ಉಪ್ಪಳ: ಭಾರತೀಯ ಜನತಾ ಪಕ್ಷ ರಾಷ್ಟ್ರದಾದ್ಯಂತ ಹಮ್ಮಿಕೊಂಡಿರುವ ಬೂತ್ ದರ್ಶನ್ ಕಾರ್ಯಕ್ರಮದ ಭಾಗವಾಗಿ ಕುಂಬಳೆ ಮಂಡಲ ಮಂಗಲ್ಪಾಡಿ ಪಂಚಾಯತಿನ ಚೆರುಗೋಳಿ 90 ನಂಬರ್ ಬೂತಿನ ಕಾರ್ಯಕ್ರಮದಲ್ಲಿ ಬಿಜೆಪಿ ಕೇರಳ ರಾಜ್ಯ ಅಧ್ಯಕ್ಷ ಕೆ ಸುರೇಂದ್ರನ್ ಭಾಗವಹಿಸಿದರು. ಬೆಳಗ್ಗೆ ಅಂಬಾರು ಸದಾಶಿವ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಸಲಾಯಿತು. ಬಳಿಕ ಬೂತಿನ ಹಿರಿಯ ಮತದಾರರ, ಕಾರ್ಯಕರ್ತರ ಮನೆ ಸಂಪರ್ಕ ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ ರವೀಶ್ ತಂತ್ರಿ ಕುಂಟಾರು ಅವರ ನೇತೃತ್ವದಲ್ಲಿ ನಡೆಯಿತು.
ಅಪರಾಹ್ನ ಬೂತ್ ಸಮಿತಿ ಸಭೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್ ರೈ, ರಾಜ್ಯ ಸಮಿತಿ ಸದಸ್ಯ ಕೋಳಾರು ಸತೀಶ್ಚಂದ್ರ ಭಂಡಾರಿ, ಜಿಲ್ಲಾ ಉಪಾಧ್ಯಕ್ಷ ಸುಧಾಮ ಗೋಸಾಡ , ಎಸ್ ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎ..ಕೆ ಕಯ್ಯಾರ್, ಮಂಡಲ ಅಧ್ಯಕ್ಷ ಸುನಿಲ್ ಅನಂತಪುರ. ಪ್ರಧಾನ ಕಾರ್ಯದರ್ಶಿಗಳಾದ ವಸಂತ್ ಕುಮಾರ್ ಮಯ್ಯ, ಅನಿಲ್ ಮಣಿಯಂಪಾರೆ, ಪಂಚಾಯತಿ ಪದಾಧಿಕಾರಿಗಳಾದ ರಾಮಚಂದ್ರ ಬಲ್ಲಾಳ್, ಬೂತ್ ಅಧ್ಯಕ್ಷ ಶ್ರೀಧರ, ನೇತಾರರು ಕಾರ್ಯಕರ್ತರು ಮುಂತಾದವರು ಭಾಗವಹಿಸಿದರು.



.jpg)
