ನ್ಯೂ ತೆಹ್ರಿ: ಅಟಾಲಿ ಬಳಿ ಭಾರಿ ಭೂಕುಸಿತ ಉಂಟಾಗಿದ್ದರಿಂದ 19 ಗಂಟೆಗಳ ಕಾಲ ಬಂದ್ ಆಗಿದ್ದ ರಿಷಿಕೇಶ-ಬದರಿನಾಥ ಹೆದ್ದಾರಿ ಮಂಗಳವಾರ ಸಂಚಾರಕ್ಕೆ ಮುಕ್ತಗೊಂಡಿತು.
ಭೂಕುಸಿತದಿಂದ ಬಂದ್ ಆಗಿದ್ದ ರಿಷಿಕೇಶ-ಬದರಿನಾಥ ಹೆದ್ದಾರಿ ಸಂಚಾರಕ್ಕೆ ಮುಕ್ತ
0
ಆಗಸ್ಟ್ 09, 2023
Tags
0
samarasasudhi
ಆಗಸ್ಟ್ 09, 2023
ನ್ಯೂ ತೆಹ್ರಿ: ಅಟಾಲಿ ಬಳಿ ಭಾರಿ ಭೂಕುಸಿತ ಉಂಟಾಗಿದ್ದರಿಂದ 19 ಗಂಟೆಗಳ ಕಾಲ ಬಂದ್ ಆಗಿದ್ದ ರಿಷಿಕೇಶ-ಬದರಿನಾಥ ಹೆದ್ದಾರಿ ಮಂಗಳವಾರ ಸಂಚಾರಕ್ಕೆ ಮುಕ್ತಗೊಂಡಿತು.
ಸೋಮವಾರ ಸಂಜೆ 7 ಗಂಟೆಗೆ ಭೂಕುಸಿತ ಸಂಭವಿಸಿದ್ದು, ಹೆದ್ದಾರಿಯಲ್ಲಿ ಅನೇಕ ವಾಹನಗಳು ಸಾಲುಗಟ್ಟಿ ನಿಂತಿದ್ದವು.
ತೋಟಘಾಟಿ ಮತ್ತು ಸಿಂಗ್ಟೋಲಿಯಲ್ಲಿ ಮತ್ತೆ ಎರಡು ಭೂಕುಸಿತಗಳು ಸಂಭವಿಸಿವೆ ಎಂದು ನರೇಂದ್ರ ನಗರದ ಎಸ್‌ಡಿಎಂ ದೇವೇಂದ್ರ ನೇಗಿ ತಿಳಿಸಿದ್ದಾರೆ.
ನಿರ್ಮಾಣ ಸಂಸ್ಥೆಗಳು 17 ಗಂಟೆಗಳ ನಂತರ ರಸ್ತೆಯ ಅವಶೇಷಗಳನ್ನು ತೆರವುಗೊಳಿಸಿದವು. ಮಧ್ಯಾಹ್ನದ ನಂತರ ಲಘು ವಾಹನ ಮತ್ತು ಭಾರಿ ವಾಹನಗಳ ಸಂಚಾರಕ್ಕೆ ಸಂಚಾರಕ್ಕೆ ಮುಕ್ತಗೊಳಿಸಲಾಯಿತು.
ಸೋಮವಾರ ಸಂಜೆ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾದ ನಂತರ ತೆಹ್ರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಮಯೂರ್ ದೀಕ್ಷಿತ್ ಅವರು ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗಗಳನ್ನು ಸೂಚಿಸಿದರು. ಇದೀಗ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಸಹಜ ಸ್ಥಿತಿಗೆ ತಲುಪಿದ್ದು, ಮಳೆ ಮುಂದುವರಿದಿದೆ. ಪೊಲೀಸರು ಮತ್ತು ಎನ್‌ಎಚ್‌ಎಐ ಸಿಬ್ಬಂದಿಗಳಿಗೆ ನಿಗಾ ಇರಿಸಲು ತಿಳಿಸಲಾಗಿದೆ ಎಂದು ದೀಕ್ಷಿತ್ ಹೇಳಿದರು.