ವಾಷಿಂಗ್ಟನ್ : ಬಿಲಿಯನೇರ್ ಎಲಾನ್ ಮಸ್ಕ್ ಅವರು ಹೊಸದಾಗಿ ಎಕ್ಸ್‌ಎಐ (xAI ) ಹೆಸರಿನ 'ಕೃತಕ ಬುದ್ಧಿ ಮತ್ತೆ' (ಎಐ-ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಸ್ಟಾರ್ಟ್‌ಅಪ್ ಸಂಸ್ಥೆಯನ್ನು ಆರಂಭಿಸುವುದಾಗಿ ಬುಧವಾರ ಘೋಷಣೆ ಮಾಡಿದ್ದಾರೆ.
0
samarasasudhi
ಜುಲೈ 13, 2023
ವಾಷಿಂಗ್ಟನ್ : ಬಿಲಿಯನೇರ್ ಎಲಾನ್ ಮಸ್ಕ್ ಅವರು ಹೊಸದಾಗಿ ಎಕ್ಸ್‌ಎಐ (xAI ) ಹೆಸರಿನ 'ಕೃತಕ ಬುದ್ಧಿ ಮತ್ತೆ' (ಎಐ-ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಸ್ಟಾರ್ಟ್‌ಅಪ್ ಸಂಸ್ಥೆಯನ್ನು ಆರಂಭಿಸುವುದಾಗಿ ಬುಧವಾರ ಘೋಷಣೆ ಮಾಡಿದ್ದಾರೆ.
ಟೆಸ್ಲಾ ಸಿಇಒ ಮತ್ತು ಟ್ವಿಟರ್ ಮಾಲೀಕ ಮಸ್ಕ್ ಈ ಸ್ಟಾರ್ಟ್‌ಅಪ್ ಅನ್ನು ಮುನ್ನಡೆಸಲಿದ್ದಾರೆ. ಈ ಹಿಂದೆ ಮಸ್ಕ್ ಹಲವು ಸಂದರ್ಭಗಳಲ್ಲಿ ಕೃತಕ ಬುದ್ಧಿಮತ್ತೆಯ ಅಭಿವೃದ್ಧಿಯನ್ನು ನಿಲ್ಲಿಸಬೇಕು. ಅದರ ವಲಯಕ್ಕೆ ನಿಯಂತ್ರಣದ ಅಗತ್ಯವಿದೆ ಎಂದು ಹೇಳಿದ್ದರು.
ಇದೀಗ 'ವಾಸ್ತವತೆಯ ಅರಿವಿಗೆ ಈ ಸಂಸ್ಥೆಯನ್ನು ಘೋಷಿಸಲಾಗಿದೆ' ಎಂದು ಮಸ್ಕ್ ಬುಧವಾರ ಟ್ವೀಟ್ ಮಾಡಿದ್ದಾರೆ.
ಸಂಸ್ಥೆಯಲ್ಲಿ ಮಸ್ಕ್ ಅವರೇ ಏಕೈಕ ನಿರ್ದೇಶಕರಾಗಿರಲಿದ್ದು, ಮಸ್ಕ್ ಕುಟುಂಬದ ಕಛೇರಿಯ ವ್ಯವಸ್ಥಾಪಕ ನಿರ್ದೇಶಕರಾದ ಜೇರೆಡ್ ಬಿರ್ಚಾಲ್ ಅವರು ಕಾರ್ಯದರ್ಶಿಯಾಗಿ ಇರಲಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕೃತಕ ಬುದ್ಧಿ ಮತ್ತೆಯು ಜಗತ್ತಿನಾದ್ಯಂತ ಹೆಚ್ಚು ಪ್ರಚಲಿತವಾಗುತ್ತಿದೆ. ಚೀನಾ, ಭಾರತ ಸೇರಿದಂತೆ ಹಲವು ದೇಶಗಳು 'ಕೃತಕ ಬುದ್ಧಿ ಮತ್ತೆ'ಯುಳ್ಳ ನ್ಯೂಸ್ ಆಂಕರ್‌ಗಳನ್ನೂ ಪರಿಚಯಿಸಿದ್ದು ಹೆಚ್ಚು ಸುದ್ದಿ ಮಾಡುತ್ತಿದೆ.