ್ಕೆ ಗಂಡನ ಜೊತೆ ಜಗಳವಾಡಿದ ಹೆಂಡತಿ ಕೊನೆಗೆ ಮನೆಯನ್ನೇ ತೊರೆದು ಕಾಣೆಯಾಗಿರುವ ಘಟನೆ ನಡೆದಿದೆ. 

              ಮೂಲಗಳ ಪ್ರಕಾರ ಸಂಜೀವ್‌ ಬರ್ಮನ್‌ ದಂಪತಿ ಶಾಹದೋಲ್‌ನಲ್ಲಿ ಸಣ್ಣ ಹೋಟೆಲ್‌ವೊಂದನ್ನು ನಡೆಸುತ್ತಿದ್ದಾರೆ. ಟೊಮೆಟೊ ತರಕಾರಿಗಳ ಬೆಲೆ ಏರಿಕೆಯಿಂದ ಪರಿಸ್ಥಿತಿಗೆ ತಕ್ಕಂತೆ ಖಾದ್ಯಗಳನ್ನು ತಯಾರಿಸುತ್ತಿದ್ದರು. ಆದರೆ ಸಂಜೀವ್‌ ಬರ್ಮನ್‌ ಇತ್ತೀಚೆಗೆ ಅಡುಗೆ ಮಾಡುವಾಗ ಹೆಂಡತಿಯನ್ನು ಕೇಳದೇ ಎರಡೇ ಎರಡು ಟೊಮೆಟೊ ಹಣ್ಣುಗಳನ್ನು ಬಳಸಿದ್ದಾರೆ. ಇಷ್ಟಕ್ಕೇ ಸಿಟ್ಟಾದ ಪತ್ನಿ ಪತಿಯೊಂದಿಗೆ ಜಗಳ ತೆಗೆದಿದ್ದಾರೆ.

                   ಸಂಜೀವ್‌ ಹೇಳದೇ ಕೇಳದೆ ಎರಡು ಟೊಮೆಟೊ ಹಣ್ಣುಗಳನ್ನು ಬಳಸಿ ಸಾಂಬಾರು ತಯಾರಿಸಿದ್ದನ್ನು ಕಂಡು ಕೋಪಗೊಂಡ ಪತ್ನಿ ಜಗಳ ಆರಂಭಿಸಿದ್ದಾಳೆ. ಟೊಮೆಟೊದಿಂದ ಆರಂಭವಾದ ಸಣ್ಣ ಜಗಳ ಅತಿರೇಕಕ್ಕೆ ಹೋಗಿದ್ದು, ಕೊನೆಗೆ ಸಂಜೀವ್‌ ಬರ್ಮನ್‌ ಪತ್ನಿ, ಮಗುವಿನ ಜೊತೆ ಮನೆ ಬಿಟ್ಟು ಹೋಗಿದ್ದಾಳೆ. ಈ ಸಣ್ಣ ವಿಚಾರಕ್ಕೆ ಮನೆ ಬಿಟ್ಟು ಹೋದ ಪತ್ನಿಯನ್ನು ಸಂಜೀವ್‌ ಬರ್ಮನ್‌ ಹುಡುಕಿದ್ದಾರೆ. ಆದರೆ ಆಕೆ ಎಲ್ಲಿಯೂ ಪತ್ತೆಯಾಗದ ಕಾರಣ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ.

              ಸಂಜೀವ್ ಬರ್ಮನ್‌ ಹೆಂಡತಿ ನಾಪತ್ತೆಯ ಬಗ್ಗೆ ದೂರು ದಾಖಲಿಸಿರುವುದನ್ನು ಪೊಲೀಸ್‌ ಅಧಿಕಾರಿಯೊಬ್ಬರು ಖಚಿತಪಡಿಸಿದ್ದು, ಟೊಮೆಟೊಗಾಗಿ ಜಗಳ ಆರಂಭವಾಗಿದೆ ಎನ್ನುವುದನ್ನು ಸಹ ತಿಳಿಸಿದ್ದಾರೆ. ಸಂಜೀವ್ ಬರ್ಮನ್‌ ಅವರು ಅಡುಗೆ ಮಾಡುತ್ತಿದ್ದಾಗ ತರಕಾರಿ ಸಾಂಬಾರಿಗೆ ಎರಡು ಟೊಮೆಟೊ ಹಾಕಿದ್ದರಿಂದ ಜಗಳ ಆರಂಭವಾಗಿದ್ದು, ಅನುಮತಿ ಕೇಳಲಿಲ್ಲ ಎಂದು ಪತ್ನಿ ಮೂರು ದಿನದಿಂದ ಮಾತನಾಡಿಲ್ಲ, ಬಳಿಕ ಮಗುವಿನೊಂದಿಗೆ ಮನೆ ಬಿಟ್ಟು ಹೋಗಿದ್ದಾಳೆ ಎಂದು ಸಂಜೀವ್ ಬರ್ಮನ್‌ ದೂರು ನೀಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries