ಬದಿಯಡ್ಕ: ಚಿನ್ಮಯ ವಿದ್ಯಾಲಯ ಬದಿಯಡ್ಕದಲ್ಲಿ ಸ್ವಾಮಿ ಚಿನ್ಮಯಾನಂದ ಅವರ ಸಮಾಧಿ ದಿನವನ್ನು ಆಚರಿಸಲಾಯಿತು. ಚಿನ್ಮಯ ಮಿಷನ್ ಸಂಸ್ಥಾಪಕ, ಗೀತಜ್ಞಾನ ಯಜ್ಞಾಚಾರ್ಯರು ಆದ ಗುರುದೇಚಿನ್ಮಯ ಮಿಷನ್ ಸಂಸ್ಥಾಪಕ, ಗೀತಜ್ಞಾನ ಯಜ್ಞಾಚಾರ್ಯರು ಆದ ಗುರುದೇವಸ್ವಾಮಿ ಚಿನ್ಮಯಾನಂದರ 30ನೇ ಮಹಾಸಮಾಧಿü ದಿನವನ್ನು ಆರಾಧನಾ ದಿನವನ್ನಾಗಿ ವಿವಿಧ ಕಾರ್ಯಕ್ರಮಗಳೊಂದಿಗೆ ಎಲ್ಲ ಚಿನ್ಮಯ ಶಿಕ್ಷಣ ಸಂಸ್ಥೆಗಳಲ್ಲಿ ಆಚರಿಸಲಾಗುತ್ತಿದೆ.
ಗುರು ಸ್ತೋತ್ರ, ಭಜನೆ, ಭಗವದ್ಗೀತೆ ಪಾರಾಯಣ, ಅಷ್ಟೋತ್ತರ ಅರ್ಚನೆ ಸೇರಿದಂತೆ ವಿವಿಧ ಕಾರ್ಯಕ್ರಮ ಜರಗಿತು. ಕಾರ್ಯಕ್ರಮದಲ್ಲಿ ಬದಿಯಡ್ಕ ಚಿನ್ಮಯ ವಿದ್ಯಾಲಯದ ಮೇಲ್ವಿಚಾರಕ ಪ್ರಶಾಂತ್ ಬೆಳಿಂಜ ಅವರು ಶ್ರೀಗುರುಗಳ ಜೀವನ ಸಾಧನೆ ಮೌಲ್ಯಗಳನ್ನು ತಿಳಿಸಿದರು. ಶಾಲೆಯ ಪ್ರಾಂಶುಪಾಲೆ ಮಾನಸಾ, ಶಿಕ್ಷಕರು, ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.





