ಕಾಸರಗೋಡು: ರಾಜ್ಯದಲ್ಲಿ ಲೋಕೋಪಯೋಗಿ ಇಲಾಖೆಗೆ ಒಳಪಟ್ಟಿರುವ 30 ಸಾವಿರ ಕಿ.ಮೀ ರಸ್ತೆಗಳಲ್ಲಿ ಶೇ.50ರಷ್ಟು ರಸ್ತೆಗಳನ್ನು ಬಿಎಂ ಎಂಡ್ ಬಿಸಿ ತಂತ್ರಜ್ಞಾನದಲ್ಲಿ ಮೇಲ್ದರ್ಜೆಗೇರಿಸಲಾಗಿದೆ ಎಂದು ಲೋಕೋಪಯೋಗಿ ಹಾಗೂ ಪ್ರವಾಸೋದ್ಯಮ ಖಾತೆ ಸಚಿವ, ವಕೀಲ ಪಿ.ಎ.ಮುಹಮ್ಮದ್ ರಿಯಾಜ್ ತಿಳಿಸಿದ್ದಾರೆ. ಅವರು ಶುಕ್ರವಾರ ಮೇಲ್ದರ್ಜೆಗೇರಿಸಲಾದ ಪೆರಿಯಾ-ಒಡೆಯಂಚಾಲ್ ರಸ್ತೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಐದು ವರ್ಷಗಳಲ್ಲಿ ಈ ಸಾಧನೆ ನಡೆಸಲು ಯೋಜನೆಯಿರಿಸಿಕೊಳ್ಳಲಾಗಿದ್ದರೂ, ಎರಡುವರೆ ವರ್ಷಕ್ಕೂ ಮೊದಲೇ ಈ ಯಶಸ್ಸು ಸಾಧಿಸಲಾಗಿದೆ. ಉದುಮ ಕ್ಷೇತ್ರದ 308 ಕಿ.ಮೀ ರಸ್ತೆಗಳ ಪೈಕಿ 212 ಕಿ.ಮೀ ರಸ್ತೆಗಳನ್ನು ಬಿಎಂ ಏಂಡ್ ಬಿಸಿ ಗುಣಮಟ್ಟದ ರಸ್ತೆಗಳನ್ನಾಗಿ ಪರಿವರ್ತಿಸಲಾಗಿದೆ ಎಂದು ತಿಳಿಸಿದರು.
ಪೆರಿಯ ಲೋಕೋಪಯೋಗಿ ಇಲಾಖೆ ವಿಶ್ರಾಂತಿಗೃಹ ಸನಿಹ ನಡೆದ ಕಾರ್ಯಕ್ರಮದಲ್ಲಿ ಶಾಸಕ ಸಿ. ಎಚ್. ಶಾಸಕ ಕುಞಂಬು ಅಧ್ಯಕ್ಷತೆ ವಹಿಸಿದ್ದರು. ಸಂಸದ ರಾಜಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಲೋಕೋಪಯೋಗಿ ಇಲಾಖೆ ರಸ್ತೆವಿಭಾಗ ಸೂಪರಿಂಟೆಂಡೆಂಟ್ ಅಭಿಯಂತೆ ಯು.ಪಿ.ಜಯಶ್ರೀ ವರದಿ ವಾಚಿಸಿದರು.
ಕಾಞಂಗಾಡು ಬ್ಲಾಕ್ ಪಂಚಾಯಿತಿ ಉಪಾಧ್ಯಕ್ಷೆ ಕೆ.ವಿ.ಶ್ರೀಲತಾ, ಪುಲ್ಲೂರು-ಪೆರಿಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಕೆ. ಅರವಿಂದಾಕ್ಷನ್, ಸ್ಥಾಯಿ ಸಮಿತಿ ಅಧ್ಯಕ್ಷೆ ಸುಮಾ ಕುಞÂಕೃಷ್ಣನ್, ಪಂಚಾಯಿತಿ ಸದಸ್ಯರಾದ ಟಿ. ರಾಮಕೃಷ್ಣನ್ ನಾಯರ್, ಟಿ. ವಿ. ಅಶೋಕನ್, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ಕಟ್ಟಡ ವಿಭಾಗದ ಸೂಪರಿಂಟೆಂಡಿಂಗ್ ಎಂಜಿನಿಯರ್ ಇ. ಜಿ. ವಿಶ್ವಪ್ರಕಾಶ ಸ್ವಾಗತಿಸಿದರು. ಮvಲೋಕೋಪಯೋಗಿ ಇಲಾಖೆ ಮಾಜಿ. ಎಂಜಿನಿಯರ್ ಕೆ. ರಾಜೀವ್ ಧನ್ಯವಾದವಿತ್ತರು.





