ಮಂಜೇಶ್ವರ: ಆನೆಕಲ್ಲು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ವರ್ಕಾಡಿ ಪಂಚಾಯತಿ ಸದಸ್ಯೆ ಸೀತಾ ಧ್ವಜಾರೋಹಣ ನೆರವೇರಿಸಿ, ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಶಾಲಾ ಪಿಟಿಎ ಅಧ್ಯಕ್ಷ ಎ.ಎಮ್.ಅಶ್ರಫ್ ಸಭಾಧ್ಯಕ್ಷತೆಯನ್ನು ವಹಿಸಿ ಶುಭಹಾರೈಸಿದರು.
ಆನೆಕಲ್ಲು ಅಂಚೆಕಛೇರಿಯ ಅಂಚೆಯಣ್ಣರಾಗಿ 37ವರ್ಷ ಸೇವೆಗೈದು 2023ಅಗಸ್ಟ್ 10ರಂದು ನಿವೃತ್ತರಾದ ಕರ್ತಮೇರ ಅವರಿಗೆ ಶಾಲೆಯ ವತಿಯಿಂದ ಗೌರವಾರ್ಪಣೆಯನ್ನು ಸಲ್ಲಿಸಲಾಯಿತು. ಶಾಲಾ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ಶಾಲೆಯ ನಿವೃತ್ತ ಮುಖ್ಯಶಿಕ್ಷಕ ಸತ್ಯನಾರಾಯಣ ಭಟ್ಟ, ಶಾಲಾ ಪ್ರಬಂಧಕ ಪ್ರತಿನಿಧಿ ಮುರಳಿಶ್ಯಾಮ್, ಎಮ್.ಪಿ.ಟಿ.ಎ.ಅಧ್ಯಕ್ಷೆ ದೀಕ್ಷಿತಾ, ಉಪಾಧ್ಯಕ್ಷೆ ಭಾರತಿ, ಪಿಟಿಎ ಉಪಾಧ್ಯಕ್ಷ ಅಬ್ದುಲ್ ಖಾದರ್, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಅನ್ವರ್ ಅಹಮ್ಮದ್, ಮಾಜಿ ಪಿಟಿಎ ಅಧ್ಯಕ್ಷ ಮೂಸಕುಂಞÂ್ಞ, ಶಾಲಾ ಪ್ರಧಾನಾಧ್ಯಾಪಿಕೆ ರೇಣುಕಾ ಶುಭಹಾರೈಸಿದರು. ವಿವಿಧ ಸ್ಪರ್ಧಾ ವಿಜೇತರಿಗೆ ಗಣ್ಯರು ಬಹುಮಾನ ವಿತರಿಸಿದರು.
ಅಧ್ಯಾಪಕರು, ರಕ್ಷಕರು, ಹಳೆವಿದ್ಯಾರ್ಥಿಗಳು, ಊರಿನ ಗಣ್ಯರು, ಸ್ವಾತಂತ್ರ್ಯ ಪರ್ವದ ಶುಭಕಾಲದಲ್ಲಿ ಶಾಲೆಗೆ ಬಂದು ಮಕ್ಕಳೊಂದಿಗೆ ಸಂತಸವನ್ನು ಹಂಚಿಕೊಂಡರು.




.jpg)
