ಲಖನೌ: ಜ್ಞಾನವಾಪಿ ಮಸೀದಿ ಆವರಣವನ್ನು ಸಂಪೂರ್ಣವಾಗಿ ಮುಚ್ಚಲು ಹಾಗೂ ಹಿಂದೂಯೇತರರಿಗೆ ಈ ಆವರಣದಲ್ಲಿ ಪ್ರವೇಶ ನಿಷೇಧ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಅಲಹಾಬಾದ್ ಹೈಕೋರ್ಟ್ ಮಂಗಳವಾರ ವಜಾಗೊಳಿಸಿದೆ.
0
samarasasudhi
ಆಗಸ್ಟ್ 09, 2023
ಲಖನೌ: ಜ್ಞಾನವಾಪಿ ಮಸೀದಿ ಆವರಣವನ್ನು ಸಂಪೂರ್ಣವಾಗಿ ಮುಚ್ಚಲು ಹಾಗೂ ಹಿಂದೂಯೇತರರಿಗೆ ಈ ಆವರಣದಲ್ಲಿ ಪ್ರವೇಶ ನಿಷೇಧ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಅಲಹಾಬಾದ್ ಹೈಕೋರ್ಟ್ ಮಂಗಳವಾರ ವಜಾಗೊಳಿಸಿದೆ.
ಮುಖ್ಯ ನ್ಯಾಯಮೂರ್ತಿಗಳಾದ ಪ್ರೀತಿಂಕರ್ ದಿವಾಕರ್ ಮತ್ತು ನ್ಯಾಯಮೂರ್ತಿ ಆಶುತೋಷ್ ಶ್ರೀವಾಸ್ತವ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠವು ಪಿಐಎಲ್‌ನಲ್ಲಿ ಯಾವುದೇ ಹುರುಳಿಲ್ಲ ಎಂದು ಅರ್ಜಿಯನ್ನು ವಜಾಗೊಳಿಸಿತು.
ವಿಶ್ವ ವೈದಿಕ ಸನಾತನ ಸಂಘದ ಅಧ್ಯಕ್ಷ ಜಿತೇಂದ್ರ ಸಿಂಗ್ ವಿಸೇನ್ ಹಾಗೂ ಮತ್ತೊಬ್ಬರು ಪಿಐಎಲ್ ಸಲ್ಲಿಸಿದ್ದರು.
ಹಿಂದೂ ಅರ್ಜಿದಾರರು ಜ್ಞಾನವಾಪಿ ಮಸೀದಿಯ ಗೋಡೆಗಳ ಮೇಲಿರುವ ಹಿಂದೂ ದೇವತೆಗಳನ್ನು ಪೂಜಿಸಲು ಕೋರಿ ಸಲ್ಲಿಸಿರುವ ಶೃಂಗಾರ ಗೌರಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಹಾಗಾಗಿ, ಹಿಂದೂಯೇತರರಿಗೆ ಮಸೀದಿ ಆವರಣದಲ್ಲಿ ಪ್ರವೇಶ ನಿಷೇಧಿಸಬೇಕೆಂದು ಅರ್ಜಿದಾರರು ಪ್ರತಿಪಾದಿಸಿದ್ದರು.
ಈ ನಡುವೆ ಮಸೀದಿಯ ಸಂಕೀರ್ಣದೊಳಗೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ತಂಡವು ನಡೆಸುತ್ತಿರುವ ವೈಜ್ಞಾನಿಕ ಸಮೀಕ್ಷೆಯು ಮಂಗಳವಾರ ಆರನೇ ದಿನಕ್ಕೆ ಕಾಲಿಟ್ಟಿದೆ.