ಕಾಸರಗೋಡು : ಭಾರತೀಯ ವಕೀಲರ ಪರಿಷತ್ ಕೇರಳ ಘಟಕದ ಆಶ್ರಯದಲ್ಲಿ, ಕೋಝಿಕೋಡ್, ವಯನಾಡು, ಕಣ್ಣೂರು, ಕಾಸರಗೋಡು ಜಿಲ್ಲೆ ಒಳಗೊಂಡ ವಲಯ ಅಧ್ಯಯನ ಶಿಬಿರ ಮತ್ತು ಕಾರ್ಯಾಗಾರ ಜರುಗಿತು.
ಕಾಸರಗೋಡು ಟೌನ್ ಕೋ-ಆಪರೇಟಿವ್ ಬ್ಯಾಂಕ್ ಸಭಾಂಗಣದಲ್ಲಿ ವಕೀಲರ ಪರಿಷತ್ ರಾಷ್ಟ್ರೀಯ ಉಪಾಧ್ಯಕ್ಷ ವಕೀಲ ಆರ್.ರಾಜೇಂದ್ರನ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಭಾರತೀಯ ವಕೀಲರ ಪರಿಷತ್ತಿನ ಜಿಲ್ಲಾಧ್ಯಕ್ಷ ಎ.ಸಿ.ಅಶೋಕ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಭಾರತ ಸರ್ಕಾರದ ಎನ್.ಎಲ್.ಎ ಪಬ್ಲಿಕ್ ಪ್ರಾಸಿಕ್ಯೂಟರ್, ವಕೀಲ ಅಜಿತ್ ಶಾಸ್ತಮಂಗಲಂ, ಕಾಸರಗೋಡು ಪೆÇೀಕ್ಸೋ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಸಿ.ದೀಪು ತರಗತಿ ನಡೆಸಿದರು. ಪರಿಷತ್ ಕಣ್ಣೂರು ಜಿಲ್ಲಾಧ್ಯಕ್ಷ ಪ್ರತೀಶ್, ನ್ಯಾವಕೀಲ ಎಂ.ಕೆ.ರಂಜಿತ್, ಕಾರ್ಯದರ್ಶಿ ವಕೀಲ ಪಿ.ಪಿ.ಸಂದೀಪ್ ಕುಮಾರ್, ವಯನಾಡು ಜಿಲ್ಲಾ ಕಾರ್ಯದರ್ಶಿ ವಕೀಲ ಕೆ.ಎಸ್.ರಂಜಿತ್, ರಾಜ್ಯ ಉಪಾಧ್ಯಕ್ಷ ಬಿ.ರವೀಂದ್ರನ್, ರಾಷ್ಟ್ರೀಯ ಪರಿಷತ್ ಸದಸ್ಯ ವಿ.ಎನ್.ರಾಜೀವನ್ ಉಪಸ್ಥಿತರಿದ್ದರು. ಭಾರತೀಯ ವಕೀಲರ ಪರಿಷತ್ ರಾಜ್ಯ ಸಮಿತಿ ಸದಸ್ಯ ವಕೀಲ ಕೆ.ಕರುಣಾಕರನ್ ನಂಬಿಯಾರ್ ಸ್ವಾಗತಿಸಿದರು. ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಪಿ.ಮುರಳೀಧರನ್ ವಂದಿಸಿದರು.




