ಬದಿಯಡ್ಕ: ಬದಿಯಡ್ಕದ ಚಿನ್ಮಯ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ ಕಾರ್ಯಕ್ರಮವಾದ "ಚಿನ್ಮಯ ಫೆಸ್ಟ್" ನ ಉದ್ಘಾಟನಾ ಸಮಾರಂಭವು ಶಾಲಾ ಸಭಾಭವನದಲ್ಲಿ ಜರಗಿತು. ಪಿಲಿಂಗಲ್ಲು ಕೃಷ್ಣ ಭಟ್ ಸಮಾರಂಭ ಉದ್ಘಾಟಿಸಿ ಮಾತನಾಡಿ, ಮಕ್ಕಳ ಪ್ರತಿಭೆ ಅನಾವರಣಗೊಳಿಸುವ ಕೆಲಸ ಹೆತ್ತವರು ಹಾಗೂ ಶಿಕ್ಷಕರಿಂದ ನಡೆಯಬೇಕು. ಇಂತಹ ಫೆಸ್ಟ್‍ಗಳು ಮಕ್ಕಳ ಪ್ರತಿಭೆ ಅನಾವರಣಕ್ಕೆ ಸಹಕಾರಿಯಾಗುವುದಾಗಿ ತಿಳಿಸಿದರು.
ಶಾಲೆಯ ಮೇಲ್ವಿಚಾರಕ ಪ್ರಶಾಂತ್ ಬೆಳಿಂಜ ಉಪಸ್ಥಿತರಿದ್ದರು. ಶಾಲೆಯ ಮುಖ್ಯೋಪಾಧ್ಯಾಯನಿ ಮಾನಸ ಸ್ವಾಗತಿಸಿದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿಶಾಲೆಯ ವಿದ್ಯಾರ್ಥಿ ಅಕ್ಷಯ ಬಾಳಿಗ ವಂದಿಸಿದರು. ಶಾಲಾ ವಿದ್ಯಾರ್ಥಿನಿ ಸಮನ್ವಿತ ಕಾರ್ಯಕ್ರಮ ನಿರೂಪಿಸಿದರು.

