HEALTH TIPS

ಮನ್‌ ಕಿ ಬಾತ್‌: ಸ್ವಾತಂತ್ರ್ಯೋತ್ಸವಕ್ಕೂ ಮುನ್ನ 'ಮೇರಿ ಮಾಠಿ ಮೇರಾ ದೇಶ್‌' ಅಭಿಯಾನ: ಮೋದಿ

               ವದೆಹಲಿ: ಹುತಾತ್ಮ ಯೋಧರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಸ್ವಾತಂತ್ರ್ಯೋತ್ಸವಕ್ಕೂ ಮುನ್ನ 'ಮೇರಿ ಮಾಠಿ ಮೇರಾ ದೇಶ್' ಅಭಿಯಾನವನ್ನು ಪ್ರಾರಂಭಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

               ಮಾಸಿಕ 'ಮನ್‌ ಕಿ ಬಾತ್‌' ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, 'ದೇಶದೆಲ್ಲಡೆ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಖುಷಿ ಪ್ರತಿಧ್ವನಿಸುತ್ತಿದೆ.

                 ಆಗಸ್ಟ್‌ 15 ಸಮೀಪಿಸುತ್ತಿದ್ದು, ಹುತಾತ್ಮ ಯೋಧರಿಗೆ 'ಮೇರಿ ಮಾಠಿ ಮೇರಾ ದೇಶ್‌' ಅಭಿಯಾನದ ಮೂಲಕ ಗೌರವ ಸಲ್ಲಿಸಲಾಗುವುದು' ಎಂದರು.

                'ಯೋಧರ ಸ್ಮರಣಾರ್ಥವಾಗಿ ದೇಶದ ಗ್ರಾಮ ಪಂಚಾಯತಿಗಳಲ್ಲಿ ವಿಶೇಷ ಶಾಸನಗಳನ್ನು ಅಳವಡಿಸಲಾಗುವುದು' ಎಂದು ಹೇಳಿದರು.

              'ಈ ಅಭಿಯಾನದ ಜೊತೆಗೆ 'ಅಮೃತ ಕಲಶ ಯಾತ್ರೆ' ನಡೆಯಲಿದ್ದು, 7,500 ಕಲಶಗಳಲ್ಲಿ ದೇಶದ ನಾನಾ ಮೂಲೆಗಳಿಂದ ಮಣ್ಣನ್ನು ತರಲಾಗುವುದು. ಕಲಶದೊಂದಿಗೆ ಗಿಡಗಳನ್ನೂ ತರಲಾಗುವುದು. ರಾಷ್ಟ್ರೀಯ ಯುದ್ಧ ಸ್ಮಾರಕದ ಸಮೀಪ 'ಅಮೃತ ವಾಟಿಕಾ' ನಿರ್ಮಿಸಿ ಅದರಲ್ಲಿ ಕಲಶದ ಮಣ್ಣನ್ನು ಬಳಸಿ ಗಿಡವನ್ನು ನೆಡಲಾಗುವುದು' ಎಂದು ಹೇಳಿದರು.

                  ಈ ವೇಳೆ ಹಜ್‌ ಯಾತ್ರೆ ಬಗ್ಗೆ ಮಾತನಾಡಿದ ಅವರು, 'ಈ ಬಾರಿ ಐವತ್ತಲ್ಲ, ನೂರರಲ್ಲ ಸುಮಾರು 4 ಸಾವಿರ ಮುಸ್ಲಿಂ ಮಹಿಳೆಯರು ಹಜ್‌ ಯಾತ್ರೆಗೆ ಹೋಗಿದ್ದರು. ಇದರಿಂದ ತುಂಬಾ ಸಂತೋಷವಾಯಿತು. ಸೌದಿ ಸರ್ಕಾರಕ್ಕೂ ಧನ್ಯವಾದ ಹೇಳುತ್ತೇನೆ' ಎಂದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries