ಬದಿಯಡ್ಕ : ಇಲ್ಲಿಗೆ ಸಮೀಪದ ಪುಳಿತ್ತಡಿಯ ವೀಣಾವಾದಿನಿ ಸಂಗೀತ ವಿದ್ಯಾಪೀಠಂನಲ್ಲಿ ಆ.27ರಂದು ಬೆಳಗ್ಗೆ 10ರಿಂದ ಓಣಂ ಉತ್ಸವ ಹಾಗೂ ಸಂಸ್ಥೆಯ ನಾಮಪಲಕದ ಉದ್ಘಾಟನೆಯು ನಡೆಯಲಿದೆ. ವಿದ್ಯಾಪೀಠದ ನಾಮ ಫಲಕವನ್ನು ಕಾಸರಗೋಡು ಶಾಸಕ ಎನ್ ಎ ನೆಲ್ಲಿಕ್ಕುನ್ನು ಉದ್ಘಾಟಿಸುವರು. ಕಾರ್ಯಕ್ರಮದಲ್ಲಿ ಸಾಮಾಜಿಕ ಮುಖಂಡರಾಧ ಆನಂದ ಕೆ ಮವ್ವಾರು, ಎಸ್ ಮೀನಾಕ್ಷಿ ಶುಭಾಶಂಸನೆ ಮಾಡಲಿದ್ದಾರೆ.ಈ ಸಂದರ್ಭದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳಿಂದ ಹೂವಿನ ರಂಗವಲ್ಲಿ (ಪೂಕಳಂ) ಹಾಗೂ ಓಣಂ ಭೋಜನ (ಓಣಂ ಸದ್ಯ) ಏರ್ಪಡಿಸಲಾಗಿದೆ. ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥರಾದ ವಿದ್ವಾನ್ ಬಳ್ಳಪದವು ಯೋಗೀಶ ಶರ್ಮ ಅವರು ವಿದ್ವಾನ್ ಪೆರ್ಲ ಕೃಷ್ಣ ಭಟ್ ಅವರ ಕುರಿತು ಸಂಸ್ಮರಣಾ ಭಾಷಣ ಮಾಡಲಿದ್ದಾರೆ.

