ಕಾಸರಗೋಡು: ವಿದ್ಯಾರ್ಥಿಗಳು ಮಾದಕ ವಸ್ತುಗಳಿಂದ ದೂರವಿದ್ದು, ಇಂತಹ ಸಾಮಾಜಿಕ ಪಿಡುಗಿನ ವಿರುದ್ಧ ಧ್ವನಿಯೆತ್ತಬೇಕು ಎಂದು ಕೇರಳ ಮಹಿಳಾ ಆಯೋಗ ಸದಸ್ಯೆ ಕುಞËಯಿಷ ತಿಳಿಸಿದ್ದಾರೆ. ಅವರು ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಕೇರಳ ರಾಜ್ಯ ಮಹಿಳಾ ಆಯೋಗ ಆಯೋಜಿಸುವ 'ಹದಿಹರೆಯದ ವಿದ್ಯಾರ್ಥಿಗಳನ್ನು ಶಕ್ತಿಪಡಿಸೋಣ' ಎಂಬ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡಿದರು.
ಆಡಳಿತ ಮಂಡಳಿ ಅಧ್ಯಕ್ಷ ಸಂಜೀವ ರೈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಎಣ್ಮಕಜೆ ಗ್ರಾಂ ಪಂಚಾಯಿತಿ ಅಧ್ಯಕ್ಷ ಸೋಮಶೇಖರ ಜೆ ಎಸ್, ಶಾಲಾ ಮೆನೇಜರ್ ಮಿತ್ತೂರ್ ಪುರುಷೋತ್ತಮ ಭಟ್ ಗ್ರಾಮ ಪಂಚಾಯಿತಿ ಸದಸ್ಯ ,ಬಿ.ಎಸ್ ಗಾಂಭೀರ್, ಶಾಲಾ ಮುಖ್ಯ ಶಿಕ್ಷಕ ಹರಿಪ್ರಸಾದ್ ಶೆಟ್ಟಿ, ಪಿ ಟಿ ಎ ಅಧ್ಯಕ್ಷ ರಾಧಾಕೃಷ್ಣ ಆಚಾರ್ಯ, ಆಡಳಿತ ಮಂಡಳಿ ಸದಸ್ಯ ನಿವೃತ್ತ ಶಾಲಾ ಅಧ್ಯಾಪಕ ಲೋಕನಾಥಾ ಶೆಟ್ಟಿ ಉಪಸ್ಥಿತರಿದ್ದರು. ಹೈಯರ್‍ಸೆಕೆಂಡರಿ ಶಾಲಾ ಪ್ರಾಂಶುಪಾಲ ಪದ್ಮನಾಭ ಶೆಟ್ಟಿ ಸ್ವಾಗತಿಸಿದರು. ರಾಜೇಶ್ ಸಿ ಎಚ್ ಕಾರ್ಯಕ್ರಮ ನಿರೂಪಿಸಿದರು. ವಾಣಿ ಕೆ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ನಿರ್ಮಲ್ ಕುಮಾರ್ ಕಾರಡ್ಕ ಅವರಿಂದ ತರಗತಿ ನಡೆಯಿತು. ಅಧ್ಯಾಪಕ ಸಂದೀಪ್ ಕುಮಾರ್ ನೇತೃತ್ವ ವಹಿಸಿದರು.


