HEALTH TIPS

ಸೂರ್ಯಗ್ರಹಣದ ಸೂತಕ ಕಾಲ ಯಾವಾಗ? ಎಲ್ಲೆಲ್ಲಿ ಕಾಣಿಸುತ್ತದೆ?

 ವರ್ಷದ ಎರಡನೇ ಮತ್ತು ಕೊನೆಯ ಸೂರ್ಯಗ್ರಹಣವು ಅಕ್ಟೋಬರ್ 14, ಶನಿವಾರದಂದು ಸಂಭವಿಸಲಿದೆ. ಈ ದಿನದಂದು ಸೂರ್ಯಗ್ರಹಣ ಸಂಭವಿಸುವುದನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಗ್ರಹಣದ ಸಮಯದಲ್ಲಿ ಅಥವಾ ನಂತರ ಪೂರ್ವಜರಿಗೆ ಶ್ರಾದ್ಧ ಅಥವಾ ತರ್ಪಣ ವಿಧಾನವನ್ನು ನಿರ್ವಹಿಸುವ ಮೂಲಕ ಪಿತ್ರಾ ದೋಷವು ಕೊನೆಗೊಳ್ಳುತ್ತದೆ ಎಂದು ನಂಬಲಾಗಿದೆ.

ಗ್ರಹಣ ಸಂಭವಿಸಿದಾಗ ಅದಕ್ಕೂ ಮೊದಲು ಸೂತಕ ಕಾಲ ಪ್ರಾರಂಭವಾಗಿ ಗ್ರಹಣ ಮುಗಿದ ನಂತರ ಸೂತಕ ಕಾಲ ಮುಗಿಯುತ್ತದೆ. ಅಷ್ಟಕ್ಕೂ ಗ್ರಹಣ ಯಾವ ಸಂದರ್ಭದಲ್ಲಿ ಸಂಭವಿಸುತ್ತದೆ? ಸೂತಕ ಅವಧಿ ಮತ್ತು ಎಲ್ಲಿಲ್ಲಿ ಗೋಚರವಾಗುತ್ತದೆ ಅನ್ನೋದನ್ನು ತಿಳಿಯೋಣ.

ಅಕ್ಟೋಬರ್ 14 ರಂದು ಸಂಭವಿಸಲಿರುವ ಸೂರ್ಯಗ್ರಹಣವನ್ನು ಕಂಕನಾಕೃತಿ ಸೂರ್ಯಗ್ರಹಣ ಎಂದು ಕರೆಯಲಾಗುವುದು. ಈ ಗ್ರಹಣವು ಕನ್ಯಾರಾಶಿ ಮತ್ತು ಚಿತ್ರ ನಕ್ಷತ್ರದಲ್ಲಿ ಅಶ್ವಿನಿ ಮಾಸದ ಅಮಾವಾಸ್ಯೆಯಂದು ಸಂಭವಿಸುತ್ತಿದೆ. ಅಕ್ಟೋಬರ್ 14ರ ರಾತ್ರಿ 8.34ಕ್ಕೆ ಸೂರ್ಯಗ್ರಹಣ ಆರಂಭವಾಗಲಿದ್ದು, ಅಕ್ಟೋಬರ್ 15ರ ಮಧ್ಯರಾತ್ರಿ 2 ಗಂಟೆಗೆ ಅಂತ್ಯವಾಗಲಿದೆ. ಒಟ್ಟು 25 ನಿಮಿಷಗಳಲ್ಲಿ ಕೊನೆಗೊಳ್ಳುತ್ತದೆ. ಸೂರ್ಯಗ್ರಹಣವು ಯಾವಾಗಲೂ ಅಮಾವಾಸ್ಯೆಯಂದು ಸಂಭವಿಸುತ್ತದೆ. ಮತ್ತು ಚಂದ್ರಗ್ರಹಣವು ಯಾವಾಗಲೂ ಹುಣ್ಣಿಮೆಯ ದಿನದಂದು ಸಂಭವಿಸುತ್ತದೆ. ಅಕ್ಟೋಬರ್ 14 ರಂದು ಸಂಭವಿಸುವ ಸೂರ್ಯಗ್ರಹಣವು ಭಾರತದಲ್ಲಿ ನಮಗೆ ಕಾಣಸಿಗೋದಿಲ್ಲ. ಆದ್ದರಿಂದ ಈ ಗ್ರಹಣದ ಸೂತಕ ಅವಧಿಯು ಮಾನ್ಯವಾಗಿಲ್ಲ.

ಸೂರ್ಯಗ್ರಹಣ ಎಷ್ಟು ಕಾಲ ಇರುತ್ತದೆ?

ಅಕ್ಟೋಬರ್ 14 ರಂದು ಸಂಭವಿಸಲಿರುವ ಸೂರ್ಯಗ್ರಹಣವನ್ನು ಕಂಕನಾಕೃತಿ ಸೂರ್ಯಗ್ರಹಣ ಎಂದು ಕರೆಯಲಾಗುವುದು. ಈ ಗ್ರಹಣವು ಕನ್ಯಾರಾಶಿ ಮತ್ತು ಚಿತ್ರ ನಕ್ಷತ್ರದಲ್ಲಿ ಅಶ್ವಿನಿ ಮಾಸದ ಅಮಾವಾಸ್ಯೆಯಂದು ಸಂಭವಿಸುತ್ತಿದೆ. ಅಕ್ಟೋಬರ್ 14ರ ರಾತ್ರಿ 8.34ಕ್ಕೆ ಸೂರ್ಯಗ್ರಹಣ ಆರಂಭವಾಗಲಿದ್ದು, ಅಕ್ಟೋಬರ್ 15ರ ಮಧ್ಯರಾತ್ರಿ 2 ಗಂಟೆಗೆ ಅಂತ್ಯವಾಗಲಿದೆ. ಒಟ್ಟು 25 ನಿಮಿಷಗಳಲ್ಲಿ ಕೊನೆಗೊಳ್ಳುತ್ತದೆ.

ಸೂರ್ಯಗ್ರಹಣವು ಯಾವಾಗಲೂ ಅಮಾವಾಸ್ಯೆಯಂದು ಸಂಭವಿಸುತ್ತದೆ. ಮತ್ತು ಚಂದ್ರಗ್ರಹಣವು ಯಾವಾಗಲೂ ಹುಣ್ಣಿಮೆಯ ದಿನದಂದು ಸಂಭವಿಸುತ್ತದೆ. ಅಕ್ಟೋಬರ್ 14 ರಂದು ಸಂಭವಿಸುವ ಸೂರ್ಯಗ್ರಹಣವು ಭಾರತದಲ್ಲಿ ನಮಗೆ ಕಾಣಸಿಗೋದಿಲ್ಲ. ಆದ್ದರಿಂದ ಈ ಗ್ರಹಣದ ಸೂತಕ ಅವಧಿಯು ಮಾನ್ಯವಾಗಿಲ್ಲ.

ಸೂರ್ಯಗ್ರಹಣ ಎಲ್ಲೆಲ್ಲಿ ಕಾಣಿಸುತ್ತದೆ?

ಚಂದ್ರನು ಸೂರ್ಯ ಮತ್ತು ಭೂಮಿಯ ನಡುವೆ ಹಾದುಹೋದಾಗ ಅದನ್ನು ಸೂರ್ಯಗ್ರಹಣ ಎಂದು ಕರೆಯಲಾಗುತ್ತದೆ. ಮತ್ತೊಂದೆಡೆ ಚಂದ್ರನು ಭೂಮಿಯ ನೆರಳಿನ ಮೂಲಕ ಹಾದುಹೋದಾಗ ಅದು ಕತ್ತಲೆಯಾಗುತ್ತದೆ. ಅಂದರೆ ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಬಂದಾಗ ಮತ್ತು ಎಲ್ಲಾ ಮೂರು ಗ್ರಹಗಳು ನೇರ ರೇಖೆಯಲ್ಲಿದ್ದರೆ ಈ ಘಟನೆಯನ್ನು ಚಂದ್ರಗ್ರಹಣ ಎಂದು ಕರೆಯಲಾಗುತ್ತದೆ.

ವರ್ಷದ ಎರಡನೇ ಸೂರ್ಯಗ್ರಹಣವು ಉತ್ತರ ಅಮೆರಿಕಾ, ಅರ್ಜೆಂಟೀನಾ, ಕೆನಡಾ, ಮೆಕ್ಸಿಕೋ, ಹೈಟಿ, ಬ್ರಿಟಿಷ್ ವರ್ಜಿನ್ ದ್ವೀಪಗಳು, ಬ್ರೆಜಿಲ್, ಕೊಲಂಬಿಯಾ, ಬಹಾಮಾಸ್, ಆಂಟಿಗುವಾ, ಕ್ಯೂಬಾ, ಬಾರ್ಬಡೋಸ್, ಪೆರು, ಉರುಗ್ವೆ, ಡೊಮಿನಿಕನ್, ವೆನೆಜುವೆಲಾ, ಜಮೈಕಾ, ಪರಾಗ್ವೆ, ಗ್ವಾಟೆಮಾಲಾ ಇತ್ಯಾದಿ ಪ್ರದೇಶಗಳಲ್ಲಿ ಕಾಣ ಸಿಗುತ್ತದೆ.

ಸೂರ್ಯಗ್ರಹಣದ ಸೂತಕ ಅವಧಿ!

ಸೂತಕ ಕಾಲವು ಸೂರ್ಯಗ್ರಹಣಕ್ಕೆ 12 ಗಂಟೆಗಳ ಮೊದಲು ಪ್ರಾರಂಭವಾಗುತ್ತದೆ. ಮತ್ತು ಸೂತಕ ಅವಧಿಯು ಗ್ರಹಣದ ಅಂತ್ಯದಲ್ಲಿ ಕೊನೆಗೊಳ್ಳುತ್ತದೆ. ಆದರೆ ಭಾರತದಲ್ಲಿ ಈ ಗ್ರಹಣ ಗೋಚರವಾಗದಿದ್ದರೆ ಇಲ್ಲಿ ಸೂತಕದ ಕಾಲ ಮಾನ್ಯವಾಗುವುದಿಲ್ಲ. ಅಮವಾಸ್ಯೆ ತಿಥಿಯಂದು ಮಾಡುವ ಕೆಲಸವನ್ನು ನಿರ್ಭಯವಾಗಿ ಮಾಡಬಹುದು.

ಆದರೆ ಸೂತಕ ಕಾಲದಲ್ಲಿ ಯಾವುದೇ ಶುಭ ಕಾರ್ಯವನ್ನು ಮಾಡುವಂತಿಲ್ಲ. ಯಾವುದೇ ಆಹಾರವನ್ನು ಈ ಸಂದರ್ಭದಲ್ಲಿ ತಯಾರಿಸುವಂತಿಲ್ಲ. ದೇವರ ಪೂಜೆಯ ಜೊತೆಗೆ ದೇವರ ಚಿತ್ರ ಅಥವಾ ವಿಗ್ರಹವನ್ನು ಮುಟ್ಟುವುದಿಲ್ಲ. ಸೂತಕ ಕಾಲದಿಂದಲೇ ದೇವಾಲಯಗಳ ಬಾಗಿಲು ಮುಚ್ಚಿರುತ್ತದೆ.

ಇನ್ನೂ ಗ್ರಹಣ ಮುಗಿದ ತಕ್ಷಣವೇ ಗಂಗಾಜಲದಿಂದ ತೊಳೆದು ದೇವಾಲಯದ ಬಾಗಿಲು ತೆರೆಯಲಾಗುತ್ತದೆ. ಸೂತಕ ಮತ್ತು ಗ್ರಹಣದ ಸಮಯದಲ್ಲಿ ಮಾನಸಿಕವಾಗಿ ಪಠಣಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ಈ ಸಮಯದಲ್ಲಿ ಮಂತ್ರಗಳನ್ನು ಪಠಿಸುವುದು ಮತ್ತು ಹರಿನಾಮ ಕೀರ್ತಿಯನ್ನು ಹಾಡುವುದು ವಿಶೇಷವಾಗಿ ಫಲಪ್ರದವೆಂದು ಪರಿಗಣಿಸಲಾಗಿದೆ.


Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries