ಮಂಜೇಶ್ವರ: ಮೀಯಪದವು ಶ್ರೀ ವಿದ್ಯಾವರ್ಧಕ ಹಯರ್ ಸೆಕೆಂಡರಿ ಶಾಲೆಯಲ್ಲಿ 77 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಶಾಲಾ ಸಂಚಾಲಕ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಧ್ವಜಾರೋಹಣ ನೆರವೇರಿಸಿ 'ತ್ಯಾಗ,ಬಲಿದಾನದ ಮೂಲಕ ನಾವು ಪಡೆದ ಸ್ವಾತಂತ್ರ್ಯವನ್ನು ಗೌರವದಿಂದ ಕಾಣಬೇಕು. ಹಿರಿಯರ ಅರ್ಪಣಾ ಬದುಕು ಇಂದು ನಾವು ಅನುಭವಿಸುವ ಸ್ವಾತಂತ್ರ್ಯವಾಗಿದೆ. ಪ್ರತಿಯೊಬ್ಬನಲ್ಲೂ ರಾಷ್ಟ್ರೀಯ ಚಿಂತನೆ ಮೊಳಕೆಯೊಡೆದು ದೇಶಪ್ರೇಮ,ಸಾಮರಸ್ಯ ಭಾವನೆ ಬೆಳೆಯಬೇಕು' ಎಂದರು.
ವಿದ್ಯಾರ್ಥಿಗಳಿಂದ ಸ್ವಾತಂತ್ರ್ಯ ಗೀತೆ ಗಾಯನ, ಭಾಷಣಗಳು ಜರುಗಿದವು. ಎಂ.ಪಿ.ಟಿ.ಎ ಅಧ್ಯಕ್ಷೆ ಲಲಿತ, ಹಿರಿಯ ಅಧ್ಯಾಪಕ ರಾಜಾರಾಮ ರಾವ್, ಹಯರ್ ಸೆಕೆಂಡರಿ ಪ್ರಾಂಶುಪಾಲ ರಮೇಶ ಶುಭಹಾರೈಸಿದರು.ಮುಖ್ಯ ಶಿಕ್ಷಕ ಶಿವಶಂಕರ ಭಟ್ ವಂದಿಸಿದರು. ಡಾ. ವಿಘ್ನಶ್ ಶರ್ಮ ಕಾರ್ಯಕ್ರಮ ನಿರೂಪಿಸಿದರು. ಕಳೆದ ಸಾಲಿನ ಎಸ್ಸೆಸ್ಸಲ್ಸಿ ಪರೀಕ್ಷೆಯಲ್ಲಿ ಅದ್ವಿತೀಯ ಸಾಧನೆಗೈದ ಸಾಧಕ ವಿದ್ಯಾರ್ಥಿಗಳಿಗೆ ಪುರಸ್ಕಾರ ಹಾಗೂ ನಗದು ಬಹುಮಾನ ವಿತರಣೆ ಜರುಗಿತು. ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಳ್ಳಲಾದ ವಿವಿಧ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು.




.jpg)
