ಬದಿಯಡ್ಕ: ಜಗತ್ತು ಭಾರತವನ್ನು ಗುರುತಿಸುವ ಕಾಲದಲ್ಲಿ ನಾವಿದ್ದೇವೆ. ಪೂರ್ವಜರ ಕ್ಷಾತ್ರತೇಜಸ್ಸಿನ ಫಲದಿಂದಾಗಿ ಹಿಂದೂ ಧರ್ಮ ಉಳಿದುಕೊಂಡಿದೆ. ಇಂತಹ ಸಂದರ್ಭದಲ್ಲಿ ನಾವು ಮಲಗಿ ನಿದ್ರಿಸದೆ ನಮ್ಮ ಕರ್ತವ್ಯವನ್ನು ಮಾಡುವಲ್ಲಿ ಒಗ್ಗಟ್ಟಾಗಬೇಕಾಗಿದೆ. ನಮ್ಮ ಧರ್ಮ ಸಂಸ್ಕøತಿಗೆ ಪೂರಕವಾದ ಶಾಲೆಗಳಲ್ಲಿ ನಮ್ಮ ಮಕ್ಕಳು ವಿದ್ಯಾಭ್ಯಾಸವನ್ನು ಮಾಡಬೇಕು. ಈ ನಿಟ್ಟಿನಲ್ಲಿ ಎಲ್ಲಾ ಪೋಷಕರೂ ಜಾಗೃತರಾಗಬೇಕು ಎಂದು ಪ್ರಖರ ಯುವ ವಾಗ್ಮಿ ಕುಮಾರಿ ಹಾರಿಕಾ ಮಂಜುನಾಥ್ ಬೆಂಗಳೂರು ಹೇಳಿದರು.
ವಿಶ್ವಹಿಂದೂ ಪರಿಷತ್ ಮಾತೃಶಕ್ತಿ ಬದಿಯಡ್ಕ ಪ್ರಖಂಡ ಇದರ ಆಶ್ರಯದಲ್ಲಿ ಬದಿಯಡ್ಕ ಶ್ರೀ ಗಣೇಶಮಂದಿರದಲ್ಲಿ ಶುಕ್ರವಾರ ಜರಗಿದ 6ನೇ ವರ್ಷದ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ಪೂಜೆಯ ಸಂದರ್ಭ ಜರಗಿದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಇತ್ತೀಚೆಗೆ ಜಾರ್ಖಂಡ್‍ನಲ್ಲಿ ಹಣೆಗೆ ಕುಂಕುಮವಿಟ್ಟು ಶಾಲೆಗೆ ತೆರಳಿದ ಬಾಲಕಿಯನ್ನು ಹೀಯಾಳಿಸಿ ಆಕೆ ಆತ್ಮಹತ್ಯೆಗೆ ಶರಣಾಗುವಂತೆ ಮಾಡಲಾಗಿದೆ. ಕೇರಳರಾಜ್ಯದಲ್ಲಿ ಹಿಂದುಗಳ ಮೇಲೆ ನಿರಂತರ ಹೊಡೆತಗಳು ಬೀಳುತ್ತಿದ್ದರೂ ಹಿಂದೂ ಧರ್ಮವನ್ನು ಎತ್ತಿಹಿಡಿಯುವ ಬಲಷ್ಠವಾದ ಕಾರ್ಯಕರ್ತರಿದ್ದಾರೆ. ನಮ್ಮ ಮನೆ, ಊರು, ರಾಜ್ಯ, ದೇಶ ಬಲಿಷ್ಠವಾಗಬೇಕಿದ್ದರೆ ಹಿಂದೂ ಧರ್ಮವಿರಬೇಕು ಎಂಬುದನ್ನು ಪ್ರತಿಯೊಬ್ಬ ಹಿಂದುವೂ ಅರ್ಧೈಸಿಕೊಳ್ಳಬೇಕಿದೆ. ನಮ್ಮ ಸಮಾಜದ ಮುಂದೆ ದುಷ್ಕøತ್ಯಗಳು ನಡೆಯುತ್ತಾ ಇದೆ. ಪ್ರೀತಿಯ ಬಲೆಯಲ್ಲಿ ಲವ್ ಜಿಹಾದ್ ನಡೆಯುತ್ತಿದೆ ಎಂಬುದನ್ನು ಪ್ರತಿಯೊಂದು ಮನೆಯ ತಂದೆತಾಯಂದಿರು ಅರಿತುಕೊಳ್ಳಬೇಕು. ಅಂತಹ ಘಟನೆಗಳಿಗೆ ಅವಕಾಶಗಳೇ ಇಲ್ಲದಂತಹ ಶಾಲೆ, ಕಾಲೇಜಿನಲ್ಲಿ ನಮ್ಮ ಮಕ್ಕಳ ವಿದ್ಯಾಭ್ಯಾಸವನ್ನು ಮಾಡಬೇಕು. ಇಂದಿನ ಮಕ್ಕಳು ಸುರಕ್ಷಿತರಾಗಿದ್ದರೆ ಮಾತ್ರ ಭವಿಷ್ಯದ ಭಾರತ ಸುರಕ್ಷಿತವಾಗಿರುತ್ತದೆ ಎಂದರು.
ಮಾತೃಶಕ್ತಿ ಪ್ರಖಂಡ ಅಧ್ಯಕ್ಷೆ ಜಯಂತಿ ಚೆಟ್ಟಿಯಾರ್ ಅಧ್ಯಕ್ಷತೆ ವಹಿಸಿದ್ದರು. ವಿಶ್ವಹಿಂದೂ ಪರಿಷತ್ ಬದಿಯಡ್ಕ ಪ್ರಖಂಡ ಮುಖಂಡ ಹರಿಪ್ರಸಾದ ಪುತ್ರಕಳ, ದುರ್ಗಾವಾಹಿನಿ ಜಿಲ್ಲಾ ಸಹಸಂಚಾಲಕಿ ನಂದಿನಿ ಮುನಿಯೂರು ಶುಭಾಶಂಸನೆಗೈದರು. ಮಂಜುನಾಥ ಮಾನ್ಯ ಕಾರ್ಯಕ್ರಮ ನಿರೂಪಿಸಿದರು. ಉತ್ಸವ ಸಮಿತಿ ಸಂಚಾಲಕಿ ಪುಷ್ಪಾ ಬದಿಯಡ್ಕ ಸ್ವಾಗತಿಸಿ, ದುರ್ಗಾವಾಹಿನಿ ಸಂಚಾಲಕಿ ಕವಿತಾ ಕಿಶೋರ್ ವಂದಿಸಿದರು.




.jpg)
