ಬದಿಯಡ್ಕ: ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳ ತೃತೀಯ ಚಾತುರ್ಮಾಸ್ಯದ ಅಂಗವಾಗಿ ನಡೆಯುತ್ತಿರುವ ಸಾಹಿತ್ಯ-ಸಾಹಿತ್ತಿಕ ವೈವಿಧ್ಯಮಯ ಕಾರ್ಯಕ್ರಮಗಳ ಭಾಗವಾಗಿ ನಾಡಿನ ಹಿರಿಯ ಸಾಹಿತಿ, ಯಕ್ಷಗಾನ ಅರ್ಥಧಾರಿ ವೈದ್ಯ ಡಾ.ರಮಾನಂದ ಬನಾರಿ ಅವರ ‘ಸದ್ದಾಗಿಯೂ ಸದ್ದಾಗದ ಸದ್ದುಗಳು’ ಕವಿತೆ-ಖಂಡಕಾವ್ಯ ಸಂಕಲನದ ಬಿಡುಗಡೆ ಆ.12 ರಂದು ಜಿಲ್ಲಾ ಕನ್ನಡ ಲೇಖಕರ ಸಂಘ ಹಾಗೂ ದೇಲಂಪಾಡಿ ಶ್ರೀಗೋಪಾಲಕೃಷ್ಣ ಯಕ್ಷಗಾನ ಸಂಘದ ಆಶ್ರಯದಲ್ಲಿ ಅಪರಾಹ್ನ 2 ಕ್ಕೆ ಶ್ರೀಮಠದ ಆವರಣದಲ್ಲಿ ನಡೆಯಲಿದೆ.
ಡಾ.ಪಿ.ಕೃಷ್ಣ ಭಟ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಭದಲ್ಲಿ ಡಾ.ವಸಂತಕುಮಾರ ತಾಳ್ತಜೆ ಕೃತಿ ಬಿಡುಗಡೆಗೊಳಿಸುವರು. ಶ್ರೀಮದ್ ಸಚ್ಚಿದಾನಂದ ಭಾರತೀ ಶ್ರೀಗಳು ಅನುಗ್ರಹ ಆಶೀರ್ವಚನ ನೀಡುವರು. ಕಸಾಪ ಜಿಲ್ಲಾಧ್ಯಕ್ಷ ಎಸ್.ವಿ.ಭಟ್ ಶುಭಹಾರೈಸುವರು. ಡಾ.ಪ್ರಮೀಳಾ ಮಾಧವ್ ಕೃತಿ ವಿಮರ್ಶೆ ನಡೆಸುವರು. ಬಳಿಕ ನಡೆಯುವ ಕವಿ ಸಮಯ ಕಾರ್ಯಕ್ರಮದಲ್ಲಿ ಡಾ.ಯು.ಮಹೇಶ್ವರಿ, ಶ್ರೀಕೃಷ್ಣಯ್ಯ ಅನಂತಪುರ, ಡಾ.ರತ್ನಾಕರ ಮಲ್ಲಮೂಲೆ, ವಿಜಯಲಕ್ಷ್ಮೀ ಶಾನುಭೋಗ್, ಸತ್ಯವತಿ ಕೊಳಚಪ್ಪು, ವೆಂಕಟ್ ಭಟ್ ಎಡನೀರು ಭಾಗವಹಿಸುವರು. ಈ ಸಂದರ್ಭ ಡಾ.ಅನ್ನಪೂರ್ಣೇಶ್ವರಿ ಯೇತಡ್ಕ ಅವರಿಂದ ಬನಾರಿಯವರ ಕಾವ್ಯ ಗಾಯನ ನಡೆಯಲಿದೆ. ಡಾ.ರಾಧಾಕೃಷ್ಣ ಬೆಳ್ಳೂರು, ಡಾ.ವೇದಾವತಿ, ವಿಶಾಲಾಕ್ಷ ಪುತ್ರಕಳ, ಆಶಾ ದಿಲೀಪ್ ಸುಳ್ಯಮೆ ನಿರ್ವಹಿಸುವರು.





