ಪೆರ್ಲ: ಸ್ವರ್ಗ ಸ್ವಾಮೀ ವಿವೇಕಾನಂದ ಶಾಲೆಯ ಮೂರು ಹಾಗೂ ನಾಲ್ಕನೇ ತರಗತಿಯ ವಿದ್ಯಾರ್ಥಿಗಳ ಪಠ್ಯ ಚಟುವಟಿಕೆಗೆ ಪೂರಕವಾಗಿ "ಕಾಡಿನ ಕೊಡುಗೆ ಜ್ಞಾನದ ಕಡೆಗೆ" ಪರಿಸರ ನಡಿಗೆ ವಿಶೇಷ ಚಟುವಟಿಕೆಯನ್ನು ಆಯೋಜಿಸಲಾಯಿತು. ಶಿಕ್ಷಕ ಪದ್ಮನಾಭ ಆರ್. ವಾಣೀನಗರ ರಕ್ಷಿತಾರಣ್ಯದ ಬೃಹದಾಕಾರದ ವಿವಿಧ ಜಾತಿಯ ಮರಗಳನ್ನು ಪರಿಚಯಿಸಿದರು. ವಿದ್ಯಾರ್ಥಿಗಳು ಕಣಿವೆ, ಕೈತೋಡು ನೀರ ಝರಿಗಳನ್ನು ವೀಕ್ಷಿಸುವ ಮೂಲಕ ನೀರಿನ ಮೂಲಗಳನ್ನು ತಿಳಿದುಕೊಂಡರು. ಪರಾವಲಂಬಿ ಸಸ್ಯಗಳು, ಆವಾಸ ವ್ಯವಸ್ಥೆಯಲ್ಲಿ ಮರಗಳ ಪಾತ್ರ, ಬೇರು ವ್ಯೂಹ, ಎಲೆಗಳ ನಿರೀಕ್ಷಣೆ, ಸೂಕ್ಷ್ಮ ಜೀವಿಗಳ ನಿರೀಕ್ಷಣೆ ಇತ್ಯಾದಿ ಪಠ್ಯ ಚಟುವಟಿಕೆಗೆ ಪೂರಕ ಮಾಹಿತಿ ಪಡೆದರು.ಮಕ್ಕಳಿಗೆ ಕಾಲ್ನಡಿಗೆಯ ದೂರದ ಪ್ರಯಾಣ ಹೊಸ ಅನುಭವ ನೀಡಿತು. ಶಿಕ್ಷಕಿ ಕಲಾವತಿ ಹಾಗೂ ದಿವ್ಯ ಶಿರಂತಡ್ಕ ಸಹಕರಿಸಿದರು.




.jpg)
