HEALTH TIPS

ಕೇರಳ ಸಹಿತ ಅಲ್ಪಸಂಖ್ಯಾತರ ವಿದ್ಯಾರ್ಥಿ ವೇತನ ವಿತರಣೆಯಲ್ಲಿ ಭಾರಿ ವಂಚನೆ; 830 ಸಂಸ್ಥೆಗಳು ನಕಲಿ, ಸಿಬಿಐ ತನಿಖೆ ಆರಂಭ

              ನವದೆಹಲಿ: ರಾಷ್ಟ್ರೀಯ ಸ್ಕಾಲರ್‍ಶಿಪ್ ಪೋರ್ಟಲ್‍ನಲ್ಲಿ ನೋಂದಣಿಯಾಗಿರುವ 830 ಅಲ್ಪಸಂಖ್ಯಾತ ಸಂಸ್ಥೆಗಳು ನಕಲಿ ಎಂದು ಕೇಂದ್ರ ಅಲ್ಪಸಂಖ್ಯಾತರ ಸಚಿವಾಲಯ ಪತ್ತೆ ಮಾಡಿದೆ.

              ಕೇರಳ ಸೇರಿದಂತೆ ರಾಜ್ಯಗಳ 830 ಅಲ್ಪಸಂಖ್ಯಾತ ಸಂಸ್ಥೆಗಳು ಐದು ವರ್ಷಗಳ ಕಾಲ 144 ಕೋಟಿ ಮೌಲ್ಯದ ವಿದ್ಯಾರ್ಥಿವೇತನವನ್ನು ಪಡೆದುಕೊಂಡಿವೆ.  ಅಲ್ಪಸಂಖ್ಯಾತರ ವಿದ್ಯಾರ್ಥಿ ವೇತನದಲ್ಲಿ ರಾಷ್ಟ್ರವ್ಯಾಪಿ ಭಾರಿ ವಂಚನೆ ನಡೆದಿದೆ.

            ನ್ಯಾಷನಲ್ ಕೌನ್ಸಿಲ್ ಆಫ್ ಅಪ್ಲೈಡ್ ಎಕನಾಮಿಕ್ ರಿಸರ್ಚ್ (ಎನ್‍ಸಿಎಇಆರ್) ಅಲ್ಪಸಂಖ್ಯಾತರ ವಿದ್ಯಾರ್ಥಿವೇತನಕ್ಕೆ ಸಂಬಂಧಿಸಿದಂತೆ ವರ್ಷವಿಡೀ ನಡೆಸಿದ ತನಿಖೆಯಲ್ಲಿ ವಂಚನೆ ಬೆಳಕಿಗೆ ಬಂದಿದೆ. ಪ್ರಕರಣವನ್ನು ಸಿಬಿಐಗೆ ವಹಿಸಲಾಗಿದೆ ಎಂದು ಅಲ್ಪಸಂಖ್ಯಾತರ ಸಚಿವಾಲಯದ ಮೂಲಗಳು ತಿಳಿಸಿವೆ. 21 ರಾಜ್ಯಗಳಾದ್ಯಂತ ಎನ್.ಸಿ.ಎ.ಆರ್.ಇ  ಸಮೀಕ್ಷೆ ನಡೆಸಿದ 1,572 ಸಂಸ್ಥೆಗಳಲ್ಲಿ, 830 ಅಲ್ಪಸಂಖ್ಯಾತ ಸಂಸ್ಥೆಗಳು ನಕಲಿ ಅಥವಾ ನಿಷ್ಕ್ರಿಯವಾಗಿರುವುದು ಪತ್ತೆಯಾಗಿದೆ. ದೇಶದಲ್ಲಿ 1.8 ಲಕ್ಷ ಸಂಸ್ಥೆಗಳು ಎನ್‍ಎಸ್‍ಪಿಯಲ್ಲಿ ನೋಂದಣಿಯಾಗಿರುವುದರಿಂದ, ನಕಲಿ ಸಂಸ್ಥೆಗಳು ಹೆಚ್ಚಾಗಬಹುದು ಎಂದು ಸೂಚಿಸಲಾಗಿದೆ.

           ಕೇರಳದಲ್ಲಿ ವಿದ್ಯಾರ್ಥಿವೇತನದ ಪ್ರಯೋಜನಕ್ಕಾಗಿ ನೋಂದಾಯಿಸಿದ ವಿದ್ಯಾರ್ಥಿಗಳ ಸಂಖ್ಯೆಗಿಂತ ಹೆಚ್ಚಿನ ವಿದ್ಯಾರ್ಥಿವೇತನವನ್ನು ವಿತರಿಸಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ. ಮಲಪ್ಪುರಂನ ಒಂದು ಬ್ಯಾಂಕ್ ಶಾಖೆಯಿಂದ 66,000 ವಿದ್ಯಾರ್ಥಿವೇತನವನ್ನು ವಿತರಿಸಲಾಗಿದೆ. ಆದರೆ ಇದು ಅರ್ಹ ಮಕ್ಕಳ ಸಂಖ್ಯೆಗಿಂತ ಹೆಚ್ಚು. ಜಮ್ಮು ಮತ್ತು ಕಾಶ್ಮೀರದ ಅನಂತನಾಗ್‍ನಲ್ಲಿ 5000 ವಿದ್ಯಾರ್ಥಿಗಳು ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ 7000 ಶಿಷ್ಯವೇತನ ವಿತರಿಸಲಾಗಿದೆ.

           830 ಸಂಸ್ಥೆಗಳ ಪೈಕಿ ಛತ್ತೀಸ್‍ಗಢದಲ್ಲಿ 62 ಮತ್ತು ರಾಜಸ್ಥಾನದಲ್ಲಿ 99 ಸಂಸ್ಥೆಗಳು ನಿಷ್ಕ್ರಿಯವಾಗಿವೆ. ಅಸ್ಸಾಂನಲ್ಲಿ ಶೇ.68, ಕರ್ನಾಟಕ ಶೇ.64, ಉತ್ತರಾಖಂಡ ಶೇ.60, ಉತ್ತರಪ್ರದೇಶ ಶೇ.44, ಮಧ್ಯಪ್ರದೇಶ ಶೇ.40 ಮತ್ತು ಪಶ್ಚಿಮ ಬಂಗಾಳ ಶೇ.39 ನಕಲಿ ಅಥವಾ ನಿಷ್ಕ್ರಿಯವಾಗಿವೆ.

                ಅಲ್ಪಸಂಖ್ಯಾತರ ವಿದ್ಯಾರ್ಥಿವೇತನವನ್ನು 2016 ರಲ್ಲಿ ಡಿಜಿಟಲೀಕರಣಗೊಳಿಸಲಾಯಿತು ಮತ್ತು ಎನ್.ಎಸ್.ಪಿ ಗೆ ತರಲಾಯಿತು. ಸಚಿವಾಲಯವು ಅಲ್ಪಸಂಖ್ಯಾತರ ವಿದ್ಯಾರ್ಥಿವೇತನ ಯೋಜನೆಗಳ ಅಡಿಯಲ್ಲಿ ಐದು ವರ್ಷಗಳಲ್ಲಿ ವಾರ್ಷಿಕವಾಗಿ 2000 ಕೋಟಿಗಳಷ್ಟು ಹಣವನ್ನು ಮಂಜೂರು ಮಾಡಿದೆ. 2007-08 ಮತ್ತು 2021-22 ರ ನಡುವಿನ ಮೊತ್ತ 22,000 ಕೋಟಿ ರೂ.

          ಸಂಸತ್ತಿನ ವಾರ್ಷಿಕ ಅಧಿವೇಶನದಲ್ಲಿ, ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆ ಸ್ಮೃತಿ ಇರಾನಿ ಅವರು ಕೇಂದ್ರ ಸರ್ಕಾರವು ಸಂಸ್ಥೆಗಳು ಮತ್ತು ಫಲಾನುಭವಿಗಳ ಪರಿಶೀಲನೆಯನ್ನು ಪ್ರಾರಂಭಿಸಿದೆ ಮತ್ತು ಅಲ್ಪಸಂಖ್ಯಾತರ ವಿದ್ಯಾರ್ಥಿವೇತನ ಯೋಜನೆಯ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನವನ್ನು ಎನ್.ಸಿ.ಎ.ಆರ್.ಇ ಗೆ ವಹಿಸಿದೆ ಎಂದು ಘೋಷಿಸಿರುವರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries