HEALTH TIPS

ಸ್ಕಾಟ್ಲೆಂಡ್ ನಲ್ಲಿ ಅಧ್ಯಯನ, ಹೈದರಾಬಾದ್ ನಲ್ಲಿ ಕೆಲಸ; ಶಬರಿಮಲೆ ಅಯ್ಯಪ್ಪನ ಕರೆಗೆ ಉದ್ಯೋಗಕ್ಕೆ ರಾಜೀನಾಮೆ ನೀಡಿ ಪರಂಪರೆಯ ದಾರಿಯಲ್ಲಿ ಕಂಠಾರರ್ ಬ್ರಹ್ಮದತ್ತ

           ಪತ್ತನಂತಿಟ್ಟ: ಶಬರಿಮಲೆಯಲ್ಲಿ ತಲೆಮಾರಿನ ಬದಲಾವಣೆಯ ಅಪರೂಪದ ನೋಟಗಳು ಇದೀಗ ಸುದ್ದಿಯಾಗುತ್ತಿದೆ. ಸನ್ನಿಧಿಯಲ್ಲಿ ಪೂಜೆಗಳನ್ನು ನಡೆಸಲು ದ್ಯಾಮಮಾನ್ ಮಠದ ಯುವ ಪೀಳಿಗೆಯ ಕಂಠಾರರ್ ಬ್ರಹ್ಮದತ್ತರು ಆಗಮಿಸಿ ಶಬರಿಮಲೆಯಲ್ಲಿ ತಾಂತ್ರಿಕ ವಿಧಿವಿಧಾನಗಳು ತಲೆಮಾರಿನ ಬದಲಾವಣೆಗೆ ಒಳಗಾಯಿತು. ಬ್ರಹ್ಮದತ್ತರು ಇತ್ತೀಚೆಗೆ ತಮ್ಮ ತಂದೆ ತಂತ್ರಿ ಕಂಠಾರರ್ ರಾಜೀವ್ ಅವರ ಸಲಹೆಯನ್ನು ಸ್ವೀಕರಿಸಿ ಖಾಸಗಿ ಕಂಪನಿಯ ಕೆಲಸಕ್ಕೆ ರಾಜೀನಾಮೆ ನೀಡಿ, ತಮ್ಮ ಪರಂಪರೆಯಂತೆ ಆರಾಧನಾ ಕ್ಷೇತ್ರಕ್ಕೆ ಮೀಸಲಿಡಲು ನಿರ್ಧರಿಸಿರುವರು.

               8 ವರ್ಷಗಳ ಹಿಂದೆ ಚೆಂಗನ್ನೂರು ಮಹಾದೇವ ದೇವಸ್ಥಾನದಲ್ಲಿ ಪೂಜೆ, ವಿಧಿವಿಧಾನಗಳನ್ನು ಪೂರೈಸಿದ್ದರು. ಆದ್ದರಿಂದ ಶಬರಿಮಲೆ ಸೇರಿದಂತೆ ಎಲ್ಲಾ ದೇವಾಲಯಗಳಲ್ಲಿ ತಾಂತ್ರಿಕ ಆಚರಣೆಗಳ ಉಸ್ತುವಾರಿ ವಹಿಸಿಕೊಳ್ಳಲು ಅರ್ಹತೆ ಪಡೆದಿರುವರು. 

           ಬ್ರಹ್ಮದತ್ತನ್ ಅವರು ತಮ್ಮ ಬಿ.ಬಿ.ಎ ಮತ್ತು ಎಲ್.ಎಲ್.ಬಿ. ಅಧ್ಯಯನವನ್ನು ಬೆಂಗಳೂರು ಕ್ರೈಸ್ಟ್ ಕಾಲೇಜಿನಲ್ಲಿ ಪೂರೈಸಿ ಕೊಟ್ಟಾಯಂ ಜಿಲ್ಲಾ ನ್ಯಾಯಾಲಯದಲ್ಲಿ ವಕೀಲರಾಗಿ ಅಭ್ಯಾಸ ಮಾಡಿದ್ದರು. ಬೆಂಗಳೂರಿನ ಖಾಸಗಿ ಸಲಹಾ ಕಂಪನಿಯೊಂದರಲ್ಲಿ ವಿಶ್ಲೇಷಕರಾಗಿ ಎರಡೂವರೆ ವರ್ಷ ಕೆಲಸ ಮಾಡಿದ್ದಾರೆ. ನಂತರ ಸ್ಕಾಟ್ಲೆಂಡ್‍ನಲ್ಲಿ ಎಲ್.ಎಲ್.ಎಂ. ಅಧ್ಯಯನ ನಡೆಸಿದರು. ಹಿಂದಿರುಗಿ ಹೈದರಾಬಾದಿನ ಕಂಪನಿಗೆ ಸೇರಿಕೊಂಡು ಅಲ್ಲಿ ಒಂದು ವರ್ಷದ ಸೇವೆಯ ಬಳಿಕ, ತಂದೆ ಕಂಠಾರರ್ ರಾಜೀವ್ ಅವರ ಸಲಹೆಯ ಮೇರೆಗೆ ಕೆಲಸಕ್ಕೆ ರಾಜೀನಾಮೆ ನೀಡಿದರು.

             ಅವರು ಶಬರಿಮಲೆ ಮತ್ತು ಏಟುಮನೂರಿನ ಕೊಡಿಮರ ಪ್ರತಿಷ್ಠೆಯಲ್ಲಿ  ತಮ್ಮ ತಂದೆಯೊಂದಿಗೆ ಸಹೋದ್ಯೋಗಿಯಾದರು. ಕರ್ಕಾಟಕಮಾಸದ ಪೂಜೆ ಮತ್ತು ನಿರಪುತ್ತÀರಿಗೆ ಶಬರಿಮಲೆ ಸನ್ನಿಧಾನಕ್ಕೆ ಬಂದ ಬ್ರಹ್ಮದತ್ತನಿಗೆ ತಂದೆ ಪ್ರತಿಯೊಂದು ಪೂಜೆಯ ವಿಧಿ-ವಿಶೇಷತೆಗಳನ್ನು ಹೇಳಿಕೊಟ್ಟರು.

          ನಿರಪುತ್ತÀರಿ ಪೂಜೆಯೊಂದಿಗೆ ತಂತ್ರಿ ಕಂಠಾರರ ರಾಜೀವ್ ಅವರು ಒಂದು ವರ್ಷದ ತಾಂತ್ರಿಕ ಕಾರ್ಯವನ್ನು ಮುಗಿಸಿ ಮಲೆಯಿಂದ ಕೆಳಗಿಳಿದರು. ಧಮಮಾನ್ ಮಠದ ತಿಳುವಳಿಕೆಯಂತೆ ಕಂಠಾರರ ಮಹೇಶ್ ಮೋಹನರ್ ಅವರು ಸಿಂಹಮಾಸ 1 ರಿಂದ ಒಂದು ವರ್ಷದವರೆಗೆ ಉಸ್ತುವಾರಿ ವಹಿಸಿದ್ದಾರೆ. ಒಂದು ವರ್ಷದ ನಂತರವೇ ಸಂಪೂರ್ಣ ಉಸ್ತುವಾರಿಯನ್ನು ಬ್ರಹ್ಮದತ್ತನಿಗೆ ಹಸ್ತಾಂತರಿಸಲಾಗುತ್ತದೆ. ಅದಕ್ಕಾಗಿ ಈಗಲೇ ತಯಾರಿ ಶುರುವಾಗಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries