ಪೆರ್ಲ: ಪೆರ್ಲ ನಾಲಂದಾ ಕಾಲೇಜು ಗ್ರಾಮ ವಿಕಾಸ ಸಮಿತಿ ನೇತೃತ್ವದಲ್ಲಿ ಔಷಧೀಯ ಸಸ್ಯಗಳ ಸಂವರ್ಧನೆ ಹಾಗೂ ಸಂರಕ್ಷಣೆಯ ಭಾಗವಾಗಿ "ವಿವೇಕ ಸಂಜೀವಿನಿ" ಕಾರ್ಯಕ್ರಮ ಆಯೋಜಿಸಲಾಯಿತು. ಕಾಲೇಜು ಪ್ರಭಾರ ಪ್ರಾಂಶುಪಾಲ ಸುರೇಶ ಕೆ.ಎಂ.ಅಧ್ಯಕ್ಷತೆ ವಹಿಸಿದ್ದರು. ಆಯುರ್ವೇದ ವೈದ್ಯ ಡಾ. ಜಯಗೋವಿಂದ ಉಕ್ಕಿನಡ್ಕ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಔಷÀಧೀಯ ಸಸ್ಯಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿ ಔಷಧೀಯ ಸಸ್ಯಗಳ ಮಹತ್ವವನ್ನು ವಿವರಿಸಿದರು.
ಕಾರ್ಯಕ್ರಮದ ಅಂಗವಾಗಿ ನಾಟಿ ವೈದ್ಯೆ ನಳಿನಿ ಕುಂಬತ್ತೊಟ್ಟಿ ಅವರನ್ನು ಸನ್ಮಾನಿಸಲಾಯಿತು. ಗ್ರಾಮವಿಕಾಸ ಸಮಿತಿಯ ಯೋಜನಾಧಿಕಾರಿ ಶ್ರೀನಿಧಿ ಕೆ. ಸ್ವಾಗತಿಸಿದರು.ಕಾಮರ್ಸ್ ವಿಭಾಗದ ಪ್ರಾಧ್ಯಾಪಕಿ ಕಾವ್ಯಾ ಚಂದ್ರನ್ ವಂದಿಸಿದರು.ಹಿಂದಿ ಪ್ರಾಧ್ಯಾಪಕಿ ಶಾಂಭವಿ ನಿರೂಪಿಸಿದರು.




.jpg)
