ಕಾಸರಗೋಡು: ಹೆಚ್ಚುತ್ತಿರುವ ಮಾದಕ ವಸ್ತುಗಳ ಸೇವನೆ ವಿರುದ್ಧ ಜಾಗೃತಿ ಅಭಿಯಾನದ ಅಂಗವಾಗಿ ತ್ರಿವರ್ಣ ಧ್ವಜದಲ್ಲಿ ಮುದ್ರಿತವಾಗಿರುವ `ನಾಟ್ ಟು ಡ್ರಗ್ಸ್~ ಎಂಬ ಸಂದೇಶವಿರುವ ಸೀಡ್ ಪೆನ್ನುಗಳನ್ನು ಪ್ರದರ್ಶಿಸಲು ಹೊಸದುರ್ಗ ಜಿಲ್ಲಾ ಕಾರಾಗೃಹ ಸಿದ್ಧತೆ ನಡೆಸಿದೆ.
ಕೈದಿಗಳು ಇದಕ್ಕಾಗಿ ಸುಮಾರು 2500 ಸೀಡ್ ಪೆನ್ನುಗಳನ್ನು ಬಳಸಿಕೊಂಡಿದ್ದಾರೆ. ಕಾರಾಗೃಹದಲ್ಲಿ ಬೆಳೆದ ಬೆಂಡೆ, ಮೆಣಸಿನಕಾಯಿ ಮತ್ತು ಅಲಸಂಡೆ ಬೀಜಗಳಿವೆ. ಮಾದಕವಸ್ತು ಪ್ರಕರಣದಲ್ಲಿ ಜೈಲಿನಲ್ಲಿ ಕಳೆಯುತ್ತಿರುವ ನೈಜೀರಿಯಾದ ಮಹಿಳೆ ಸೇರಿದಂತೆ ಸುಮಾರು 15 ಮಂದಿ ಕೈದಿಗಳು ಕಳೆದ ಎರಡು ವಾರಗಳಿಂದ ಕಲೆ ಮತ್ತು ಕರಕುಶಲ ಉತ್ಪನ್ನಗಳ ತಯಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ವಾಹನಗಳ ಮೇಲೆ ನೇತು ಹಾಕಬಹುದಾದ ಬ್ಯಾನರ್ ಮತ್ತು ಭಿತ್ತಿಪತ್ರಗಳನ್ನು ಪ್ರದರ್ಶಿಸಲಾಗುತ್ತದೆ. ಆಗಸ್ಟ್ 14 ರಂದು ಬೆಳಗ್ಗೆ 10.30ಕ್ಕೆ 'ಫ್ರೀಡಂ ಫೆಸ್ಟ್-23'ಮೇಳವನ್ನು ಶಾಸಕ ಇ.ಚಂದ್ರಶೇಖರನ್ ಉದ್ಘಾಟಿಸಲಿದ್ದಾರೆ.
: ಹೊಜದುರ್ಗ ಜಿಲ್ಲಾ ಕಾರಾಗೃಹದ ಕೈದಿಗಳು ಬೀಜವನ್ನು ಬಳಸಿ ನಿರ್ಮಿಸಿದ ಪೆನ್ನುಗಳನ್ನು ಒಟ್ಟುಸೇರಿಸಿ ತ್ರಿವರ್ಣ ಧ್ವಜವನ್ನು ರಚಿಸಿದ್ದಾರೆ.


