ಮುಳ್ಳೇರಿಯ: ಓಣಂ ಸ್ವಾಗತಕ್ಕೆ ಕುಟುಂಬಶ್ರೀ ಸಿಡಿಎಸ್ ಸನ್ನದ್ದವಾಗಿದ್ದು, ಚೆಂಡುಮಲ್ಲಿಗೆ ಕೃಷಿ ತಯಾರಿಯಲ್ಲಿ ನಿರತವಾಗಿವೆ. ಓಣಂ ಪ್ರಮುಖ ಆಕರ್ಷಣೆಯಾದ ಪೂಕಳ ಅಥವಾ ಪುಷ್ಪ ರಂಗೋಲಿಗೆ ಮೆರುಗು ನೀಡಲು ಈ ಬಾರಿ ಕುಟುಂಬಶ್ರೀಯ ಚೆಂಡುಮಲ್ಲಿಗೆಯೂ ಮಾರುಕಟ್ಟೆಗೆ ಬರಲಿದೆ. ಕುಟುಂಬಶ್ರೀ ಜಿಲ್ಲಾ ಮಿಷನ್ ನೇತೃತ್ವದಲ್ಲಿ ಜಿಲ್ಲೆಯ 165 ಘಟಕಗಳು ಚೆಂಡುಮಲ್ಲಿಗೆ ಕೃಷಿ ಸಿದ್ಧಪಡಿಸುತ್ತಿವೆ. 20.5 ಎಕರೆ ಭೂಮಿಯಲ್ಲಿ ಹೂವುಗಳನ್ನು ಬೆಳೆಯಲಾಗುತ್ತದೆ. ಪಳ್ಳಿಕ್ಕೆರೆÀ, ಚೆಮ್ಮನಾಡು, ಕುಂಬಳೆ, ಕಯ್ಯೂರು-ಚಿಮೇನಿ ಮತ್ತು ಚೆರುವತ್ತೂರು ಸಿಡಿಎಸ್ ವ್ಯಾಪ್ತಿಯ ವಿವಿಧೆಡೆ ಚೆಂಡುಮಲ್ಲಿಗೆ ಬೆಳೆಯಲಾಗುತ್ತಿದೆ.
ಕಯ್ಯೂರ್ ಚಿಮೇನಿ ಸಿಡಿಎಸ್ ಅಡಿಯಲ್ಲಿ ಹೆಚ್ಚಿನ ಹೂವುಗಳನ್ನು ಬೆಳೆಸಲಾಗುತ್ತದೆ. ಕಯ್ಯೂರು ಚಿಮೇನಿ ಸಿಡಿಎಸ್ ಅಡಿಯಲ್ಲಿ 100 ಘಟಕಗಳು ಚೆಂಡುಮಲ್ಲಿಗೆಯ ವಿಸ್ಕøತ ಬೆಳೆಯಲ್ಲಿ ನಿರತವಾಗಿದೆ. 10 ಸೆಂಟ್ಸ್ ನಿಂದ 50 ಸೆಂಟ್ಸ್ ವರೆಗೆ ಕೃಷಿ ಘಟಕಗಳಿವೆ. ಹಳದಿ ಮತ್ತು ಕಿತ್ತಳೆ ಬಣ್ಣದ ಚೆಂಡುಮಲ್ಲಿಗೆ ಹೂವುಗಳ ಮೊಳಕೆ ಗಿಡ ಮತ್ತು ಬೀಜಗಳನ್ನು ಕೃಷಿಗೆ ಬಳಸಲಾಯಿತು. ಮುಂಗಾರು ಬೆಳೆ ಆಗಿರುವುದರಿಂದ ಹೂವಿನ ಆರೈಕೆ ಹೆಚ್ಚು ಜಾಗರೂಕತೆಯಿಂದ ಕೂಡಿತ್ತು. ಕುಟುಂಬಶ್ರೀಯ ಓಣಂ ಮಾರುಕಟ್ಟೆಗಳ ಮೂಲಕ ಹೂಗಳನ್ನು ಮಾರುಕಟ್ಟೆಗೆ ತರಲಾಗುವುದು. ಓಣಂ ಹಬ್ಬಕ್ಕೆ ತಮಿಳುನಾಡು, ಕರ್ನಾಟಕದಂತಹ ರಾಜ್ಯಗಳಿಂದ ಕೇರಳಕ್ಕೆ ಹೂವುಗಳನ್ನು ಹೆಚ್ಚಾಗಿ ತರಲಾಗುತ್ತದೆ. ಆದರೆ ಈ ಬಾರಿ ಕುಟುಂಬಶ್ರೀಯ ಸ್ಥಳೀಯ ಹೂವುಗಳು ಓಣಂ ಮಾರುಕಟ್ಟೆಯಲ್ಲಿ ಸ್ಟಾರ್ ಆಗಲಿವೆ.
ಜೂನ್ ಮೊದಲ ವಾರದಲ್ಲಿ ಹೂವುಗಳನ್ನು ಬೆಳೆಸಲು ಪ್ರಾರಂಭಿಸಿದರು. ಕುಟುಂಬಶ್ರೀ ಸಂಘಕೃಷಿ ಗುಂಪುಗಳು ತೋಟಗಾರಿಕೆಯ ಮೇಲೆ ಕೇಂದ್ರೀಕರಿಸುವ ಓಣಂ ಅನ್ನು ಉತ್ತಮ ಆದಾಯವನ್ನು ಗಳಿಸುವ ಅವಕಾಶವೆಂದು ಪರಿಗಣಿಸುತ್ತವೆ. ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಘಟಕಗಳು ಸಾಗುವಳಿಗೆ ಮುಂದೆ ಬಂದಿವೆ. ಚೆಂಡುಮಲ್ಲಿಗೆ ಕೃಷಿಯಿಂದ ಕುಟುಂಬಶ್ರೀ ಉತ್ತಮ ಇಳುವರಿ ಪಡೆಯುವಂತಾಗಲಿ ಎಂಬ ನಿರೀಕ್ಷೆಯಲ್ಲಿ ಘಟಕಗಳಿವೆ.




.jpg)
