ಮಂಜೇಶ್ವರ: ಎಡ ಸರ್ಕಾರ ರಾಜ್ಯದಲ್ಲಿ ಹಿಂದೂ ದೇವರುಗಳನ್ನು ನಿರಂತರ ನಿಂದನೆ ಮಾಡಿ ನಿಂದನಾತ್ಮಕ ಹೇಳಿಕೆ ನೀಡುವುದು ಖಂಡನೀಯ. ಹಿಂದುಗಳ ತಾಳ್ಮೆ ಸಿಡಿದೆದ್ದರೆ ಅದು ದೇಶದಲ್ಲಿ ಕಮ್ಯುನಿಸ್ಟ್ ನಾಶಕ್ಕೆ ನಾಂದಿ ಆಗಲಿದೆ. ಸ್ಪೀಕರ್ ಶಂಸೀರ್ ಗಣಪತಿ ದೇವರ ಬಗ್ಗೆ ನೀಡಿಸಿರುವುದು ಹಿಂದೂಗಳಿಗೆ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ತನ್ನ ಇಸ್ಲಾಂ ಧರ್ಮದ ಮೂಢನಂಬಿಕೆ, ಅನಾಚಾರಗಳ ಬಗ್ಗೆ ಹೇಳಲು ಧೈರ್ಯವಿಲ್ಲದ ಶಂಸೀರ್ ಹಿಂದು ದೇವರುಗಳ ಬಗ್ಗೆ ಹೇಳಿಕೆ ನೀಡಿರುವ ಉದ್ದೇಶ ಎಂದರೆ ನಿಷೇಧಿಸಲ್ಪಟ್ಟ ಪಿ.ಎಫ್.ಐ ಯ ವೋಟ್ ಗಳಿಸಲು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಆರೋಪಿಸಿದರು.
ವರ್ಕಾಡಿ ಪಂಚಾಯತ್ ಬೂತ್ 37 ರಲ್ಲಿ ಜರಗಿದ ಬೂತ್ ದರ್ಶನ ಯಾತ್ರೆ ಉದ್ಘಾಟಿಸಿ ಅವರು ಮಾತನಾಡಿದರು.
ಮಜೀರ್ ಪಲ್ಲ ಪೇಟೆಯಲ್ಲಿ ಪಕ್ಷದ ವತಿಯಿದ ಅದ್ದೂರಿ ಸ್ವಾಗತ ನೀಡಲಾಯಿತು. ನಂತರ ವಾರ್ಡಿನ ಪ್ರಮುಖರ ಭೇಟಿ, ದೇವಾಲಯ ಸಂದರ್ಶನ, ಹಿರಿಯ ನೇತಾರರ ಭೇಟಿ ಮಾಡಲಾಯಿತು.
ಸಂಜೆ ಬೂತ್ ಸಮಿತಿ ಸಭೆ ಜರಗಿತು. ಮಂಡಲ ಅಧ್ಯಕ್ಷ ಆದರ್ಶ್ ಬಿಎಂ, ಪಂಚಾಯತಿ ಅಧ್ಯಕ್ಷ ದೂಮಪ್ಪ ಶೆಟ್ಟಿ, ನೇತಾರರದ ಮಣಿಕಂಠ ರೈ, ಆಶ್ವಿನಿ ಪಜ್ವ, ತುಳಸಿ ಕುಮಾರಿ, ಸುಧಾಮ ಗೋಸಾಡ, ರವಿರಾಜ್, ಎ.ಕೆ.ಕಯ್ಯಾರ್, ಹರಿಶ್ಚಂದ್ರ ಎಂ, ಚಂದ್ರಶೇಖರ್ ವರ್ಕಾಡಿ, ಸುರೇಶ್ ಕುಮಾರ್ ಶೆಟ್ಟಿ, ರಂಜಿತ್ ಕಣ್ಣೂರು, ಪ್ರಮೀಳಾ ಸಿ.ನಾಯ್ಕ್, ವಿಜಯ್ ರೈ ಉಪಸ್ಥಿತರಿದ್ದರು. ಚುನಾಯಿತ ಸದಸ್ಯರು ಕಾರ್ಯಕರ್ತರು ಜೊತೆಗಿದ್ದರು. ಭಾಸ್ಕರ ಪೊಯ್ಯೆ ಸ್ವಾಗತಿಸಿ, ರಾಜಕುಮಾರ್ ವಂದಿಸಿದರು.




.jpg)
