HEALTH TIPS

ಚಿಕ್ಕ ಪ್ರಾಯದಲ್ಲಿ ಹೃದಯಾಘಾತಕ್ಕೆ ಕಾರಣವಾಗುತ್ತಿರುವ ಪ್ರಮುಖ 3 ಅಂಶಗಳು

 ಇತ್ತೀಚಿನ ವರ್ಷಗಳಲ್ಲಿ ತುಂಬಾ ಚಿಕ್ಕ ಪ್ರಾಯದವರಲ್ಲಿ ಹೃದಯಾಘಾತದ ಸಮಸ್ಯೆ ಹೆಚ್ಚಾಗುತ್ತಿದೆ, ಅದರಲ್ಲೂ 40 ವರ್ಷದ ಕೆಳಗಿನವರಲ್ಲಿ ಈ ಬಗೆಯ ಸಮಸ್ಯೆ ಹೆಚ್ಚಾಗುತ್ತಿರುವುದು ಕಳವಳಕಾರಿ ವಿಷಯವೇ ಸರಿ. ಬದಲಾದ ಜೀವನಶೈಲಿ ಚಿಕ್ಕ ಪ್ರಾಯದಲ್ಲಿ ಹೃದಯಾಘಾತಕ್ಕೆ ಪ್ರಮುಖ ಕಾರಣವಾಗುತ್ತಿದೆ.


ಅದರಲ್ಲೂ ಈ ಕೆಳಗಿನ ಪ್ರಮುಖ ಕಾರಣಗಳಿಂದ ಹೃದಯಾಘಾತದ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ.

ಮಾಡರ್ನ್ ಜೀವನಶೈಲಿ: ಅನೇಕ ಆರೋಗ್ಯ ಸಮಸ್ಯೆಗಳಿಗೆ ಮಾಡರ್ನ್‌ ಜೀವನಶೈಲಿ ಕೂಡ ಪ್ರಮುಖ ಕಾರಣವಾಗುತ್ತಿದೆ. ಒಂದೇ ಕಡೆ ತುಂಬಾ ಹೊತ್ತು ಕೂತು ಕೆಲಸ ಮಾಡುವುದು, ದೈಹಿಕ ವ್ಯಾಯಾಮ ಇಲ್ಲದಿರುವುದು, ಮದ್ಯಪಾನ, ಧೂಮಪಾನ, ಅತ್ಯಧಿಕ ಕ್ಯಾಲೋರಿ ಕಡಿಮೆ ಪೋಷಕಾಂಶವಿರುವ ಆಹಾರ ಸೇವನೆ ಇವೆಲ್ಲಾ ಹೃದಯಾಘಾತದ ಸಮಸ್ಯೆ ಹೆಚ್ಚಾಗಿಸುತ್ತಿದೆ.
ಮಾನಸಿಕ ಒತ್ತಡ: ಈಗೀನ ಯುವ ಜನತೆ ತುಂಬಾನೇ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾತೆ, ಕಡಿಮೆಯಾದ ನಿದ್ದೆ ಅತಿಯಾದ ಮಾನಸಿಕ ಒತ್ತಡ ಇವೆಲ್ಲಾ ಮನುಷ್ಯನ ಆರೋಗ್ಯ ಹಾಳು ಮಾಡುತ್ತಿದೆ. ಇದರ ಜೊತೆಗೆ ಆರೋಗ್ಯಕರ ಆಹಾರಕ್ರಮ ಕೂಡ ಪಾಲನೆ ಮಾಡುತ್ತಿಲ್ಲ, ಈ ಎಲ್ಲಾ ಕಾರಣದಿಂದ ಹೃದಯದ ಅಪಾಯದ ಸಾಧ್ಯತೆ ಹೆಚ್ಚಾಗುತ್ತಿದೆ. 
ಒಬೆಸಿಟಿ: ಅತ್ಯಧಿಕ ಮೈ ತೂಕ ಕೂಡ ಹೃದಯಾಘಾತದ ಅಪಾಯ ಹೆಚ್ಚಿಸುತ್ತಿದೆ. ಅತ್ಯಧಿಕ ಮೈ ತೂಕ ಹೊಂದಿದವರು ಇದ್ದಕ್ಕಿದ್ದಂತೆ ಮೈ ತೂಕ ತುಂಬಾ ಕಡಿಮೆ ಮಾಡಿದರೆ ಇದರಿಂದ ಹೃದಯದ ನರಗಳಿಗೆ ಹಾನಿಯುಂಟಾಗುವುದು. ಮೈ ತೂಕವನ್ನು ಕಡಿಮೆ ಮಾಡಲು ಬಯಸುವವರು ಯಾವುದೇ ಡಯಟ್‌ ಮೊರೆ ಹೋಗುವುದಕ್ಕಿಂತ ಮಿತ ಆಹಾರ ಸೇವನೆ ಜೊತೆಗೆ ವ್ಯಾಯಾಮ ಮಾಡುವ ಮೂಲಕ ಮೈ ತೂಕವನ್ನು ಕಡಿಮೆ ಮಾಡಬೇಕು.

ಹೃದಯದ ಆರೋಗ್ಯಕ್ಕೆ ಜೀವನಶೈಲಿಯಲ್ಲಿ ಈ ಬದಲಾವಣೆ ಮಾಡುವುದು ಒಳ್ಳೆಯದು:
* ಹಣ್ಣು-ತರಕಾರಿ ಹೆಚ್ಚಾಗಿ ಬಳಸಬೇಕು: ಹಣ್ಣುಗಳು, ತರಕಾರಿಗಳು, ಮೊಳಕೆ ಬರಿಸಿದ ಕಾಳುಗಳು, ನಟ್ಸ್ ಇವುಗಳನ್ನು ನಿಮ್ಮ ಆಹಾರಕ್ರಮದಲ್ಲಿ ಬಳಸಬೇಕು. ವಿಟಮಿನ್ಸ್, ಖನಿಜಾಂಶಗಳು, ಪೋಷಕಾಂಶಗಳು ಅಧಿಕವಿರುವ ಆಹಾರ ಸೇವಿಸಬೇಕು.

* ಆರೋಗ್ಯಕರ ಕೊಬ್ಬಿನ ಆಹಾರ ಸೇವಿಸಬೇಕು: ಸಂಸ್ಕರಿಸಿದ ಆಹಾರ ಸೇವನೆ ಕಡಿಮೆ ಮಾಡಬೇಕು, ಏಕೆಂದರೆ ಅವುಗಳಲ್ಲಿ ಅನಾರೋಗ್ಯಕರ ಕೊಬ್ಬಿನಂಶ, ಸೋಡಿಯಂ, ಸಕ್ಕರೆಯಂಶವಿರುತ್ತದೆ.

* ಉಪ್ಪು ಮಿತಿಯಲ್ಲಿ ಬಳಸಬೇಕು: ರಕ್ತದೊತ್ತಡ ನಿಯಂತ್ರಣದಲ್ಲಿಡಲು ಉಪ್ಪು ಮಿತಿಯಲ್ಲಿ ಸೇವಿಸಬೇಕು. ಉಪ್ಪಿನಲ್ಲಿ ಹಾಕಿಟ್ಟ ಆಹಾರ ಪದಾರ್ಥ ಬಳಕೆ ಕಡಿಮೆ ಮಾಡಿ.

ಸಾಕಷ್ಟು ನೀರು ಕುಡಿಯಿರಿ: ಮೈ ತೂಕ ಕಾಪಾಡಲು, ದೇಹದ ಅಂಗಾಂಗಗಳು ಸರಿಯಾಗಿ ಕಾರ್ಯನಿರ್ವಹಿಸಲು ಸಾಕಷ್ಟು ನಿರು ಕುಡಿಯಿರಿ. ದಿನದಲ್ಲಿ 8 ಲೋಟ ನೀರು ಕುಡಿಯಿರಿ, ಅಂದರೆ ಎರಡು ಲೋಟದಷ್ಟು ನೀರು ಕುಡಿಯಿರಿ.

ಜೀವನಶೈಲಿಯಲ್ಲಿ ಈ ಬದಲಾವಣೆ ಮಾಡಿ
ಧೂಮಪಾನ ಮಾಡಬೇಡಿ
ನಡೆದಾಡಿ: ಒಂದೇ ಕಡೆ ಕೂತಲ್ಲಿಯೇ ಕೂರಬೇಡಿ, ಸ್ವಲ್ಪ ನಡೆದಾಡಿ. ದಿನದಲ್ಲಿ 30 ನಿಮಿಷ ಕಡ್ಡಾಯ ವ್ಯಾಯಾಮ ಮಾಡಿ, ವಾರದಲ್ಲಿ 150 ನಿಮಿಷ ವ್ಯಾಯಾಮ ಮಾಡಬೇಕು.
* ಆರೋಗ್ಯಕರ ಮೈ ತೂಕ ಹೊಂದಿ: ಹೃದಯಘಾವನ್ನು ತಡೆಗಟ್ಟಲು ಆರೋಗ್ಯಕರ ಮೈ ತೂಕವನ್ನು ಹೊಂದಬೇಕು. ಕೆಲವರು ಮೈ ತೂಕ ಕಡಿಮೆ ಮಾಡಲು ಸಪ್ಲಿಮೆಂಟ್ಸ್ ತೆಗೆದುಕೊಳ್ಳುವುದು, ಪೌಡರ್ ತೆಗೆದುಕೊಳ್ಳುವುದು ಮಾಡುತ್ತಾರೆ, ಆದರೆ ಈ ರೀತಿ ಮಾಡಲೇಬಾರದು, ಇದರಿಂದ ಆರೋಗ್ಯಕ್ಕೆ ಹಾನಿಯುಂಟಾಗುವುದು. ಇನ್ನು ಕೆಲವರು ಕ್ರಾಷ್‌ ಡಯಟ್, ಕೀಟೋ ಡಯಟ್‌ ಹೀಗೆ ವಿವಿಧ ಡಯಟ್‌ ಮೂಲಕ ಮೈ ತೂಕ ಕಡಿಮೆ ಮಾಡಲು ಬಯಸುತ್ತಾರೆ. ಆದರೆ ಅದರ ಬದಲಿಗೆ ಮಿತಿಯಲ್ಲಿ ತಿಂದು ವ್ಯಾಯಾಮ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು.
ಚೆನ್ನಾಗಿ ನಿದ್ದೆ ಮಾಡಿ: ಮಲಗಲು ಹೋಗುವಾಗ ಮೊಬೈಲ್‌ ತೆಗೆದುಕೊಂಡು ಹೋಗಬೇಡಿ, ಚೆನ್ನಾಗಿ ನಿದ್ದೆ ಮಾಡಿ. ದಿನದಲ್ಲಿ 8 ಗಂಟೆ ನಿದ್ದೆ ಅವಶ್ಯಕ.
* ಮಾನಸಿಕ ಒತ್ತಡ ಕಡಿಮೆ ಮಾಡಲು ಧ್ಯಾನ ಮಾಡಿ.


Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries