ಮುಳ್ಳೇರಿಯ: ಆರೋಗ್ಯ ವಲಯದಲ್ಲಿ ಬೆಳ್ಳೂರು ಗ್ರಾಮ ಪಂಚಾಯತಿಯನ್ನು 2025 ರ ವೇಳೆಗೆ ಮಾದರಿ ಗ್ರಾಮವಾಗಿ ಉನ್ನತೀಕರಿಸಲು ಯೋಜಿಸಲಾಗಿದ್ದು ಗ್ರಾಮ ಪಂಚಾಯತಿಯನ್ನು ಆರೋಗ್ಯ, ನೈರ್ಮಲ್ಯ ಮತ್ತು ಸಾಮಾಜಿಕ ಸ್ಥಾನಮಾನದ ವಿಷಯದಲ್ಲಿ ಉನ್ನತ ಸ್ಥಾನಕ್ಕೆ ತರಲು "ಸೇಫ್ ಬೆಳ್ಳೂರು" ಯೋಜನೆಯನ್ನು ಪ್ರಾರಂಭಿಸಲಾಯಿತು. ಸೇಫ್ ಆಕ್ಷನ್ ಫಾರ್ ಹೆಲ್ತ್ ಎಂಬ ಧ್ಯೇಯದೊಂದಿಗೆ ಬೆಳ್ಳೂರು ಗ್ರಾಮ ಪಂಚಾಯತಿ ಮತ್ತು ಕುಟುಂಬ ಆರೋಗ್ಯ ಕೇಂದ್ರ ಬೆಳ್ಳೂರು ಈ ಯೋಜನೆ ಪ್ರಾರಂಭಿಸಿದೆ.
ಇದರ ಉದ್ಘಾಟನೆಯನ್ನು ಬೆಳ್ಳೂರು ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀಧರ ಎಂ. ನಿರ್ವಹಿಸಿ ಮಾತನಾಡಿ, ಸೇಫ್ ಬೆಳ್ಳೂರು, ಸ್ವಚ್ಛ ಬೆಳ್ಳೂರು, ಹಸಿರು ಬೆಳ್ಳೂರು ಮಾಡಲು ಎಲ್ಲರೂ ಬದ್ಧರಾಗಿದ್ದೇವೆ ಎಂದು ಹೇಳಿದರು. ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಜಯಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉಪಾಧ್ಯಕ್ಷೆ ಗೀತಾ ಮುಖ್ಯಭಾಷಣ ಮಾಡಿದರು. ವೈದ್ಯಾಧಿಕಾರಿ ಶ್ರೀಸ್ಮಾ.ವರ್ಗೀಸ್ ಅವರು ಸೇಫ್ ಬೆಳ್ಳೂರು ಬಗ್ಗೆ ವಿವರಿಸಿದರು. ಉಪನಿರ್ದೇಶಕ ಡಾ. ರವಿಪ್ರಸಾದ್ ಯೋಜನೆಯ ಅನುಷ್ಠಾನದ ಕುರಿತು ಸೂಚನೆ ನೀಡಿದರು. ಪ್ರೌಢಶಾಲಾ ಮುಖ್ಯಶಿಕ್ಷಕಿ ವಾರಿಜಾ ನೇರೋಳು, ಸಿಬ್ಬಂದಿ ಕಾರ್ಯದರ್ಶಿ ದಾಸಪ್ಪ ಮಾಸ್ತರ್, ಪಿ.ಟಿ.ಎ.ಅಧ್ಯಕ್ಷ ಮಹಮ್ಮದ್ ಬಶೀರ್, ಇತರೆ ಜನಪ್ರತಿನಿಧಿಗಳು, ಶಿಕ್ಷಕರು, ವ್ಯಾಪಾರಿಗಳು, ಕಾರ್ಮಿಕ ಮುಖಂಡರು, ಪೌರಕಾರ್ಮಿಕರು ಮೊದಲಾದವರು ಅಭಿನಂದಿಸಿ ಮಾತನಾಡಿದರು. ಪ್ರಭಾರ ಆರೋಗ್ಯ ನಿರೀಕ್ಷಕ ವಿ.ಪಿ.ವಿನೋದ್ ಯೋಜನೆ ಯಶಸ್ವಿಗೊಳಿಸಲು ಎಲ್ಲರ ಸಹಕಾರ ಕೋರಿದರು. ಕಿರಿಯ ಆರೋಗ್ಯ ನಿರೀಕ್ಷಕ ಅರುಣ್ ವಂದಿಸಿದರು.




.jpg)
