HEALTH TIPS

ದೊಕ್ಸುರಿ ಚಂಡಮಾರುತ ಅಬ್ಬರ: ಭಾರಿ ಮಳೆಯಿಂದ ಚೀನಾ ರಾಜಧಾನಿ ಬೀಜಿಂಗ್‌ ಜನ ಕಂಗಾಲು!

                ಬೀಜಿಂಗ್‌: ದೊಕ್ಸುರಿ ಚಂಡಮಾರುತ ಅಪ್ಪಳಿಸಿದ ಪರಿಣಾಮ ಉತ್ತರ ಚೀನಾದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಬೀಜಿಂಗ್‌ನಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಹೀಗಾಗಿ 20 ಸಾವಿರಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ.

                   ಶುಕ್ರವಾರ ಚೀನಾಕ್ಕೆ ಅಪ್ಪಳಿಸಿದ ಚಂಡಮಾರುತದಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ನದಿಗಳು ಉಕ್ಕಿ ಹರಿಯುತ್ತಿವೆ.

              ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಕೆಲವೆಡೆ ಭೂಕುಸಿತ ಕೂಡ ಸಂಭವಿಸಿದೆ.

ಅಪಾಯದ ಅಂಚಿನಲ್ಲಿದ್ದ 27 ಸಾವಿರಕ್ಕೂ ಹೆಚ್ಚು ಬೀಜಿಂಗ್‌ ನಿವಾಸಿಗಳನ್ನು ಸ್ಥಳಾಂತರಿಸಲಾಗಿದ್ದು, 20 ಸಾವಿರದಷ್ಟು ಜನ ಮನೆ ತೊರೆದು ಸುರಕ್ಷಿತ ಸ್ಥಳಗಳಲ್ಲಿ ನೆಲೆ ಕಂಡುಕೊಂಡಿದ್ದಾರೆ.

               ಗ್ರಂಥಾಲಯ, ವಸ್ತುಸಂಗ್ರಹಾಲಯ ಸೇರಿ ರಾಜಧಾನಿಯಾದ್ಯಂತ ಕೆಲವು ಪ್ರದೇಶಗಳನ್ನು ನಿಷೇಧಿತ ವಲಯ ಎಂದು ಘೋಷಿಸಲಾಗಿದೆ. ಅಲ್ಲದೆ ಅನಗತ್ಯವಾಗಿ ಮನೆಯಿಂದ ಹೊರಬರದಂತೆ ಜನತೆಗೆ ಸರ್ಕಾರ ಸೂಚನೆ ನೀಡಿದೆ.

                ಚಂಡಮಾರುತವು ಗಂಟೆಗೆ 175 ಕಿಮೀ ವೇಗದಲ್ಲಿ ಚೀನಾಕ್ಕೆ ಅಪ್ಪಳಿಸಿದ ಕಾರಣ ಹಲವು ಹಾನಿಗೆ ಕಾರಣವಾಯಿತು. 8 ಲಕ್ಷಕ್ಕೂ ಹೆಚ್ಚು ಜನ ಚಂಡಮಾರುತದಿಂದ ಹಾನಿ ಅನುಭವಿಸಿದ್ದಾರೆ ಎಂದು ಸ್ಟೇಟ್‌ ಮೀಡಿಯಾ ಭಾನುವಾರ ತಿಳಿಸಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries